Categories
ಮಾಹಿತಿ ಸುದ್ದಿ

ಅಪ್ಪ ಐ ಲವ್ ಯೂ…! ಅಪ್ಪ ಪ್ರೀತಿ, ಮಮತೆ, ತ್ಯಾಗದ ರಿಯಲ್ ಹೀರೋ

ಅಪ್ಪ ಐ ಲವ್ ಯೂ…!

ಅಪ್ಪ ಪ್ರೀತಿ, ಮಮತೆ, ತ್ಯಾಗದ ರಿಯಲ್ ಹೀರೋ

ಸಮಸ್ತ ತಂದೆಯಂದಿರಿಗೆ ಅಪ್ಪಂದಿರ ದಿನದ ಶುಭಾಶಯಗಳು

ಅಪ್ಪ ಐ ಲವ್ ಯೂ…ಅಪ್ಪ ಎಂದರೆ ಆಕಾಶ ಎಂಬ ಮಾತೊಂದಿದೆ. ಆಕಾಶ ನೋಡಲು ಕಾಣುತ್ತದೆ, ಆದರೆ ಕೈಗೆಟುಕುವುದಿಲ್ಲ.ಅದೇ ರೀತಿ ತಂದೆಯ ವ್ಯಕ್ತಿತ್ವ ಕೂಡ. ಮೇಲೆ ನೋಡಲು ಒರಟಾಗಿ ಕಂಡರೂ ಒಳಗಿನ ಭಾವನೆ ಬೇರೆ. ಆದರೆ ಕೆಲವು ತಂದೆಯರು ಇದರಿಂದ ಹೊರಬಂದು ತಾಯಿಯಷ್ಟೇ ಸಮಾನ ಜವಾಬ್ದಾರಿಗಳನ್ನು ಹೊತ್ತು, ಮಕ್ಕಳ ಲಾಲನೆ ಪಾಲನೆ ಮಾಡುವುದನ್ನೂ ಸಹ ನೋಡಬಹುದು. ಜೊತೆಗೆ ಮಕ್ಕಳನ್ನು ಸ್ನೇಹಿತರಂತೆ ಕಂಡು ಅವರೊಳಗಿನ ನೋವು ನಲಿವುಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸುವ ತಂದೆಯರಿದ್ದಾರೆ.
ಅದೆಷ್ಟೋ ಲಕ್ಷ ಲಕ್ಷ ಮಕ್ಕಳಿಗೆ ಅಪ್ಪನೇ ರಿಯಲ್ ಹೀರೋ. ‌‌‌‌ಮಕ್ಕಳ ವಿದ್ಯಾಭ್ಯಾಸ, ಬದುಕು ಪ್ರತಿ ಕ್ಷಣದಲ್ಲೂ ಜೊತೆಗಿರುವ ಅಪ್ಪಂದಿರಿಗೆ ಈ ದಿನ ಅರ್ಪಣೆ.
ಮಕ್ಕಳು ಮತ್ತು ಯುವ ಜನತೆಯನ್ನು ದೇಶದ ಮತ್ತು ನಾಡಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿರುವ ನಿಜವಾದ ತಂದೆಯರಿಗೆ ತಂದೆಯರ ದಿನದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.