Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

• ದಕ್ಷಿಣ ಕನ್ನಡ: ಇಂದಿನಿಂದ ಮಂಗಳೂರು ವಿಜಯಪುರ ರೈಲು ಸಂಚಾರ ಆರಂಭ

• ಬೈಂದೂರು: ಮೀನುಗಾರನ ಮೃತದೇಹ ಪತ್ತೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ದಕ್ಷಿಣ ಕನ್ನಡ: ಇಂದಿನಿಂದ ಮಂಗಳೂರು ವಿಜಯಪುರ ರೈಲು ಸಂಚಾರ ಆರಂಭ

ದಕ್ಷಿಣ ಕನ್ನಡ: 2019ರ ನವೆಂಬರ್ ತಿಂಗಳಿನಲ್ಲಿ, ಎಕ್ಸ್ ಪ್ರೆಸ್ ಸ್ಪೆಷಲ್ ಎಂಬ ಹೆಸರಿನಲ್ಲಿ ಆರಂಭಗೊಂಡಿದ್ದ ರೈಲು ಮಂಗಳೂರು ಮತ್ತು ವಿಜಯಪುರದ ನಡುವೆ ಸಂಚರಿಸುತ್ತಿದ್ದು, ಕೊರೋನಾ ಸಮಯದಲ್ಲಿ ಸ್ಥಗಿತಗೊಂಡಿತ್ತು. 2021ರ ಡಿಸೆಂಬರ್ ತಿಂಗಳಿನಲ್ಲಿ ಪುನಃ ಪ್ರಾರಂಭಗೊಂಡಾಗ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ, ಇದೇ ವರ್ಷ ಜೂನ್ ತಿಂಗಳಿನಲ್ಲಿ ಎಕ್ಸ್ ಪ್ರೆಸ್ ಸ್ಪೆಷಲ್ ರೈಲನ್ನು ಖಾಯಂಗೊಳಿಸಲು ನಿರ್ಧರಿಸಲಾಯಿತು. ಇಂದಿನಿಂದ ಈ ರೈಲು ಸಂಚರಿಸುವ ಮೂಲಕ ಅಧಿಕೃತವಾಗಿ ಖಾಯಂಗೊಳಿಸಲಾಗುತ್ತಿದೆ. ವೇಳಾಪಟ್ಟಿಯ ಪ್ರಕಾರ ಎಕ್ಸ್ ಪ್ರೆಸ್ ಸ್ಪೆಷಲ್ ರೈಲು ಸಂಜೆ 4:45 ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 11:15ಕ್ಕೆ ವಿಜಯಪುರವನ್ನು ತಲುಪಲಿದೆ. ಅದೇ ರೀತಿ ವಿಜಯಪುರದಿಂದ ಮಧ್ಯಾಹ್ನ ಮೂರು ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 9:50 ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ನಡುವೆ ಸಂಜೆ ಏಳಕ್ಕೆ ಸುಬ್ರಹ್ಮಣ್ಯ ರಸ್ತೆ, ರಾತ್ರಿ 10:30ಕ್ಕೆ ಹಾಸನ, 1: 50ಕ್ಕೆ ದಾವಣಗೆರೆ, 3:20ಕ್ಕೆ ಹಾವೇರಿ, 4: 50ಕ್ಕೆ ಹುಬ್ಬಳ್ಳಿ, 6: 20ಕ್ಕೆ ಗದಗ, 7: 58ಕ್ಕೆ ಬಾಗಲಕೋಟೆ ಮಾರ್ಗವಾಗಿ ಸಂಚರಿಸಲಿದೆ. ಈ ಹಿಂದೆ ಎಕ್ಸ್ ಪ್ರೆಸ್ ಸ್ಪೆಷಲ್ ರೈಲಿನ ದರ ಅಧಿಕವಾಗಿತ್ತು. ತರೆ ಈಗ ಇದರ ಬೆಲೆ ಕಡಿಮೆಯಾಗಿದೆ ಎನ್ನಲಾಗಿದೆ. ಇದು ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಏಕೈಕ ರೈಲು ಎನ್ನುವ ಸಂಗತಿ ತಿಳಿದುಬಂದಿದೆ. ಇದರಿಂದ ಮಂಗಳೂರು ಕಡೆಗೆ ಆಸ್ಪತ್ರೆಗೆ ತೆರಳುವವರಿಗೆ, ಉತ್ತರ ಕರ್ನಾಟಕ ಭಾಗದಿಂದ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡದತ್ತ ವಲಸೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವುದರಿಂದ ಪ್ರಯಾಣಿಕರಲ್ಲಿ ಸಂತಸವನ್ನುಂಟು ಮಾಡಿದೆ.

• ಬೈಂದೂರು: ಆಗಸ್ಟ್ 27 ರಂದು ಸಾಗರ ಎಂಬ ಪರ್ಷಿಯನ್ ಮೀನುಗಾರಿಕೆ ದೋಣಿಯಲ್ಲಿ ತೆರಳಿದ್ದ, ಭಟ್ಕಳ ಮೂಲದ ಮಂಜುಸಾತ ಗೌಡ ಅವರು ಮೀನುಗಾರಿಕೆ ಮಾಡುತ್ತಿದ್ದಾಗ, ಅಳ್ವೆ ಬಂದರಿನ ಸಮೀಪ ಸಮುದ್ರದ ಅಲೆಗೆ ಸಿಲುಕಿ ದೋಣಿಯಿಂದ ಬಿದ್ದಿದ್ದರು. ಎಷ್ಟೇ ಹುಡುಕಾಡಿದರೂ, ಮಂಜುಸಾತ ಅವರ ಸುಳಿವು ಸಿಕ್ಕಿರಲಿಲ್ಲ. ಆಗಸ್ಟ್ 30ರಂದು ಕಿರಿಮಂಜೇಶ್ವರದ ಜನತಾ ಆಂಗ್ಲ ಮಾಧ್ಯಮ ಶಾಲೆಯ ಸಮೀಪದಲ್ಲಿರುವ ಕಡಲಕಿನಾರೆಯಲ್ಲಿ ಮಂಜುಸಾತ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ದೇಹದ ಮೇಲಿರುವ ಬಟ್ಟೆಯಿಂದ ಮಂಜುಸಾತ ಅವರ ಮಗ ಜಯವಂತ ಅದು ತನ್ನ ತಂದೆಯದೇ ದೇಹ ಎನ್ನುವುದನ್ನು ಗುರುತಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.