Categories
ದಾವಣಗೆರೆ ರಾಜ್ಯ

ದಾವಣಗೆರೆ, ಚಿತ್ರದುರ್ಗದಲ್ಲಿ ನಮ್ಮೂರ್ ಎಕ್ಸ್ ಪ್ರೆಸ್!

ದಾವಣಗೆರೆ, ಚಿತ್ರದುರ್ಗದಲ್ಲಿ ನಮ್ಮೂರ್ ಎಕ್ಸ್ ಪ್ರೆಸ್!
– ಮಧ್ಯ ಕರ್ನಾಟಕದಲ್ಲಿ ಮಾಧ್ಯಮದ ಪಯಣ ಆರಂಭ
– ಮಧ್ಯ ಕರ್ನಾಟಕದ ಓದುಗರಿಂದ ಮೆಚ್ಚುಗೆ: ಸಂಭ್ರಮದ ಸ್ವಾಗತ

NAMMUR EXPRESS NEWS
ದಾವಣಗೆರೆ: ಕರ್ನಾಟಕದ ಕ್ರಿಯಾಶೀಲ ಮಾಧ್ಯಮ ನಮ್ಮೂರ್ ಎಕ್ಸ್ ಪ್ರೆಸ್ ಇದೀಗ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಭಾಗದಲ್ಲೂ ಕೂಡ ತನ್ನ ಸೇವೆಯನ್ನು ಶುರುಮಾಡಿದೆ. ದಾವಣಗೆರೆಯಲ್ಲಿ ದಾವಣಗೆರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ನಾಗರಾಜ್ ದಾಸ್ ಅವರು ಪ್ರಚಾರವನ್ನು ಮಾಡಿದರು. ಮಧ್ಯ ಕರ್ನಾಟಕ ಭಾಗದ ಓದುಗರು ಕೂಡ ನಮ್ಮೂರ್ ಎಕ್ಸ್ಪ್ರೆಸ್ ಸಂಸ್ಥೆಗಳ ಸುದ್ದಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ವಿಶೇಷ ಸಂಚಿಕೆ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ವೇಳೆ ಅನ್ವೇಕರ್ ಡಿಜಿಟಲ್ ಕಮ್ಯುನಿಕೇಷನ್ ಪ್ರಮುಖರಾದ ಅಮುಲ್ ಜಿ ಅನ್ವೇಕರ್, ವಿಕಾಸ್ ಮೊಬೈಲ್ಸ್ ಸಂಸ್ಥೆಯ ವಿನಯ್ ಗೌಡ ಹಾಗೂ ಸಿಬ್ಬಂದಿ ಹಾಜರಿದ್ದರು. ದಾವಣಗೆರೆ, ಚಿತ್ರದುರ್ಗ, ಹಾವೇರಿ, ವಿಜಯನಗರ, ಬಳ್ಳಾರಿ, ಹಾಗೂ ಕೊಪ್ಪಳ ಜಿಲ್ಲೆಗಳ ಪ್ರತಿನಿಧಿಗಳು ದಾವಣಗೆರೆ ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.