Categories
ಕ್ರಿಕೆಟ್

ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡಕ್ಕೆ ಎಷ್ಟು ಹಣ ಸಿಕ್ತು?

ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡಕ್ಕೆ ಎಷ್ಟು ಹಣ ಸಿಕ್ತು?
– 46.5 ಕೋಟಿ ಬಹುಮಾನದ ಮೊತ್ತ ಪಡೆದ ಕೋಲ್ಕೊತ್ತಾ ತಂಡ
– ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6.50 ಕೋಟಿ
– ಯಾವ ತಂಡಕ್ಕೆ ಎಷ್ಟು ಹಣ?.. ಈವರೆಗೆ ಗೆದ್ದಿದ್ದು ಯಾರು ಯಾರು?

NAMMUR EXPRESS NEWS
ಸಮರ್ಥ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 2024ರ ಆವೃತ್ತಿಯ ಟ್ರೋಫಿ ಗೆದ್ದಿದೆ. ಫೈನಲ್​ ಪಂದ್ಯದಲ್ಲಿ ಎದುರಾಳಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಹಿಂದೆ 2012 ಹಾಗೂ 2104ರಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಈ ತಂಡ ಚಾಂಪಿಯನ್ ಆಗಿತ್ತು. ಇದೀಗ ಅವರದ್ದೇ ಕೋಚಿಂಗ್​ನಲ್ಲಿ ತಂಡ ಟ್ರೋಫಿ ಗೆದ್ದಿರುವುದು ವಿಶೇಷ ಎನಿಸಿದೆ. ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳ ಬಳಿಕ (ಐದು ಬಾರಿ ಚಾಂಪಿಯನ್ ಪಟ್ಟ) ಐಪಿಎಲ್​ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ ಕೆಕೆಆರ್​​.

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್ ತಂಡ 18.3 ಓವರ್​ಗಳಲ್ಲಿ 114 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್ ತಂಡ 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ. 114 ರನ್ ಬಾರಿಸಿ ಸುಲಭ ಗೆಲವು ತನ್ನದಾಗಿಸಿಕೊಂಡಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್​ (52) ರನ್​ ಬಾರಿಸಿ ಗೆಲುವಿಗೆ ಕೊಡುಗೆ ಕೊಟ್ಟರು.ಆರಂಭಿಕ ಬ್ಯಾಟರ್​ ರಹ್ಮನುಲ್ಲಾ ಗುರ್ಬಜ್​ 39 ರನ್ ಬಾರಿಸಿದರು. ಈ ಕೆಳಗೆ ಚಾಂಪಿಯನ್ ತಂಡ ಹಾಗೂ ಪ್ಲೇಆಫ್​ಗೇರಿದ ಇತರ ತಂಡಗಳು ಗೆದ್ದ ಬಹುಮಾನ ಮೊತ್ತದ ವಿವರ ನೀಡಲಾಗಿದೆ.

46.5 ಕೋಟಿ ಬಹುಮಾನದ ಮೊತ್ತ!

ಐಪಿಎಲ್​ 2024ರ ಒಟ್ಟು ಬಹುಮಾನದ ಮೊತ್ತ 46.5 ಕೋಟಿ ರೂಪಾಯಿ. ಮಾರ್ಚ್​ 22ರಿಂದ ಆರಂಭವಾದ ಐಪಿಎಲ್​ ಮೆಗಾ ಟೂರ್ನಿ, 65 ದಿನಗಳ ಕಾಲ ನಂತರ ಅಂದರೆ ಮೇ 26ರ ಭಾನುವಾರಕ್ಕೆ ಅಂತ್ಯವಾಗಿದೆ. ಫೈನಲ್​​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 20 ಕೋಟಿ ಸಿಗಲಿದೆ. ಅಂತೆಯೇ ಫೈನಲ್‌ನಲ್ಲಿ ಸೋತು 2ನೇ ಸ್ಥಾನ ಪಡೆದ ಸನ್​ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರೂಪಾಯಿ ಜೇಬಿಗಿಳಿಸಿದೆ. 3ನೇ ಸ್ಥಾನ ಪಡೆದ ರಾಜಸ್ಥಾನ್ ರಾಯಲ್ಸ್​ ತಂಡ 7 ಕೋಟಿ ರೂಪಾಯಿ ದೊರಕಿದೆ. ಇನ್ನು 4ನೇ ಸ್ಥಾನ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.50 ಕೋಟಿ ಪಡೆದಿದೆ.

ಐಪಿಎಲ್​ ಗೆದ್ದ ತಂಡಗಳು!

ಮುಂಬೈ ಇಂಡಿಯನ್ಸ್​​ ಐದು ಬಾರಿ ಚಾಂಪಿಯನ್​ (2013, 2015, 2017, 2019, 2020)
ಚೆನ್ನೈ ಸೂಪರ್ ಕಿಂಗ್ಸ್​ ನಾಲ್ಕು ಬಾರಿ ಚಾಂಪಿಯನ್​ (2010, 2011, 2018, 2021, 2023)
ಕೋಲ್ಕತ್ತಾ ನೈಟ್​ ರೈಡರ್ಸ್​ 3 ಬಾರಿ ಚಾಂಪಿಯನ್​ (2012, 2014, 2024)
ರಾಜಸ್ಥಾನ​ ರಾಯಲ್ಸ್​​​ ಒಂದು ಬಾರಿ ಚಾಂಪಿಯನ್​ (2008)
ಡೆಕ್ಕನ್​ ಚಾರ್ಜರ್ಸ್​​ ಒಂದು ಬಾರಿ ಚಾಂಪಿಯನ್​ (2009)
ಸನ್​​ರೈಸರ್ಸ್​ ಹೈದರಾಬಾದ್​ ಒಂದು ಬಾರಿ ಚಾಂಪಿಯನ್​ (2016)
ಗುಜರಾತ್​ ಟೈಟಾನ್ಸ್​ ಒಂದು ಬಾರಿ ಚಾಂಪಿಯನ್​ (2022)

ಐಪಿಎಲ್ ಅಲ್ಲಿ ಪ್ರಶಸ್ತಿ ಗೆಲ್ಲದ ತಂಡಗಳು:

ರಾಯಲ್​ ಚಾಲೆಂಜರ್ಸ್ ಬೆಂಗಳೂರು (3 ಬಾರಿ ರನ್ನರ್​ಅಪ್​)
ಪಂಜಾಬ್​ ಕಿಂಗ್ಸ್​ (1 ಬಾರಿ ರನ್ನರ್​​ಅಪ್​)
ಡೆಲ್ಲಿ ಕ್ಯಾಪಿಟಲ್ಸ್​ (1 ಬಾರಿ ರನ್ನರ್​ಅಪ್​​)
ಲಕ್ನೋ ಸೂಪರ್ ಜೈಂಟ್ಸ್​​​ (ಎಲಿಮಿನೇಟರ್​​ ಹಂತ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.