Categories
ಮಾಹಿತಿ ಸುದ್ದಿ ವಿಶೇಷ ಸುದ್ದಿ

ಮಕ್ಕಳಲ್ಲಿರದ ತಾರತಮ್ಯ ಶಿಕ್ಷಕರಲ್ಲೇಕೆ?

ಮಕ್ಕಳಲ್ಲಿರದ ತಾರತಮ್ಯ ಶಿಕ್ಷಕರಲ್ಲೇಕೆ?
– ಸರ್ಕಾರಿ ಶಾಲೆ, ಖಾಸಗಿ ಶಾಲೆ ಎಂಬ ಭೇದಕ್ಕೆ ಬೇಸರ
– ಶಿಕ್ಷಕರ ದಿನಾಚರಣೆಯಲ್ಲಿ ಖಾಸಗಿ ಶಾಲೆ ಶಿಕ್ಷಕರಿಗಿಲ್ಲ ಅವಕಾಶ
– ಸರ್ಕಾರ ಈ ಬಗ್ಗೆ ಗಮನಿಸಲು ಪಟ್ಟು

NAMMUR EXPRESS NEWS
ಶಿಕ್ಷಕರು ಮಕ್ಕಳನ್ನು ಜ್ಞಾನ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರ ಶಿಕ್ಷಕರು. ಒಬ್ಬ ಶಿಕ್ಷಕನು ದೇವರು ನೀಡಿದ ಸುಂದರವಾದ ಕೊಡುಗೆ. ದೇವರು ಇಡೀ ಪ್ರಪಂಚದ ಸೃಷ್ಟಿಕರ್ತ. ಆದರೆ ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತನಾಗಿರುತ್ತಾನೆ. ಒಬ್ಬ ಶಿಕ್ಷಕನು ವಿದ್ಯಾರ್ಥಿಯ ಜೀವನದಲ್ಲಿ ಅಂತಹ ಪ್ರಮುಖ ವ್ಯಕ್ತಿ ಆಗಿದ್ದು ಅವನು ತನ್ನ ಜ್ಞಾನ ತಾಳ್ಮೆ ಮತ್ತು ಪ್ರೀತಿಯ ಮೂಲಕ ವಿದ್ಯಾರ್ಥಿಯ ಇಡೀ ಜೀವನಕ್ಕೆ ಪ್ರಮುಖ ಆಕಾರವನ್ನು ನೀಡುತ್ತಾನೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು.
ಪ್ರತಿಯೊಬ್ಬ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ತಮ್ಮ ಮಾರ್ಗವನ್ನು ಆರಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಇಷ್ಟೆಲ್ಲ ಜೀವನ ಮಾರ್ಗವನ್ನು ವಿದ್ಯಾರ್ಥಿಗಳಿಗೆ ತೋರಿಸುವಂತಹ ಶಿಕ್ಷಕರಲ್ಲಿ ಖಾಸಗಿ ಶಾಲಾ ಶಿಕ್ಷಕರು ಎನ್ನುವ ತಾರತಮ್ಯವೇಕೆ? ಇತ್ತೀಚಿಗೆ ಈ ತಾರತಮ್ಯ ಶಿಕ್ಷಣ ಕ್ಷೇತ್ರದಲ್ಲಿಯೂ ಕಂಡು ಬರುತ್ತಿದ್ದು ಶಿಕ್ಷಕ ದಿನಾಚರಣೆಯಂದು ನಮ್ಮಲ್ಲಿ ಸರ್ಕಾರಿ ಶಿಕ್ಷಕರನ್ನು ಮಾತ್ರ ಸನ್ಮಾನಿಸುವಂತಹ ವ್ಯವಸ್ಥೆ ನಡೆಯುತ್ತಿದೆ.
ಖಾಸಗಿ ಶಿಕ್ಷಕರೂ ಕೂಡ ತಮ್ಮಲ್ಲಿ ಸೇವೆ ಮಾಡಿರುವುದು ಅವರ ಗಮನಕ್ಕೆ ಬಾರದೆ ಹೋಯಿತೇ?. ಶಿಕ್ಷಕರೆಂದರೇ ನಾವೆಲ್ಲ ಒಂದೇ ಎಂಬ ಭಾವನೆಯಲ್ಲಿರಬೇಕು. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಏಳಿಗಾಗಿಯೇ ದುಡಿಯುತ್ತಿದ್ದಾರೆ.
ವಿದ್ಯಾರ್ಥಿಗಳ ಅಂಕವನ್ನು ಹೆಚ್ಚಿಸಿ ರಾಜ್ಯದ ಜಿಲ್ಲೆಯ ತಾಲೂಕಿನ ಹೆಸರನ್ನು ಎಲ್ಲಡೆ ಹಬ್ಬಿಸುವಂತಹ ಕೆಲಸ ಖಾಸಗಿ ಶಿಕ್ಷಕರಿಂದಲೂ ಆಗುತ್ತಿದೆ. ಅನೇಕ ಸಾಧಕ ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಅಂಕ ಬರಲು ಕಾರಣವಾದ ಖಾಸಗಿ ಶಾಲಾ ಶಿಕ್ಷಕರನ್ನು ಮರೆತು ಬಿಟ್ಟಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಶಿಕ್ಷಕ ದಿನಾಚರಣೆಯಂದು ಸರ್ಕಾರಿ ಶಿಕ್ಷಕರಿಗೆ ಮಾತ್ರ ಉತ್ತಮ ಶಿಕ್ಷಕ ಬಹುಮಾನ, ಉತ್ತಮ ಶಾಲಾ ಬಹುಮಾನವನ್ನು ನೀಡಿ ಗೌರವಿಸುತ್ತಿದ್ದಾರೆ.
ವರ್ಷವಿಡೀ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಜಿಲ್ಲೆ, ತಾಲೂಕಿಗೆ ಉತ್ತಮ ಹೆಸರು ಬರಲು ಕಾರಣರಾದ ಖಾಸಗಿ ಶಾಲಾ ಶಿಕ್ಷಕರನ್ನು ಮರೆಮಾಚುವಂತಹ ವ್ಯವಸ್ಥೆ ನಡೆಯುತ್ತಿದೆ. ಸರ್ಕಾರಿ ಶಿಕ್ಷಕರಿಗೆ ನೀಡುವ ಬಹುಮಾನದಲ್ಲಿ 10% ಬಹುಮಾನವನ್ನು ಖಾಸಗಿ ಶಾಲಾ ಶಿಕ್ಷಕರಿಗೂ ನೀಡಿದರೆ ಅವರ ಸೇವೆಗೂ ಕೂಡ ಗೌರವ ನೀಡಿದಂತಾಗುತ್ತದೆ ಎಂಬುದು ಖಾಸಗಿ ಶಾಲೆ ಶಿಕ್ಷಕರ ಅಭಿಪ್ರಾಯ.

ಸರ್ಕಾರ ಕೂಡ ಗಮನಿಸಬೇಕು..ಎರಡು ಕಾರ್ಯಕ್ರಮ ಮಾಡಲಿ!

ಶಿಕ್ಷಕರ ದಿನಾಚರಣೆಯನ್ನು ಎರಡು ವಿಭಾಗ ಮಾಡಲಿ. ಸರ್ಕಾರಿ, ಖಾಸಗಿ ಶಾಲೆ ವಿಭಾಗ ಮಾಡಿ ಕಾರ್ಯಕ್ರಮ ಮಾಡಲಿ. ಉತ್ತಮ ಸಾಧನೆ, ಸೇವೆ ಮಾಡಿದ ಖಾಸಗಿ ಶಾಲೆ ಶಿಕ್ಷಕರಿಗೂ ಗೌರವ ಸಿಗಲಿ. ಎಲ್ಲರ ಸೇವೆಯೂ ಗಣನೆಗೆ ಬರಲಿ ಎಂಬುದು ಅನೇಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.