ಪುನೀತ್ ರಾಜ್ ಕುಮಾರ್ 50ನೇ ವರ್ಷದ ಹುಟ್ಟುಹಬ್ಬ
– ಅಪ್ಪು ಹೆಸರಿನಲ್ಲಿ ನಡೆಯುವ ಅನೇಕ ಸಾಮಾಜಿಕ ಕಾರ್ಯ
– ರಕ್ತದಾನ, ನೇತ್ರದಾನ, ಅನೇಕ ಜನರಿಗೆ ಕೈಲಾದಷ್ಟು ಸಹಾಯ
NAMMUR EXPRESS NEWS
ಮಾರ್ಚ್ 17 ಎಂದಾಗ ನೆನಪಿಗೆ ಬರುವುದೇ ಅಪ್ಪು ಜನ್ಮ ದಿನ. ಅಭಿಮಾನಿಗಳ ಮನದಲ್ಲಿ ಇನ್ನು ಜೀವಂತವಾಗಿರುವ ದಿವಂಗತ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಅನೇಕ ಸಾಮಾಜಿಕ ಕೆಲಸಗಳು ನಡೆಯುತ್ತವೆ.
ಅಪ್ಪು ಅಜರಾಮರ ಎನ್ನುವಂತೆ ಅಪ್ಪು ಹೆಸರಿನಲ್ಲಿ ಹುಟ್ಟುಹಬ್ಬದಂದು ನಡೆಯುವ ಸಾಮಾಜಿಕ ಕಾರ್ಯಗಳಿಗೆ ಲೆಕ್ಕವಿಲ್ಲ. ಅಪ್ಪು ಕನ್ನಡಿಗರಿಗೆ ಸ್ಪೂರ್ತಿಯ ಚಿಲುಮೆ ಎನ್ನಬಹುದು. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅಪ್ಪು ಸಿನಿಮಾ ಕೂಡ ತೆರೆ ಮೇಲೆ ಬಂದಿದ್ದು ಅಭಿಮಾನಿಗಳು ಸಿನಿಮಾ ನೋಡಿ ಭಾವುಕರಾಗುತ್ತಿದ್ದಾರೆ.
ಅಪ್ಪು ಅಮರ…ಅಪ್ಪು ಹೆಸರಲ್ಲಿ ಸೇವೆ ಮಾಡೋಣ…
