Categories
ಡೆಲ್ಲಿ

ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ !!

ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ !!

* ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸಗೊಳಿಸಿದ್ದೇವೆ
* ಆಪರೇಷನ್ ಸಿಂಧೂರ್ ಇಲ್ಲಿಗೆ ನಿಲ್ಲಲ್ಲ

NAMMMUR EXPRESS NEWS
ನವದೆಹಲಿ : ಪಹಲ್ಗಾಮ್ ಉಗ್ರರ ದಾಳಿ ಮತ್ತು ಭಾರತದ ಮಿಲಿಟರಿ ಪಡೆಗಳ ಆಪರೇಷನ್ ಸಿಂಧೂರ್ ನಂತರ, ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ನಿರೀಕ್ಷೆಯಂತೆ, ಪಾಕಿಸ್ತಾನಕ್ಕೆ ಮತ್ತು ಆ ನೆಲದ ಭಯೋತ್ಪಾದನಾ ಚಟುವಟಿಕೆಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ತಮ್ಮ ಟ್ವೀಟ್ ನಲ್ಲಿ, ಕದನ ವಿರಾಮಕ್ಕೆ ತಮ್ಮ ಬೆನ್ನನ್ನು ತಾನೇ ತಟ್ಟಿಕೊಂಡಿದ್ದರು. ತಮ್ಮಿಂದಾಗಿಯೇ ಎರಡು ದೇಶಗಳ ನಡುವೆ ಮಿಲಿಟರಿ ಚಟುವಟಿಕೆಗಳು ನಿಲ್ಲುವಂತಾಗಿದ್ದದ್ದು ಎಂದು ಹೊಗಳಿಕೊಂಡಿದ್ದರು. ಆದರೆ, ಮೋದಿ ಎಲ್ಲೂ ತಮ್ಮ ಭಾಷಣದಲ್ಲಿ ಇದರ ಬಗ್ಗೆ ಒಂದು ಸಾಲು ಏನೂ ಹೇಳಲಿಲ್ಲ. ಆ ಮೂಲಕ, ಅಮೆರಿಕಾಗೆ ಏನು ಸಂದೇಶ ಹೋಗಬೇಕೋ ಅದನ್ನು ಕೊಟ್ಟಿದ್ದಾರೆ.
ತಮ್ಮ ಭಾಷಣದಲ್ಲಿ, ಭೀತಿಯಿಂದ ಪಾಕಿಸ್ತಾನವೇ ಮೊದಲು ಭಾರತದ ಕದವನ್ನು ತಟ್ಟಿದ್ದು ಎಂದು ಹೇಳಿದ ಮೋದಿ, ಆಪರೇಷನ್ ಸಿಂಧೂರ ಇಲ್ಲಿಗೇ ನಿಂತಿಲ್ಲ ಎನ್ನುವ ಮೆಸೇಜ್ ಅನ್ನು ನೀಡಿದರು. ನಮ್ಮ ಮಿಲಿಟರಿ ಪಡೆಗಳು ಹತ್ಯೆಗೈದ ಉಗ್ರರ ಶವಸಂಸ್ಕಾರದಲ್ಲಿ ಪಾಕಿಸ್ತಾನದ ಅಧಿಕಾರಿಗಳು ಭಾಗವಹಿಸಿದ್ದರು. ಪಾಕಿಸ್ತಾನದ ಡಬಲ್ ಸ್ಟ್ಯಾಂಡರ್ಡ್ ಗೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕೇ ಎಂದು ಮೋದಿ ಹೇಳಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.