ಕಾರ್ಕಳ: ಅಜೆಕಾರು ಮರ್ಣೆ ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಫೆ.28ರಂದು ಜರುಗಲಿದೆ. ಬೆಳಗ್ಗೆ 10 ಗಂಟೆಗೆ ಕುರ್ಪಾಡಿಗುತ್ತು ಮನೆಯಿಂದ ಕೆಮ್ಮಂಜೆ ಸ್ಥಾನಕ್ಕೆ ಭಂಡಾರ ಆಗಮನ, ಭಂಡಾರ ಪ್ರತಿಷ್ಠೆ, ಧ್ವಜಾರೋಹಣ, ಮಧ್ಯಾಹ್ನ 12.30 ಗಂಟೆಗೆ ಅನ್ನಸಂತರ್ಪಣೆ (ಜೈನ್ ಮಾದರಿ), ಸಂಜೆ 5 ಗಂಟೆಗೆ ಧರ್ಮರಸು ದೈವದ ನೇಮ, 7 ಗಂಟೆಗೆ ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಗಳ ನೇಮೋತ್ಸವ, ರಾತ್ರಿ 7.30 ರಿಂದ ರಾತ್ರಿ 11 ಗಂಟೆವರೆಗೆ ಉಪಾಹಾರದ ವ್ಯವಸ್ಥೆ, ರಾತ್ರಿ 10 ಗಂಟೆಗೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ 2 ಗಂಟೆಗೆ ಮಾಯಂದಾಲೆ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನದ ಅನ್ನಸಂತರ್ಪಣೆ ಮತ್ತು ರಾತ್ರಿಯ ಉಪಾಹಾರದ ವ್ಯವಸ್ಥೆ ಶ್ರೀ ರಾಮ ಮಂದಿರದಲ್ಲಿ ನಡೆಯಲಿದೆ ಎಂದು ಗರಡಿಯ ಅನುವಂಶಿಕ ಆಡಳಿತ ಮೊಕ್ತಸರ ಶಿವಕುಮಾರ್ ಕುರ್ಪಾಡಿಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Categories
ಕಾರ್ಕಳ: ಫೆ. 28 ಅಜೆಕಾರು ಮರ್ಣೆ ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ