Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ಪುತ್ತೂರು: ಟೈಲ್ಸ್ ಕೆಲಸಗಾರ ನಾಪತ್ತೆ

•ಬೈಂದೂರು: ಇರುಳುಗುರುಡು ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ

• ಬೆಳ್ತಂಗಡಿ: ಖಾಸಗಿ ಆಸ್ಪತ್ರೆಯ ಎದುರು ಘರ್ಷಣೆ; ಪೊಲೀಸರ ವಿಚಾರಣೆ

• ಸುಳ್ಯ: ಕುಡುಕರಿಂದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ

• ಕುಂದಾಪುರ: ಮಟ್ಕಾ ಜುಗಾರಿ ಅಡ್ಡೆ ಮೇಲೆ ದಾಳಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

ಪುತ್ತೂರು: ಆರ್ಯಾಪು ಗ್ರಾಮದ ನಿವಾಸಿಯಾದ ಚಿಂತನ್ ಎನ್ನುವ ವ್ಯಕ್ತಿಯು, ಕಳೆದೆರಡು ದಿನಗಳ ಹಿಂದೆ ಟೈಲ್ಸ್ ಕೆಲಸಕ್ಕೆಂದು ಮೋಹನ್ ಎನ್ನುವವರೊಂದಿಗೆ ತೆರಳಿದ್ದು, ಮರಳಿ ಮನೆಗೆ ಬಂದಿಲ್ಲ. ಚಿಂತನ್ ಅವರ ತಂದೆ ಪರಮೇಶ್ವರ್ ಅವರು ಮೋಹನ್ ನನ್ನು ಕುರಿತು ವಿಚಾರಿಸಿದಾಗ, ಬೆಳಂದೂರಿಗೆ ಕೆಲಸಕ್ಕೆ ಹೋದ ದಿನ ಸಂಜೆ ಅವನಿಗೆ 1500 ರೂಪಾಯಿ ಕೂಲಿ ನೀಡಿ, ಮುಂಕ್ರಪಾಡಿ ಪೆಟ್ರೋಲ್ ಬಂಕ್ ಬಳಿ ಆಟೋದಲ್ಲಿ ಇಳಿಸಿ ಬಂದಿರುವುದಾಗಿ ತಿಳಿಸಿದ್ದಾರೆ. ಆದರೆ ಚಿಂತನ್ ಇದುವರೆಗೂ ಪತ್ತೆಯಾಗಲಿಲ್ಲ ಎಂದು ಪರಮೇಶ್ವರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆ ಪರಮೇಶ್ವರ್ ಅವರ ದೂರಿನ ಆಧಾರದ ಮೇಲೆ ಚಿಂತನ್ ನಾಪತ್ತೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

• ಕುಂದಾಪುರ: ಇರುಳುಗುರುಡು ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ

ಬೈಂದೂರು: ತಾಯಿ ಹಾಗೂ ಸಹೋದರಿಯೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದ ರಮೇಶ್ ಎನ್ನುವ ವ್ಯಕ್ತಿಯು, ಅನಾರೋಗ್ಯ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಡ್ಕಲ್ ಗ್ರಾಮದಲ್ಲಿ ನಡೆದಿದೆ. ಇರುಳುಗುರುಡು ಸಮಸ್ಯೆಯಿಂದ ಬಳಲುತ್ತಿದ್ದ ರಮೇಶ್ ಅವರು, ತಾಯಿಯು ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಜಂತಿಗೆ ವಯರ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.‌ ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಬಂದ ತಾಯಿಯು ನೋಡಿದಾಗ ಮಗ ರಮೇಶ್ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

• ಬೆಳ್ತಂಗಡಿ: ಖಾಸಗಿ ಆಸ್ಪತ್ರೆಯ ಎದುರು ಘರ್ಷಣೆ; ಪೊಲೀಸರ ವಿಚಾರಣೆ

ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಆಸ್ಪತ್ರೆಯ ಮುಂಭಾಗದ ಅಕ್ರಮ ಕೂಟದಲ್ಲಿ ಸುಮೊಟೊ ಪ್ರಕರಣ, ಮಾಧ್ಯಮಗಳ ಮೇಲೆ ಹಲ್ಲೆ, ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆ ಸೇರಿದಂತೆ ಮೂರು ಪ್ರಕರಣಗಳು ದಾಖಲಾಗಿದ್ದವು. ಅಪರಾಧ ಸಂಖ್ಯೆ 76/77/ 79 2025ರ ಅನ್ವಯ ವಿಚಾರಣೆಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ 16 ಮಂದಿ ಆರೋಪಿಗಳು ಬುಧವಾರದಂದು ಸಂಜೆ ಐದು ಗಂಟೆಯ ಸುಮಾರಿಗೆ ಹಾಜರಾಗಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ಮುಂದೆ ವಿಚಾರಣೆ ನಡೆಸಲಾಯಿತು ಎನ್ನಲಾಗಿದೆ.

• ಸುಳ್ಯ: ಕುಡುಕರಿಂದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ

ಸುಳ್ಯ: ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಕುಡುಕರ ಹಾವಳಿ ಹೆಚ್ಚಳವಾಗಿದೆ. ಬುಧವಾರದಂದು ಮೂವರು ಕುಡುಕರು ಬಸ್ ನಿಲ್ದಾಣದಲ್ಲೇ ಮಲಗಿ ಕಾಲ ಕಳೆದಿದ್ದಾರೆ, ಅದರಲ್ಲಿ ಓರ್ವ ಅಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿದ್ದಾನೆ.‌ ಈ ಸಮಸ್ಯೆ ಹಲವಾರು ದಿನಗಳಿಂದ ಕಾಡುತ್ತಿದೆ. ಎಲ್ಲಿಗೆ ಹೋದರು ಪುನಃ ಇಲ್ಲಿಯೇ ಬಂದು ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳು ಮಹಿಳೆಯರು ಸೇರಿದಂತೆ ಬಸ್ ಪ್ರಯಾಣಕ್ಕೆ ಆಗಮಿಸುವವರು ಅಂಗಡಿ ಮತ್ತು ರಸ್ತೆ ಬದಿಗಳಲ್ಲಿ ನಿಂತು ಬಸ್ ಗಾಗಿ ಕಾಯುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಂಡು, ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.‌

• ಕುಂದಾಪುರ: ಮಟ್ಕಾ ಜುಗಾರಿ ಅಡ್ಡೆ ಮೇಲೆ ದಾಳಿ

ಕುಂದಾಪುರ: ಶಿರಿಯಾರ, ನಂಚಾರಿನಾ ಸೇರಿದಂತೆ ಕೋಟ ಠಾಣೆಯ ವ್ಯಾಪ್ತಿಗೆ ಒಳಪಡುವಂತಹ, ಮೂರು ಕಡೆಗಳಲ್ಲಿ ಮಟ್ಕಾ ಜುಗಾರಿ ಅಡ್ಡೆಯ ಮೇಲೆ ಠಾಣಾ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಮತ್ತು ಕ್ರೈಮ್ ವಿಭಾಗದ ಸುಧಾ ಪ್ರಭು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಿರಿಯಾರ ಗ್ರಾಮದ ಶಿವರಾಜ್ ಎನ್ನುವವನನ್ನು ಬಂಧಿಸಿ, ಆತನ ಬಳಿ ಸಂಗ್ರಹವಾಗಿದ್ದ 1830 ರೂಪಾಯಿ ವಶಪಡಿಸಿಕೊಂಡಿದ್ದಾರೆ. ಇದೇ ರೀತಿ ನಂಚಾರು ಜಂಕ್ಷನ್ ಬಳಿ ದೇವೇಂದ್ರನನ್ನು ಬಂಧಿಸಿ, 4550 ರೂಪಾಯಿಯನ್ನು ಹಾಗೂ ಬೊಬ್ಬರ್ಯ ಕೊಡ್ಲು ಬಳಿ ಉದಯ್ ಮತ್ತು ಭಾಸ್ಕರ್ ನನ್ನು ಬಂಧಿಸಿ, 2270 ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.