Categories
ಕರಾವಳಿ

ವ್ಯಕ್ತಿಯ ಜೀವ ತೆಗೆದ ಎಳೆನೀರು!

ಕರಾವಳಿ ಕ್ರೈಂ ಸುದ್ದಿಗಳು

ವ್ಯಕ್ತಿಯ ಜೀವ ತೆಗೆದ ಎಳೆನೀರು!
– ಶಿರ್ವ: ಎಳೆನೀರು ಕೊಯ್ಯುವ ವೇಳೆ ವಿದ್ಯುತ್ ತಗುಲಿ ವ್ಯಕ್ತಿ ದುರ್ಮರಣ
– ಕಾರ್ಕಳ: ಮದ್ಯದ ನಶೆಯಲ್ಲಿ ರಸ್ತೆ ಮಧ್ಯೆ ಮಲಗಿದ ವ್ಯಕ್ತಿ
– ಬೆಳ್ತಂಗಡಿ, ಉಡುಪಿ: ಕೋಳಿ ಅಂಕ, ಗ್ಯಾಂಗ್ ಅರೆಸ್ಟ್
– ಬಂಟ್ವಾಳ: ಬೈಕ್ ನಡುವೆ ಅಪಘಾತದಲ್ಲಿ ನಾಲ್ವರು ಆಸ್ಪತ್ರೆಗೆ
NAMMUR EXPRESS NEWS
ಉಡುಪಿ: ಎಳೆನೀರು ಕೊಯ್ಯುವ ವೇಳೆ ವಿದ್ಯುತ್‌ ತಗುಲಿ ಕೂಲಿಕಾರ್ಮಿಕರೋರ್ವರು ಮೃತಪಟ್ಟ ಘಟನೆ ಶಿರ್ವ ನಡೀಬೆಟ್ಟು ಎಂಬಲ್ಲಿ ಆ.8ರಂದು ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ನಡೀಬೆಟ್ಟು ಪನಿಮಾರ್‌ ಮನೆಯ ಕೆಲಸದಾಳು ಸುರೇಶ್ ಶೆಟ್ಟಿ(68) ಎಂದು ಗುರುತಿಸಲಾಗಿದೆ. ಇವರು ಕಬ್ಬಿಣದ ಸಲಾಕೆಯಿಂದ ಸೀಯಾಳ ತೆಗೆಯಲು ಹೋಗಿದ್ದರು. ಈ ವೇಳೆ ತೋಟದಲ್ಲಿರುವ ಹೈ ಟೆನ್ನನ್ ವಯ‌ರ್ ಕಬ್ಬಿಣದ ಸಲಾಕೆಗೆ ತಗಲಿ ಈ ಅವಘಡ ಸಂಭವಿಸಿದೆ.
ಈ ಸಂದರ್ಭದಲ್ಲಿ ಮನೆಯ ಮಾಲೀಕ ದೇವಸ್ಥಾನಕ್ಕೆ ಹೋಗಿದ್ದರು ಎನ್ನಲಾಗಿದೆ.

ಬೆಳ್ತಂಗಡಿ : ಅಕ್ರಮ ಕೋಳಿ ಅಂಕ: ಐವರು ಅರೆಸ್ಟ್!

ಬೆಳ್ತಂಗಡಿ: ಅಕ್ರಮ ಕೋಳಿ ಅಂಕ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ 5 ಮಂದಿಯನ್ನು ದಸ್ತಗಿರಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕು, ಬಂದಾರು ಗ್ರಾಮದ ಪೇರಲ್ಲಪಲ್ಕೆ ಗುಡ್ಡದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ದೇವಪ್ಪ, ಉಮ್ಮನ ಗೌಡ, ಪರಮೇಶ್ವರ, ರಾಮಣ್ಣ, ಬಾಲಕೃಷ್ಣ ಎಂದು ಹೆಸರಿಸಲಾಗಿದೆ. ಪೇರಲ್ಲಪಲ್ಕೆ ಎಂಬಲ್ಲಿನ ಗುಡ್ಡೆಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಪಿಎಸ್ಸೆ ಕಿಶೋ‌ರ್ ಪಿ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.

ಉಡುಪಿ: ಅಂಕ ಆಡುತ್ತಿದ್ದವರು ಪರಾರಿ: 9 ಕೋಳಿಗಳ ವಶ

ಉಡುಪಿ:ಅಂಬಲಪಾಡಿ ಎಂಬಲ್ಲಿ ಅನುಮತಿ ಇಲ್ಲದೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ 9 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಕಂಡ ಸ್ಥಳೀಯರು ಹಾಗೂ ಜೂಜುಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾರಿ ಹಬ್ಬದ ಹಿನ್ನೆಲೆಯಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಆದರೆ ಈ ಬಾರಿ ಕೋಳಿ ಅಂಕವನ್ನು ಅನುಮತಿ ಇಲ್ಲದೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಕೋಳಿ ಅಂಕಕ್ಕೆ ದಾಳಿ ನಡೆಸಿ ಕೋಳಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಕಳ: ಬೈಕ್-ಟೆಂಪೋ ಡಿಕ್ಕಿ: ಯುವ ಉದ್ಯಮಿ ಸಾವು

ಕಾರ್ಕಳ: ಕಾರ್ಕಳದ ಮಿಯಾರು ಬಳಿಯ ನಲ್ಲೂರು ಬಸದಿ ತಿರುವಿನಲ್ಲಿ ಸಂಭವಿಸಿದ ಬೈಕ್-ಟೆಂಪೋ ನಡುವಿನ ಅಪಘಾತದಲ್ಲಿ ಯುವ ಉದ್ಯಮಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಪಟ್ಟ ಉದ್ಯಮಿ ಕಾಶಿನಾಥ್ (38) ಮೃತರು.ಕಲ್ಯಾದ ಹಾಳೆಕಟ್ಟೆಯಲ್ಲಿ ಸಲೂನ್‌ ಅಂಗಡಿ ಹೊಂದಿದ್ದ ಅವರು ರಾತ್ರಿ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಸದಿ ತಿರುವಿನಲ್ಲಿ ಮನೆ ಕಡೆಗೆ ಬೈಕ್ ತಿರುಗಿಸುವಾಗ ಎದುರಿನಿಂದ ವೇಗವಾಗಿ ಬಂದ ಟೆಂಪೋವೊಂದು ಢಿಕ್ಕಿ ಹೊಡೆದಿದೆ ಎಂದು ಎನ್ನಲಾಗಿದೆ.

ಬಂಟ್ವಾಳ: ಬೈಕ್ ನಡುವೆ ಅಪಘಾತದಲ್ಲಿ ನಾಲ್ವರು ಆಸ್ಪತ್ರೆಗೆ

ಬಂಟ್ವಾಳ: ಸ್ಕೂಟರುಗಳ ಮಧ್ಯೆ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಕುಕ್ಕಿಪ್ಪಾಡಿ ಗ್ರಾಮದ ಸಿದ್ದಕಟ್ಟೆ ಬಿ ಎಸ್ ಎನ್ ಎಲ್ ಟವರ್ ಬಳಿ ಸೋಮವಾರ ಸಂಜೆ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ನಿವಾಸಿ ಜೆಪ್ರಿ ಜೀವನ್ ಬರೆಟ್ರೊ ಅವರು ತನ್ನ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಸಿದ್ದಕಟ್ಟೆ ಎಂಬಲ್ಲಿ ಇನ್ನೊಂದು ಸ್ಕೂಟರ್ ಚಾಲಕ ಇಬ್ಬರು ಸಹಸವಾರರನ್ನು ಕುಳ್ಳಿರಿಸಿಕೊಂಡು ನಿರ್ಲಕ್ಷ್ಯದ ಚಾಲನೆ ಮಾಡಿ ಬಂದು ಜೀವನ್ ಅವರ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಕಾರ್ಕಳ: ಮದ್ಯದ ನಶೆಯಲ್ಲಿ ರಸ್ತೆ ಮಧ್ಯೆ ಮಲಗಿದ ವ್ಯಕ್ತಿ!

ಕಾರ್ಕಳ : ಐತಿಹಾಸಿಕ ಅನಂತಶಯನ ದೇವಸ್ಥಾನದ ಎದುರುಗಡೆಯ ರಸ್ತೆಯಲ್ಲಿ ಕಡುಕನೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಮಲಗಿ ಅವಾಂತರ ಸೃಷ್ಠಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆಸಿದೆ.
ಬಿಳಿ ಶರ್ಟ್ ಹಾಗೂ ಕಾವಿ ಲುಂಗಿ ಧರಿಸಿಕೊಂಡಿದ ವ್ಯಕ್ತಿ ಅನಂತಶಯನ ದೇವಸ್ಥಾನ ಎದುರುಗಡೆಯಲ್ಲಿ ಇರುವ ಸ್ವಾತಂತ್ರ್ಯ ಚಳುವಳಿ ಕಟ್ಟೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಉತ್ತರ ದಿಕ್ಕಿ ತಲೆ ಇಟ್ಟು ಮಲಗಿದ್ದನು.
ಕುಡುಕನ ಅವಾಂತರಕ್ಕೆ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ವಾಹನ ಚಾಲಕರು ನಿಯಂತ್ರಣ ಕಳೆದು ಕೊಂಡಿದ್ದರೆ ಆ ಪ್ರದೇಶದಲ್ಲಿ ಅನಾಹುತವೇ ನಡೆಯುತ್ತಿತ್ತು. ತುಂತುರು ಮಳೆಯ ಸಿಂಚನದಲ್ಲಿ ಪುಟ್ ಪಾತ್ ನಲ್ಲಿ ಮಲಗಿದ್ದ ಕುಡುಕ ಮದ್ಯದ ನಶೆ ಇಳಿಯುತ್ತಿದ್ದಂತೆ ಒದ್ದೆ ಬಟ್ಟೆಯಲ್ಲಿ ಅಲ್ಲಿಂದ ಹೆಜ್ಜೆ ಹಾಕಿ ಬೇರೆಡೆಗೆ ಹೊರಟು ಹೋಗಿದ್ದಾನೆ.
ರಸ್ತೆಯಲ್ಲಿ ಮಲಗಿದ್ದ ಕುಡುಕನ ಅವಾಂತರದ ದೃಶ್ಯಾವಳಿಯನ್ನು ವಕೀಲ ಅನಿಲ್ ಕುಮಾ‌ರ್ ನಿಟ್ಟೆ ಅವರು ತನ್ನ ಮೊಬೈಲ್ ನಲ್ಲಿ ಫೋಟೋ ಸೆರೆ ಹಿಡಿದಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.