ಅಬ್ಬಾ..ಆಕಾಶದಲ್ಲಿ ಇವತ್ತು ವಿಸ್ಮಯ!
– ಒಂದೇ ಲೈನಲ್ಲಿ ಗ್ರಹಗಳ ಜೋಡಣೆ: ಇದೇ ಮೊದಲು!
– ರಾತ್ರಿ ವಿಸ್ಮಯ ನೋಡಲು ಜನರ ಕಾತುರ
NAMMUR EXPRESS NEWS
ಜನವರಿ 25ರಂದು, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅತ್ಯಾಕರ್ಷಕವಾಗಿ ಚಲಿಸಲಿವೆ. ಆಕಾಶದಲ್ಲಿ ಕಾಣುವ ಈ ಅದ್ಭುತ ಪ್ರದರ್ಶನವನ್ನು ಕಳೆದುಕೊಳ್ಳಬೇಡಿ!
ಹೌದು. ಇದೊಂದು ಅಪರೂಪದ ಗ್ರಹಗಳ ಜೋಡಣೆ 2025ರಲ್ಲಿ ಬುಧ, ಗುರು, ಶುಕ್ರ, ಮತ್ತು ಶನಿ ಗ್ರಹಗಳು ಜೋಡಣೆ ರೀತಿಯಲ್ಲಿ ಕಾಣಸಿಗಲಿದೆ. ಆದ್ದರಿಂದ 2025ನೇ ಇಸವಿ ತುಂಬಾ ಸ್ಪೆಷಲ್ ಆಗಿರಲಿದೆ. ಜನವರಿ 25ರಂದು ಬಹಳ ಅಪರೂಪವಾದ ಖಗೋಳ ಘಟನೆಯೊಂದು ನಡೆಯಲಿದೆ. ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅಪರೂಪವಾದ ಸ್ಥಿತಿಯಲ್ಲಿ ತನ್ನ ಸಂಚಾರವನ್ನು ಮಾಡಲಿದೆ. ಸೂರ್ಯಾಸ್ತದ ನಂತರ ಶುಕ್ರ ಮತ್ತು ಗುರು ಗ್ರಹಗಳು ಸಾಕಷ್ಟು ಪ್ರಕಾಶಮಾನವಾಗಿ ಹೊಳೆಯಲಿದೆ. ಇದರಲ್ಲಿ ಮಂಗಳ ಗ್ರಹ ಇನ್ನಷ್ಟು ಹೊಳಪನ್ನು ಸುರಿಸಲಿದೆ. ಬೇರೆ ಖಗೋಳ ಘಟನೆಗಳಿಗಿಂತ ವಿಭಿನ್ನವಾಗಿ ಈ ಗ್ರಹಗಳ ಸಂಯೋಗ ನಡೆಯಲಿದ್ದು, ಇದನ್ನು ಬರಿ ಕಣ್ಣಿನಲ್ಲೇ ನೋಡುವ ಭಾಗ್ಯವನ್ನು ಕಳೆದುಕೊಳ್ಳಬೇಡಿ!.