ವಿಶ್ವದ ನಂ.1 ಆಟಗಾರರನ್ನೇ ಹಿಂದಿಕ್ಕಿದ ಡಿ.ಗುಕೇಶ್!
* ಭಾರತೀಯ ಚೆಸ್ ಪ್ರತಿಭೆ ಡಿ.ಗುಕೇಶ್ ಮತ್ತೊಂದು ಸಾಧನೆ
* ವಿಶ್ವದ ನಂ.1 ಆಟಗಾರನ ವಿರುದ್ಧ ಮೊದಲ ಗೆಲುವು!
NAMMUR EXPRESS NEWS
ಭಾರತೀಯ ಚೆಸ್ ಪ್ರತಿಭೆ ಡಿ. ಗುಕೇಶ್ ಮತ್ತೊಂದು ಸಾಧನೆ ಮಾಡಿದ್ದಾರೆ. ಜೂ. 1ರಂದು ನಡೆದ ಅದ್ಭುತ ಹೋರಾಟದಲ್ಲಿ ವಿಶ್ವದ ನಂ.1 ಆಟಗಾರರನ್ನೇ ಹಿಂದಿಕ್ಕಿದ್ದಾರೆ. 19 ವರ್ಷದ ಭಾರತೀಯ ಪ್ರತಿಭೆ ಡಿ. ಗುಕೇಶ್, ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ್ದಾರೆ.
ಪಂದ್ಯದಲ್ಲಿ ಎದುರಾಳಿ ಮಾಡಿದ ತಪ್ಪಿನ ಲಾಭವನ್ನು ಪಡೆದುಕೊಂಡ ಗುಕೇಶ್, ಕ್ಲಾಸಿಕಲ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಕಾರ್ಲ್ಸನ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾರ್ವೆಯಲ್ಲಿ ನಡೆಯುತ್ತಿರುವ ಚೆಸ್ ಟೂರ್ನಿಯ 6ನೇ ಸುತ್ತಿನ ಕ್ಲಾಸಿಕ್ ಪಂದ್ಯದಲ್ಲಿ ಗುಕೇಶ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.
19 ವರ್ಷದ ಗುಕೇಶ್ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲು ಮ್ಯಾಗ್ನಸ್ ಕಾರ್ಲ್ಸನ್ ಸಾಧ್ಯವಾಗಲಿಲ್ಲ. ಅಲ್ಲದೆ ಆಘಾತಕಾರಿ ಸೋಲಿನಿಂದ ವಿಚಲಿತರಾದ ಕಾರ್ಲ್ಸನ್ ಪಂದ್ಯದ ನಂತರ ಮೇಜನ್ನು ಗುದ್ದುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದ್ದರು.
