Categories
ಕರಾವಳಿ

ಎ.01-09 : ಚಾರ ಮೇಲ್ಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿ ಪುನರ್‌ ಪ್ರತಿಷ್ಠೆ – ಬ್ರಹ್ಮಕಲಶೋತ್ಸವ – ನೇಮೋತ್ಸವ

ಕಾರ್ಕಳ : ತುಳುನಾಡಿನ ದೈವಗಳು ತುಳುವರ ಮನಸ್ಸುಗಳಲ್ಲಿ ನೆಲೆಗೊಂಡಿರುವ ತುಳುವ ಸಂಸ್ಕೃತಿಯ ಮೂಲ ದೇವರುಗಳಾದ ದೈವಾರಾಧನೆ, ನಾಗರಾಧನೆ, ಸಿರಿ ಆರಾಧನೆ, ವೈದಿಕ ಸಂಸ್ಕೃತಿಯು ತುಳುವರನ್ನು ಆವರಿಸಿಕೊಂಡಿರುವುದು ದೈವಶಕ್ತಿಗೆ ಸಾಕ್ಷಿ ಆಗಿದೆ. ತುಳುನಾಡಿನಲ್ಲಿ ಪ್ರಚಲಿತವಿರುವ ದೈವಾರಾಧನೆಯಲ್ಲಿ, ವೀರಪುರುಷರಾದ ಒಡಹುಟ್ಟು ಅವಳಿಮಕ್ಕಳು ತುಳುನಾಡಿನ ನಾಗಬ್ರಹ್ಮರನ್ನು ಪೂಜಿಸುತ್ತಾ ಬಂದ ಕೋಟಿ ಚೆನ್ನಯರು ತಮ್ಮ ಕಾರ್ಯಸಾಧನೆಯಿಂದ ದೈವತ್ವಕ್ಕೆ ಏರಿದವರು. ಅಮರ ಜೀವಿಗಳು ಬ್ರಹ್ಮ ಬೈದರ್ಕಳ ಎಂಬ ಹೆಸರನ್ನು ಪಡೆದವರು. ಅಂತ ಸಾಧನೆಗಾಗಿ, ದೈವ ಬಲ ಮತ್ತು ಮನೋಬಲವನ್ನು, ವೃದ್ಧಿಗೊಳ್ಳುವುದಕ್ಕಾಗಿ ಅಂದು ಸ್ಥಾಪಿಸಿದ, 66 ಮೂಲ ಗರಡಿಯಲ್ಲಿ ಇದು ಒಂದಾಗಿದೆ ಎಂದು ಪ್ರಚಲಿತದಲ್ಲಿದೆ. ಚಾರ, ಕೆರೆಬೆಟ್ಟು, ಕಸ್ತೂರು, ಮೂರು ಗ್ರಾಮಗಳನ್ನು ಒಳಗೊಂಡ 10 ಸಾವಿರ ಭಕ್ತ ಸಮೂಹವನ್ನು ಹೊಂದಿರುತ್ತದೆ. ಸುಮಾರು 475 ವರ್ಷಗಳ ಇತಿಹಾಸವಿರುವ ಈ ಗರಡಿ ಜೀರ್ಣೋದ್ದಾರಕ್ಕೆ ಕಳೆದ ಸೆಪ್ಟೆಂಬರ್ 9ನೇ ತಾರೀಖಿನಂದು ವೇದಮೂರ್ತಿ ಶ್ರೀ ರಾಘವೇಂದ್ರ ತಂತ್ರಿಗಳು ಹೆರ್ಗ ಇವರ ಮಾರ್ಗದರ್ಶನದಲ್ಲಿ ಶಂಕುಸ್ಥಾಪನೆಗೊಂಡು, 3 ಕೋಟಿ ಹಣ ಖರ್ಚಿನೊಂದಿಗೆ ಇದೀಗ ಬ್ರಹ್ಮ ಕಲಶಕ್ಕೆ ಸಜ್ಜಾಗಿದೆ. ನಂಬಿನಾಯಗ್ ಇಂಬು ಕೊರ್ಪ ಸತ್ಯಗೆಂದಾದ್ ಕೊರ್ಪ ಎಂಬ ಅವರ ನುಡಿಗೆ, ಮೇಲೆಟ್ಟು ಗರಡಿಯಲ್ಲಿ ಇದೀಗ ಸಂಪೂರ್ಣ ಶಿಲಾಮಯಗೊಂಡು ಪುನರ್‌ಪ್ರತಿಷ್ಠೆಗೊಳ್ಳುವ ಸಮಯ ಒದಗಿ ಬಂದಿದೆ. ಈ ಜೀರ್ಣೋದ್ದಾರದ, ವಿಧಿ ವಿಧಾನಗಳನ್ನು ವೇದಮೂರ್ತಿ ಶ್ರೀ ರಾಘವೇಂದ್ರ ತಂತ್ರಿಗಳು ಹೆರ್ಗ ಇವರ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದ ಸಹಯೋಗದಿಂದ ನಡೆಯಲಿದ್ದು, ಎ.01 ರಿಂದ ಎ. 09 ಚಾರ ಮೇಲ್ಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿಯಲ್ಲಿ ಪುನರ್‌ ಪ್ರತಿಷ್ಠೆ – ಬ್ರಹ್ಮಕಲಶೋತ್ಸವ ನಡೆಯಲಿದೆ.
ಶಿವರಾಯ ಗರೋಡಿಯಲ್ಲಿ ವರ್ಷಂಪ್ರತಿ ನೇಮೋತ್ಸವವು 06-04-2025ರಂದು ಆರಂಭಗೊಂಡು ದಿನಾಂಕ 09-04-2025ರವರೆಗೆ ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.