ಆರೋಗ್ಯ ಎಕ್ಸ್ ಪ್ರೆಸ್!
ಹಸಿ ಅರಿಶಿನ ಬೇರಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನ!
NAMMUR EXPRESS NEWS
ಅಡುಗೆಗೆ ಪುಡಿಗಿಂತ ಅರಿಶಿನ ಕೊಂಬು ಬಳಕೆಯೇ ಉತ್ತಮ. ಅಡುಗೆ ಮನೆಯಲ್ಲಿ ಅರಿಶಿನ ಇದ್ದೇ ಇರುತ್ತದೆ. ಸಸ್ಯಹಾರ ಮಾತ್ರವಲ್ಲದೆ ಮಾಂಸಾಹಾರಿ ಅಡುಗೆಗಳಿಗೂ ಭಾರತೀಯರು ಅರಿಶಿನ ಬಳಸುತ್ತಾರೆ. ಅರಿಶಿನವು ಅಡುಗೆ ರುಚಿ ಹೆಚ್ಚಿಸುವುದಲ್ಲದೆ, ಒಂದೊಳ್ಳೆ ಬಣ್ಣವನ್ನೂ ನೀಡುತ್ತದೆ. ಇಷ್ಟೇ ಅಲ್ಲದೆ ಇದರಿಂದ ಹಲವಾರು ಆರೋಗ್ಯ ಪ್ರಯೋಜನವಿದೆ.
– ಹಸಿ ಅರಿಶಿನ ಅಥವಾ ಅರಿಶಿನದ ಬೇರು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ!
ಸಾಮಾನ್ಯವಾಗಿ ಅಡುಗೆಗೆ ಅರಿಶಿನ ಪುಡಿ ಬಳಸುವವರು ಹೆಚ್ಚು. ಆದರೆ, ಹಸಿ ಅರಿಶಿನ ಅಥವಾ ಅರಿಶಿನದ ಬೇರು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ. ನಿತ್ಯ ಅಡುಗೆಯಲ್ಲಿ ಹಸಿ ಅರಿಶಿನ ಬಳಸುವುದರ ಪ್ರಯೋಜನಗಳೇನು ಎಂಬುದನ್ನು ನೋಡೋಣ.
ಹಲವು ಔಷಧೀಯ ಗುಣಗಳು!
ಹಸಿ ಅರಿಶಿನದಲ್ಲಿ ಅಪಾರ ಔಷಧೀಯ ಗುಣಗಳಿವೆ. ಇದರಲ್ಲಿರುವ ನಂಜುನಿರೋಧಕ ಗುಣವು ದೇಹದಲ್ಲಿರುವ ನಂಜು ಅಂಶವನ್ನು ಹೋಗಲಾಡಿಸುತ್ತದೆ. ನಂಜು ಆಹಾರ ಪದಾರ್ಥಗಳ ಅಡುಗೆಗೆ ಅರಿಶಿನ ತಪ್ಪದೆ ಬಳಸಬೇಕು. ಜೊತೆಗೆ ಶೀತ, ಕೆಮ್ಮು, ಚರ್ಮದ ಸೋಂಕು, ಮೂತ್ರನಾಳದ ಸೋಂಕಿಗೆ ಚಿಕಿತ್ಸೆ ನೀಡಲು ಸಹಕಾರಿ.
