Categories
ಚಿನ್ನದ ದರ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್..!

ಆಭರಣ ಪ್ರಿಯರಿಗೆ ಗುಡ್ ನ್ಯೂಸ್..!

– ಚಿನ್ನದ ಬೆಲೆ ದಿಡೀರ್ ಇಳಿಕೆ!
– 6,300 ರೂಪಾಯಿ ಕುಸಿತ! ಈಗ ಬೆಲೆ ಎಷ್ಟು?

NAMMUR EXPRESS NEWS
ಚಿನ್ನದ ಬೆಲೆ ಮತ್ತೊಮ್ಮೆ ಕುಸಿದು ಬೀಳುತ್ತಿದ್ದು, ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಮಹಿಳೆಯರು ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡಲು ಕಾಯುತ್ತಿದ್ದ ಹುಡುಗರಿಗೆ ಈ ಮೂಲಕ ಭರ್ಜರಿ ಸುದ್ದಿ ಸಿಕ್ಕಿದೆ. ಒಂದೇ ದಿನ ಚಿನ್ನದ ಬೆಲೆಯು ಬರೋಬ್ಬರಿ 6,300 ರೂಪಾಯಿ ಕುಸಿತ ಕಾಣುವ ಮೂಲಕ ಚಿನ್ನ ಕೊಳ್ಳಲು ಒಳ್ಳೆಯ ವೇದಿಕೆ ಒದಗಿಸಿದೆ. ಹಾಗಾದ್ರೆ ಇಂದು ಎಷ್ಟಿದೆ ಈ ಚಿನ್ನದ ಬೆಲೆ? ಬನ್ನಿ ಆ ಕುರಿತು ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.
ಚಿನ್ನದ ಬೆಲೆ ಭಾರಿ ಏರಿಕೆ ಇದೆ ಅಂತಾ ಚಿಂತೆ ಮಾಡುತ್ತಿದ್ದ ಜನರಿಗೆ ಭರ್ಜರಿ ಸುದ್ದಿ ಸಿಕ್ಕಿದ್ದು ಚಿನ್ನದ ಬೆಲೆ ಇದೀಗ ಭಾರಿ ಇಳಿಕೆ ಕಂಡಿದೆ. ಅದು ಎಷ್ಟು ಅಂದ್ರೆ, ಒಂದೇ ದಿನ ಬರೋಬ್ಬರಿ 6,300 ರೂಪಾಯಿ ಚಿನ್ನದ ಬೆಲೆ ಕುಸಿತ ಕಂಡಿದೆ. ಏಪ್ರಿಲ್ & ಮೇ ತಿಂಗಳಲ್ಲಿ ಚಿನ್ನದ ಬೆಲೆ ಏರಿಳಿತವನ್ನ ಕಂಡಿತ್ತು. ಆದರೆ ಈಗ ಅಂದರೆ ಜೂನ್ ತಿಂಗಳಲ್ಲಿ ಚಿನ್ನದ ಬೆಲೆ ಭಾರಿ ಕುಸಿತ ಕಾಣುತ್ತಿದ್ದು, ಕಳೆದ ಹಲವು ದಿನಗಳಿಂದ ನಿರಂತರವಾಗಿ ಇಳಿಕೆ ಕಂಡಿದೆ. ಹಾಗಾದ್ರೆ ಇದೀಗ ಚಿನ್ನದ ಬೆಲೆ, ಬೆಂಗಳೂರು ಸೇರಿದಂತೆ ಯಾವ ಯಾವ ಜಾಗದಲ್ಲಿ ಎಷ್ಟಿದೆ? ಮುಂದೆ ಓದಿ.

ಚಿನ್ನದ ಬೆಲೆ ಈಗ ಎಷ್ಟು?

22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 5,780 ರೂಪಾಯಿ ಕುಸಿತ ಕಂಡಿದೆ. ಇನ್ನುಳಿದಂತೆ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 578 ರೂಪಾಯಿ ಕಡಿತವಾಗಿದ್ದು. ಆಭರಣ ಚಿನ್ನದ ಬೆಲೆ ಕುಸಿತದ ನಂತರ 10 ಗ್ರಾಂಗೆ 65,358 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ, ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 6,300 ರೂಪಾಯಿ ಕುಸಿತ ಕಂಡಿದೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.