ಪಾಕ್ ವಿರುದ್ಧ ಭಾರತ ಸಮರಕ್ಕೆ ಸಜ್ಜು..!
– ಪಾಕ್ ಮೇಲೆ ಮಿಲಿಟರಿ ದಾಳಿ ಸುಳಿವು: ಮಾತುಕತೆ
– ಇಸ್ರೇಲ್ ಸೇರಿ ಎಲ್ಲಾ ದೇಶಗಳ ಸಹಕಾರ ಕೋರಿದ ಭಾರತ
NAMMUR EXPRESS NEWS
ನವ ದೆಹಲಿ: ಜಮ್ಮು ಕಾಶ್ಮೀರದ ಪಹಲ್ಲಾಮ್ ಪ್ರಾಂತ್ಯದಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಉಗ್ರರ ದಾಳಿಯಲ್ಲಿ 27 ಜನ ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ.
ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸೇರಿ 27 ಜನ ಮೃತಪಟ್ಟಿದ್ದು, 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಲಾಮ್ ಪ್ರಾಂತ್ಯದಲ್ಲಿ ಈ ಭೀಕರ ದಾಳಿ ನಡೆದಿದ್ದು, ಹಿಂದೂಗಳನ್ನೇ ಹುಡುಕಿ ಹುಡುಕಿ ಹತ್ಯೆ ನಡೆಸಿದ್ದು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡುಹಾರಿಸಲಾಗಿರುವುದು ಇಡೀ ದೇಶದ ಆಕ್ರೋಶ ಹೆಚ್ಚಿಸಿದೆ. ಇದೀಗ ಪ್ರಧಾನಿ ಮೋದಿ ಪಾಕ್ ವಿರುದ್ಧ ಸಮರಕ್ಕೆ ಸಿದ್ಧತೆ ನಡೆಸಿದ್ದಾರೆ.
ಉಗ್ರರ ಈ ಪೈಶಾಚಿಕ ಕೃತ್ಯವನ್ನು ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ತೆರಳಲಿದ್ದು ಪರಿಸ್ಥಿಯ ಅವಲೋಕನ ನಡೆಸಲಿದ್ದಾರೆ.
ದಾಳಿಕೋರರರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದಾಳಿಕೋರರನ್ನು ಸುಮ್ಮನೆ ಬಿಡುದಿಲ್ಲ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ವಿದೇಶಾಂಗ ಸಚಿವರು ಎಲ್ಲಾ ದೇಶಗಳ ರಾಯಭಾರಿಗಳೊಡನೆ ಸಭೆ ನಡೆಸಿ ಉಗ್ರರ ಕೃತ್ಯದ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೇಳಿದ್ದಾರೆ
ರಾಷ್ಟ್ರಪತಿಯನ್ನು ಭೇಟಿ ಮಾಡಿದ ಗೃಹ ಸಚಿವ ಮತ್ತು ವಿದೇಶಾಂಗ ಸಚಿವ
ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ವಿದೇಶಾಂಗ ಸಚಿವ ಎಸ್.ಜೈಶಂಕರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ತುರ್ತಾಗಿ ಭೇಟಿ ಮಾಡಿದ್ದಾರೆ. ಈ ಭೇಟಿಯು ಭಾರತ ಪಾಕ್ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಆದೇಶ ಬರಬಹುದೆಂಬ ಕುತೂಹಲ ಮೂಡಿದೆ. ಗುರುವಾರ ಇಸ್ರೇಲ್ ಪ್ರಧಾನಿ ನೇತ್ಯಾಹು ಭಾರತದ ಪ್ರಧಾನಿ ಮೋದಿಗೆ ಕರೆ ಮಾಡಿ ಚರ್ಚಿಸಿದ್ದಾರೆ,ಈ ವೇಳೆ ಭಾರತ ಪಾಕ್ ಮೇಲೆ ಯಾವುದೇ ದಾಳಿ ಮಾಡಿದರೂ ಭಾರತಕ್ಕೆ ಇಸ್ರೇಲ್ ಸಂಪೂರ್ಣ ಬೆಂಬಲ ಘೋಷಿಸಿದೆ ಎನ್ನಲಾಗುತ್ತಿದೆ.ಈಗ ಜಗತ್ತಿನ ಎಲ್ಲಾ ದೇಶಗಳು ಭಾರತದ ನಿಲುವನ್ನು ಎದುರು ನೋಡುತ್ತಿವೆ.
ಪ್ರವಾಸಿಗರಿಗೆ ಅವಕಾಶ ಇರಲಿಲ್ಲ!
ಭಯೋತ್ಪಾದಕ ದಾಳಿ ನಡೆದ ಪ್ರದೇಶವನ್ನು ಪ್ರವಾಸಿಗರಿಗೆ ಮುಚ್ಚಲಾಗಿತ್ತು.ಆದರೆ ಟೂರ್ ಆಪರೇಟರ್ ಭದ್ರತಾ ಪಡೆಗಳಿಗೆ ತಿಳಿಸದೆ ಅವರನ್ನು ಅಲ್ಲಿಗೆ ಕರೆದೊಯ್ದರು. ಗುಪ್ತಚರ ಬ್ಯೂರೋದ ವಿವರಣೆ ಲಭ್ಯವಾಗಿದೆ.