Categories
ಅಪಘಾತ ಉಡುಪಿ ಕರಾವಳಿ

ಉಡುಪಿಯಲ್ಲಿ ದಿನ ಅಪಘಾತ: ದಿನವೂ ಸಾವು!

ಉಡುಪಿಯಲ್ಲಿ ದಿನ ಅಪಘಾತ: ದಿನವೂ ಸಾವು!
– ಖಾಸಗಿ ಬಸ್ ಡಿಕ್ಕಿ ಬೈಕ್ ಸವಾರ ಸಾವು
– ಉಡುಪಿಯಲ್ಲಿ ಸತತ ಅಪಘಾತ ಮುಂದುವರಿಕೆ

NAMMUR EXPRESS NEWS
ಉಡುಪಿ: ಉಡುಪಿಯಲ್ಲಿ ಮೂರನೇ ದಿನವೂ ಅಪಘಾತ ಮುಂದುವರಿದಿದ್ದು, ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ಶನಿವಾರ ಸಂಭವಿಸಿದೆ. ಮೃತರನ್ನು ಬಾಗಲಕೋಟೆ ಮೂಲದ ಬಸವರಾಜ(40) ಎಂದು ಗುರುತಿಸಲಾಗಿದೆ. ಬಸ್ ಉಡುಪಿಯಿಂದ ಕರಾವಳಿ ಬೈಪಾಸ್ ಮಾರ್ಗವಾಗಿ ಸಂತೆಕಟ್ಟೆಯತ್ತ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದ ಬಳಿಕ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಬಸವರಾಜ ಅವರು ಉಡುಪಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಉಡುಪಿಯಲ್ಲಿ ಸತತ ಮೂರನೇ ದಿನವೂ ನಡೆದ ಅಪಘಾತ ಇದಾಗಿದ್ದು ಮೂರು ಅಪಘಾತದಲ್ಲಿಯೂ ದುರಾದೃಷ್ಟವಶಾತ್ ಸವಾರರು ಮೃತಪಟ್ಟಿದ್ದಾರೆ. ಅಲ್ಲದೆ ಉಡುಪಿ ಸುತ್ತಮುತ್ತ ದಿನೇ ದಿನೇ ಅಪಘಾತ ಹೆಚ್ಚಳವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.