Categories
ಉಡುಪಿ ಕರಾವಳಿ

ಎಲ್ಲರ ಗಮನ ಸೆಳೆದ ವಿಶೇಷ ಮದುವೆ!

ಎಲ್ಲರ ಗಮನ ಸೆಳೆದ ವಿಶೇಷ ಮದುವೆ!
– ಕುಂದಾಪುರದ ಹುಡುಗ ಜರ್ಮನಿ ಸುಂದರಿ!
– ಸಂತೋಷದಿಂದ ಆಶೀರ್ವದಿಸಿದ ಕುಟುಂಬಸ್ಥರು

NAMMUR EXPRESS NEWS
ಉಡುಪಿ: ಪ್ರೀತಿಗೆ ಗಡಿ ಭಾಷೆಗಳ ಹಂಗಿಲ್ಲ ಎಂಬ ಮಾತಿಗೆ ಪುಷ್ಠಿ ಕೊಡುವಂತಹ ಘಟನೆಯೊಂದು ಕುಂದಾಪುರ ದಲ್ಲಿ ನಡೆದಿದೆ. ಕುಂದಾಪುರ ತಾಲೂಕಿನ ಆಜಿಯ ಯುವಕ ಮತ್ತು ಜರ್ಮನಿಯ ಯುವತಿಯ ವಿವಾಹವೂ ಜ.1ರಂದು ನೆರವೇರಿದೆ. ಕುಂದಾಪುರ ತಾಲೂಕಿನ ಇವರು ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ಕುಂದಾಪುರ ತಾಲ್ಲೂಕಿನ ಗ್ರಾಮೀಣ ಭಾಗವಾದ ಆಟ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ಟ ಶೂಆರ್ ಮತ್ತು ಪೀಟರ್ ಶೂಆರ್ ಮುನಿಸ್ತರ್ ಯುನಿಕಬ್ ದಂಪತಿಯ ಪುತ್ರಿ ಕಾರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ.

ಚಂದನ್ ಅವರು ಜರ್ಮನಿಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಶಿಕ್ಷಕಿಯಾಗಿರುವ ಕಾರು ಅವರನ್ನು ಪ್ರೀತಿಸುತ್ತಾರೆ. ಇಬ್ಬರು ತಮ್ಮ ಪ್ರೇಮದ ಬಗ್ಗೆ ತಮ್ಮ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದು, ಎರಡೂ ಕುಟುಂಬಗಳು ಪರಸ್ಪರ ಚರ್ಚಿಸಿ ಮದುವೆಗೆ ಸಮ್ಮತಿಸಿರುತ್ತಾರೆ. ಅದರಂತೆ ವಿವಾಹ ನೆರವೇರಿದ್ದು, ಎರಡೂ ಕುಟುಂಬಗಳ ಕಡೆಯ ಬಂಧು-ಮಿತ್ರರು, ಹಿತೈಷಿಗಳು ನೂತನ ಜೀವನಕ್ಕೆ ಕಾಲಿಟ್ಟ ನವಜೋಡಿಗಳಿಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.