ಆರೋಗ್ಯ ಎಕ್ಸ್ ಪ್ರೆಸ್!
ಈ ಗಿಡಮೂಲಿಕೆಯ ಎಲೆ ಹಾರ್ಟ್ ಬ್ಲಾಕ್ ಆಗಲು ಬಿಡುವುದಿಲ್ಲವಂತೆ!
– ಶುಂಠಿ ಎಲೆಗಳ ಮಹತ್ವವೇನು ಗೊತ್ತಾ?
NAMMUR EXPRESS NEWS
ರಕ್ತದ ಒತ್ತಡ ಇರುವವರು, ಹೃದಯದ ಸಮಸ್ಯೆ ಇರುವವರು ಈ ಗಿಡಮೂಲಿಕೆಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ, ಹೃದಯ ರಕ್ತನಾಳದ ಕಾಯಿಲೆಗಳು ಸೇರಿದಂತೆ ಪಾರ್ಶ್ವವಾಯು ಸಮಸ್ಯೆ ಕೂಡ ದೂರವೇ.
ನಮ್ಮ ಮನಸ್ಸು ಚೆನ್ನಾಗಿದ್ದರೆ ನಾವು ಎಲ್ಲಿ ಹೋದರೂ ಜೀವನ ಮಾಡಬಹುದು ಎನ್ನುವ ಮಾತಿದೆ. ಅದರಂತೆ ನಮ್ಮ ಹೃದಯ ಚೆನ್ನಾಗಿದ್ದರೆ ನಾವು ದೀರ್ಘಕಾಲ ಆರೋಗ್ಯವಾಗಿ ಜೀವಿಸಬಹುದು. ಹೃದಯದ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ತಂತ್ರ ನಮ್ಮಲ್ಲಿಯೇ ಅಡಗಿದೆ.ನಾವು ಯಾವ ಆಹಾರ ಸೇವನೆ ಮಾಡುತ್ತೇವೆ, ನಮ್ಮಲ್ಲಿ ಯಾವ ಕೆಟ್ಟ ಅಭ್ಯಾಸಗಳು ಇವೆ, ನಮ್ಮ ಜೀವನ ಶೈಲಿ ಹೇಗಿದೆ ಎಲ್ಲವೂ ಸಹ ನಮ್ಮ ಹೃದಯದ ಆರೋಗ್ಯವನ್ನು ನಿರ್ಧರಿಸುತ್ತವೆ. ಹೃದಯದ ಆರೋಗ್ಯ ಯಾವಾಗಲೂ ಚೆನ್ನಾಗಿರಬೇಕು ಎಂದರೆ ನಾವು ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದು ಕೊಳ್ಳುವುದು ಅನಿವಾರ್ಯವಾಗಿದೆ. ಗಿಡಮೂಲಿಕೆಗಳ ಎಲೆಗಳ ಬಗ್ಗೆ ತಿಳಿಸಿಕೊಳ್ಳೋಣ!
ಇವು ಹೃದಯದ ಆರೋಗ್ಯಕ್ಕೆ ಬೆಸ್ಟ್ ಎಂದು ಹೇಳಲಾಗುತ್ತದೆ
– ಶುಂಠಿ ಎಲೆಗಳು
ನಮ್ಮ ಭಾರತೀಯ ಅಡುಗೆ ಮನೆಗಳಲ್ಲಿ ಶುಂಠಿಯ ಪಾತ್ರ ಬಹಳ ದೊಡ್ಡದಿದೆ. ಅನೇಕ ಅಡುಗೆಗಳಲ್ಲಿ ಉಪಹಾರಗಳಲ್ಲಿ ಇದನ್ನು ಬಳಸುತ್ತೇವೆ.
ಶುಂಠಿ ಒಂದು ಔಷಧೀಯ ಗುಣಲಕ್ಷಣಗಳನ್ನು ಒಳಗೊಂಡಿರುವ ಗಿಡಮೂಲಿಕೆಯಾಗಿದ್ದು, ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಶುಂಠಿ ಎಲೆಗಳು ಕೂಡ ನಮ್ಮ ಹೃದಯ ಚೆನ್ನಾಗಿ ಕೆಲಸ ಮಾಡುವಂತೆ ನೋಡಿಕೊಂಡು, ಹೃದಯ ರಕ್ತನಾಳಗಳು ಬ್ಲಾಕ್ ಆಗದಂತೆ ತಡೆದು ಉತ್ತಮ ರಕ್ತ ಸಂಚಾರ ಆಗುವಂತೆ ಮಾಡುತ್ತದೆ. ನಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಣದಲ್ಲೂ ಕೂಡ ಶುಂಠಿ ಅದ್ಭುತವಾಗಿ ಕೆಲಸ ಮಾಡುತ್ತದೆ.
