Categories
ಮಾಹಿತಿ ಸುದ್ದಿ

ಈಗ ಹುಣಸೆ ಹಣ್ಣು ದುಬಾರಿ..!

ಈಗ ಹುಣಸೆ ಹಣ್ಣು ದುಬಾರಿ..!
– ಕೆಜಿಗೆ 400 ರೂ. ದಾಟಿದ ಹುಣಸೆ ಹಣ್ಣು
– ಬೆಳೆ ಕಡಿಮೆ ಆದ್ದರಿಂದ ಡಿಮ್ಯಾಂಡ್ ಹೆಚ್ಚಳ

NAMMUR EXPRESS NEWS
ತುಮಕೂರು / ಚಿತ್ರದುರ್ಗ: ಹುಣಸೆ ಹಣ್ಣು ಇದೀಗ ದುಬಾರಿ ಆಗುತ್ತಿದೆ. ತುಮಕೂರು ಕೃಷಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹುಣಸೆ ಹಣ್ಣಿಗೆ ಕ್ವಿಂಟಲ್ ಗೆ ನಲವತ್ತು ಸಾವಿರ ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆಯಾಗಿದೆ. ಇದು ಈ ವರ್ಷದ ಗರಿಷ್ಠ ಬೆಲೆ ಎನ್ನಲಾಗಿದೆ.
ಕಳೆದ ಬಾರಿ ಇಳುವರಿಯಲ್ಲಿ ಬಾರಿ ಕುಸಿತ ಕಂಡ ಪರಿಣಾಮವಾಗಿ ಈ ವರ್ಷ ಹುಣಸೆಯ ಬೆಲೆ ದುಪ್ಪಟ್ಟಾಗಿದೆ ಎನ್ನಲಾಗಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ, ಶಿರಾ, ಮಧುಗಿರಿ, ಪಾವಗಡ ತಾಲ್ಲೂಕಿನ ಭಾಗಗಳಲ್ಲಿ ಮಾತ್ರ ಹುಣಸೆಹಣ್ಣನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಗುಬ್ಬಿ, ತುಮಕೂರು, ಚಿಕ್ಕನಾಯಕನಹಳ್ಳಿ, ತಿಪಟೂರು, ಕುಣಿಗಲ್ ತಾಲ್ಲೂಕುಗಳಲ್ಲಿ ಹಿತ್ತಲ ಬೆಳೆಯಾಗಿ ಮಾತ್ರ ಬೆಳೆಯಲಾಗುತ್ತದೆ. ಮಳೆಯಾಶ್ರಿತ ಬೆಳೆಯಾದ ಇದು ಒಣ ಬೇಸಾಯಕ್ಕೆ ಹೆಸರಾದ ವಾರ್ಷಿಕ ಬೆಳೆಯಾಗಿದೆ.
ತುಮಕೂರು ಹುಣಸೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಆಗಿದ್ದು, ದೇಶದಲ್ಲೇ ತುಂಬಾ ಹೆಸರುವಾಸಿಯಾಗಿದೆ. ಈ ಕಾರಣದಿಂದ ತುಮಕೂರಿನ ಹುಣಸೆಹಣ್ಣು ಆಂಧ್ರಪ್ರದೇಶ, ತಮಿಳುನಾಡು,ಕೇರಳ ಮತ್ತು ಉತ್ತರ ಭಾರತದ ಬಹುತೇಕ ರಾಜ್ಯಗಳಿಗೆ ರಫ್ತಾಗುತ್ತದೆ.
ತುಮಕೂರು ಜಿಲ್ಲೆಯ ನಂದಿಹಳ್ಳಿ ಗ್ರಾಮದ ಲಕ್ಷ್ಮಣ ಎಂಬುವವರು ಬೆಳೆಸಿರುವ ಹುಣಸೆಮರ ದೇಶದಲ್ಲಿಯೇ ವಿಶಿಷ್ಟ ಎಂದು ಗುರುತಿಸಲ್ಪಟ್ಟಿದೆ. ಇದರಲ್ಲಿ ಹುಳಿಯ ಅಂಶ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಈ ತಳಿಯ ಮರಕ್ಕೆ ‘ಲಕ್ಷ್ಮಣ ಹುಣಸೆ’ ಎಂದೇ ನಾಮಕರಣ ಮಾಡಿದ್ದಾರೆ. ಇದನ್ನು ಸಂವರ್ಧನೆ ಮಾಡಲು ಐಐಎಚ್ಆರ್ ಮುಂದಾಗಿದೆ. ಇನ್ನೊಂದೆಡೆ ಹುಣಸೆ ಬೆಳೆ ಏರಿಕೆಯಾಗಿದೆ, ಆದರೆ ಅದರ ಲಾಭ ಬೆಳೆಗಾರರಿಗೆ ಸರಿಯಾಗಿ ಲಭಿಸುತ್ತಿಲ್ಲ ಇಳುವರಿ ಕುಸಿತದಿಂದ ಮರದಲ್ಲಿ ಹಣ್ಣುಗಳೇ ಇಲ್ಲದಂತಾಗಿದೆ. ಚಿತ್ರದುರ್ಗ, ದಾವಣಗೆರೆ, ಉತ್ತರ ಕರ್ನಾಟಕದ ಆನೇಕ ಜಿಲ್ಲೆಗಳಲ್ಲಿ ಹುಣಸೆ ಹಣ್ಣು ಬೆಳೆಯಲಾಗುತ್ತಿದೆ. ಈ ಬಾರಿ ಇಳುವರಿ ಕುಸಿತ, ಬೇಡಿಕೆ ಹೆಚ್ಚು ಕಾರಣ ಹುಣಸೆ ಹಣ್ಣು ಕೂಡ ದುಬಾರಿ ಆಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.