Categories
ಉದ್ಯೋಗ ಸುದ್ದಿ

ಅಗ್ನಿವೀರರ ಆಯ್ಕೆ: ಅರ್ಜಿ ಸಲ್ಲಿಸೋದು ಹೇಗೆ?

ಅಗ್ನಿವೀರರ ಆಯ್ಕೆ: ಅರ್ಜಿ ಸಲ್ಲಿಸೋದು ಹೇಗೆ?
– ಏ.22ರಿಂದ ಆರಂಭವಾಗಿ ಮೇ 3ರ ತನಕ ವಿವಿಧ ದಿನಗಳಲ್ಲಿ ನೇಮಕ
– ಮಂಗಳೂರು ಸೇನಾ ಕಚೇರಿ ವಲಯದಿಂದ ಪ್ರಕ್ರಿಯೆ

NAMMUR EXPRESS NEWS
ಭಾರತೀಯ ಸೇನೆಯು ಅಗ್ನಿವೀರರ ನೇಮಕಾತಿಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏ.22ರಿಂದ ನೇಮಕ ರ್ಯಾಲಿಗಳು ನಡೆಯಲಿವೆ. ದೇಶದ ವಿವಿಧ ಸೇನಾ ವಲಯ ಕಚೇರಿಗಳು ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದು, ರಾಜ್ಯದಲ್ಲಿ ಮಂಗಳೂರು ಸೇನಾ ಕಚೇರಿ ನಡೆಸುವ ರ್ಯಾಲಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಏ.22ರಿಂದ ಮೇ 3ರ ತನಕ ವಿವಿಧ ದಿನಗಳಲ್ಲಿ ನೇಮಕ ಪ್ರಕ್ರಿಯೆಗಳು ನಡೆಯಲಿವೆ. ಪ್ರತಿ ದಿನವೂ ಬೇರೆ ಬೇರೆ ಸಮಯದಲ್ಲಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ. ಈ ಸಮಯಕ್ಕೆ ಸರಿಯಾಗಿ ಅಭ್ಯರ್ಥಿಗಳು ಸ್ಥಳದಲ್ಲಿ ಹಾಜರಿರಲು ಸೂಚಿಸಲಾಗಿದೆ.

ಮಂಗಳೂರು ಸೇನಾ ಕಚೇರಿ ವಲಯದಿಂದ ನಡೆಯುವ ರ್ಯಾಲಿಯಲ್ಲಿ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಈ ನೇಮಕಾತಿಗೆ ಕಳೆದ ಫೆಬ್ರವರಿ 23ರಿಂದ ಮಾರ್ಚ್ 22ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಟೆಕ್ನಿಕಲ್, ಜನರಲ್ ಡ್ಯೂಟಿ, ಆಫೀಸ್ ಅಸಿಸ್ಟೆಂಟ್/ಸ್ಟೋರ್ ಕೀಪರ್ ಹಾಗೂ ಟ್ರೇಡ್ಸ್‌ಮನ್ ಹುದ್ದೆಗಳ ನೇಮಕಾತಿಗೆ ಈ ರ್ಯಾಲಿ ನಡೆಯಲಿದೆ. ವಿವರಗಳಿಗೆ: https://joinindianarmy.nic.in

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.