ಸಾರ್ವಕಾಲಿಕ ದಾಖಲೆ ಬರೆದ ಚಿನ್ನ..!!
– ಮತ್ತೆ 1 ಲಕ್ಷ ರು. ಗಡಿ ದಾಟಿದ ಚಿನ್ನದ ದರ..!!
– ಒಂದೇ ದಿನ 1050 ರು. ಏರಿಕೆ, ಬೆಳ್ಳಿಯ ಬೆಲೆ ಕೂಡ ಹೆಚ್ಚಳ
NAMMUR EXPRESS NEWS
ನವದೆಹಲಿ: ಲಕ್ಷದ ಗಡಿ ದಾಟಿ, ಬಳಿಕ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರ ಇದೀಗ ಮತ್ತೆ ಲಕ್ಷದ ಗಡಿ ದಾಟಿ ದಾಖಲೆ ಬರೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 1,00,750 ರೂ. ಗೆ ತಲುಪಿದೆ. ಪೆಹಲ್ಗಾಂ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ದರ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಅಖಿಲ ಭಾರತೀಯ ಸರಾಫ್ ಅಸೋಸಿಯೇಷನ್ ಪ್ರಕಾರ 99.5 ಶುದ್ದತೆಯ ಚಿನ್ನ ಬುಧವಾರ ಒಂದೇ ದಿನ ಒಂದು ಸಾವಿರ ರು. ಏರಿಕೆ ಕಂಡು 1,00,750 ರು.ಗೆ ತಲುಪಿದೆ. ಮಂಗಳವಾರ ಈ ದರ 99, 750 ರು. ಇತ್ತು. ಇನ್ನು 99.5 ಶುದ್ಧತೆ ಚಿನ್ನವೂ ಹೆಚ್ಚಳ ವಾಗಿದ್ದು, 1050 ರು. ಏರಿಕೆ ಕಂಡು 1,00,350 ರೂ ತಲುಪಿದೆ. ಹಿಂದಿನ ದಿನ 99,300 ರೂ. ನಷ್ಠಿದೆ.
ಇದರ ಜೊತೆಗೆ ಬೆಳ್ಳಿ ದರವೂ ಬುಧವಾರ ಹೆಚ್ಚಳವಾಗಿದ್ದು ಪ್ರತಿ ಕೇಜಿಗೆ 440 ರು. ಏರಿಕೆಯಾಗಿ 98,940 ರು.ಗೆ ತಲುಪಿದೆ. ಮಂಗಳವಾರ 98,500 ರು. ಇತ್ತು ಏ.22 ರಂದು ಚಿನ್ನದ ದರ ಒಂದೇ ದಿನ 10 ಗ್ರಾಂಗೆ 1800 ರು. ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 1,01,600 ರು.ಗೆ ತಲುಪಿ ದಾಖಲೆ ಬರೆದಿತ್ತು.