Categories
ಕರಾವಳಿ

ಪುತ್ತೂರಲ್ಲಿ ಚೂರಿ ಮತ್ತೊಂದು ಚೂರಿ ಇರಿತ!

ಪುತ್ತೂರಲ್ಲಿ ಚೂರಿ ಮತ್ತೊಂದು ಚೂರಿ ಇರಿತ!

– ಹಿರಿಯ ನಾಗರಿಕರ ಗಲಾಟೆ: ಓರ್ವನಿಗೆ ಚೂರಿ ಇರಿತ
– ಪಾರ್ಕಿಂಗ್ ವಿಚಾರದಲ್ಲಿ ಜಗಳ: ಏನಾಯ್ತು ಮುಂದೆ..?

NAMMUR EXPRESS NEWS
ಹಿರಿಯ ನಾಗರಿಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನೆಡೆದು ಓರ್ವರಿಗೆ ಚೂರಿಯಿಂದ ಇರಿದ ಘಟನೆ ಪುತ್ತೂರಿನ ಕೋರ್ಟ್‌ ರಸ್ತೆಯಲ್ಲಿ ಗುರುವಾರ ನಡೆದಿದೆ. ಪಾರ್ಕಿಂಗ್‌ ವಿಚಾರಕ್ಕೆ ಸಂಬಂಧಪಟ್ಟಂತೆ ವಾಗ್ವಾದ ನಡೆದು ಅದು ಕೊನೆಗೆ ವಿಕೋಪಕ್ಕೆ ತಿರುಗಿದೆ. ದರ್ಬೆ ನಿವಾಸಿ ಸದಾಶಿವ ಪೈ ಅವರಿಗೆ ಊರಮಾಲ್‌ ನಿವಾಸಿ ಗುಣಶೇಖರ್‌ ಶೆಟ್ಟಿ ಚೂರಿಯಿಂದ ಇರಿದಿರುವುದಾಗಿ ಆರೋಪಿಸಲಾಗಿದೆ. ಸದಾಶಿವ ಪೈ ಅವರ ಕೈಗೆ ಚೂರಿ ತಾಗಿದ್ದು, ಅವರು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ, ಗುಣಶೇಖರ್‌ ಅವರು ಕೂಡ ಪುತ್ತೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.