Categories
ಕರಾವಳಿ

ಮೀನಿನ ಬಲೆಯಲ್ಲಿ ಸಿಕ್ಕಿತು ಮೃತದೇಹ..!

ಮೀನಿನ ಬಲೆಯಲ್ಲಿ ಸಿಕ್ಕಿತು ಮೃತದೇಹ..!

ಮಂಗಳೂರು: ಕಣ್ಣಿನ ದೃಷ್ಟಿ ದೋಷ ಹೆಚ್ಚಾಯ್ತು!
ಮಣಿಪಾಲ: ರಸ್ತೆ ಗುಂಡಿ ಸಮಸ್ಯೆ ಪರಿಹಾರ
ಮಂಗಳೂರು: ಮತ್ತೆ ಡ್ರಗ್ಸ್ ಮಾಫಿಯಾ ಸದ್ದು!
ಬೆಳ್ತಂಗಡಿ: ವಿಷ ಸೇವಿಸಿ ಭದ್ರತಾ ಸಿಬ್ಬಂದಿ ಆತ್ಮಹತ್ಯೆ
ಬಂಟ್ವಾಳ: ಸಹಪಾಠಿಯೊಂದಿಗೆ ಮಾತನಾಡಿದ್ದಕ್ಕೆ ಜೀವ ಬೆದರಿಕೆ
ಕುಂದಾಪುರ : ಸಿಗರೇಟ್ ಗಾಗಿ ಹೊಡೆದಾಟ; ವ್ಯಕ್ತಿ ಮೇಲೆ ಹಲ್ಲೆ

NAMMUR EXPRESS NEWS
ದಕ್ಷಿಣ ಕನ್ನಡ: ಇಂದಿನ ದಿನಮಾನದಲ್ಲಿ ಮಕ್ಕಳು ಮೊಬೈಲ್, ಐಪ್ಯಾಡ್, ಟಿವಿಗಳನ್ನು ಅಧಿಕ ಪ್ರಮಾಣದಲ್ಲಿ ಬಳಸುತ್ತಿರುವ ಪರಿಣಾಮವಾಗಿ ಮಕ್ಕಳು ದೃಷ್ಟಿದೋಷಕ್ಕೆ ಒಳಗಾಗಿದ್ದಾರೆ ಎಂಬ ವರದಿಯೊಂದು ಹೊರಬಂದಿದೆ. ಇದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಸುಮಾರು 4398 ಮಕ್ಕಳು ಗಂಭೀರವಾದ ದೃಷ್ಟಿದೋಷ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಅಂಧತ್ವ ನಿವಾರಣೆ ಯೋಚನೆಯಡಿಯಲ್ಲಿ 1376 ಸರ್ಕಾರಿ ಹಾಗೂ 1.45.951 ಅನುದಾನಿತ ಶಾಲೆಗಳ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಕಂಡುಬಂದಿದ್ದು ದೃಢಪಟ್ಟಿದೆ. ಇದರಲ್ಲಿ 2066 ಮಕ್ಕಳಿಗೆ ಕನ್ನಡಕದ ಅವಶ್ಯಕತೆ ಬಲವಾಗಿದೆ ಎಂದು ತಿಳಿಸಿದ್ದಾರೆ.‌ ಕೇವಲ ದೃಷ್ಟಿದೋಷ ಅಷ್ಟೇ ಅಲ್ಲದೆ ಮಾನಸಿಕ ಸಮಸ್ಯೆ ಕೂಡ ತಲೆದೋರುತ್ತಿದೆ ಎಂದು ವರದಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಮಣಿಪಾಲ: ರಸ್ತೆ ಗುಂಡಿ ಸಮಸ್ಯೆ ಪರಿಹಾರ

ಉಡುಪಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಪರಿಶೀಲಿಸಿ ಅಲ್ಲಿನ ಸಮಸ್ಯೆಗಳ ಕುರಿತು ಪ್ರಕಟಣೆಯಲ್ಲಿ ತಿಳಿಸಿದರು. ಮಣಿಪಾಲ ಮತ್ತು ಪರ್ಕಳ ನಡುವಿನ ರಸ್ತೆಯಲ್ಲಿ ಗುಂಡಿಗಳಿಂದ ಮತ್ತಷ್ಟು ಸಮಸ್ಯೆ ತಲೆದೋರಿದೆ ಎಂದಿದ್ದಾರೆ. ಗುಂಡಿಗಳನ್ನು ಸರಿಪಡಿಸುವ ಕುರಿತು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದಿದ್ದಾರೆ. ಪರ್ಕಳದ ಹೆದ್ದಾರಿ ಕಾಮಗಾರಿಯೂ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಭೂಮಾಲೀಕರು ಉಚ್ಚ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದ ಕಾರಣ ಅದನ್ನು ತೆರವುಗೊಳಿಸಲು ಒಂದು ವರ್ಷ ಬೇಕಾಯಿತು. ಈಗ ಮತ್ತೆ ತಡೆಯಾಜ್ಞೆ ಬಂದಿರುವ ಪರಿಣಾಮವಾಗಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ, ಸಧ್ಯಕ್ಕೆ ಇಂಜಿನಿಯರ್ ಗಳಿಗೆ ಪರ್ಕಳ ರಸ್ತೆಯನ್ನು ತತಕ್ಷಣ ಸರಿಪಡಿಸುವಂತೆ ಆದೇಶ ಹೊರಡಿಸಲಾಗಿದೆ, ಹಾಗೆಯೇ ಇಂದ್ರಾಳಿ ಮೇಲ್ಸೇತುವೆಯ ಕಾಮಗಾರಿಯು ಅಂತಿಮ ಹಂತದಲ್ಲಿದ್ದು ಆದಷ್ಟು ಬೇಗ ಪೂರ್ಣಗೊಳ್ಳುತ್ತದೆ ಎಂಬ ಮಾಹಿತಿಯನ್ನು ನೀಡಿದರು.

ಮಂಗಳೂರು: ಮತ್ತೆ ಡ್ರಗ್ಸ್ ಮಾಫಿಯಾ ಸದ್ದು!

ಮಂಗಳೂರು: ಮಾದಕ ವಸ್ತುಗಳ ಪೂರೈಕೆಗೆ ಸಂಬಂಧಿಸಿದಂತೆ ಸೆನ್ ಕ್ರೈಮ್ ಪೊಲೀಸ್ ಠಾಣೆಯ ಪೊಲೀಸರು ಎನ್ ಡಿ ಪಿ ಎಸ್ ಕಾಯ್ದೆಯ ಅಡಿಯಲ್ಲಿ ದಾಖಲಿಸಿದ್ದ ಪ್ರಕರಣಗಳನ್ನು ಪರಿಶೀಲಿಸಿ ಸುಮಾರು ಆರು ಮಂದಿ ಆರೋಪಿಗಳನ್ನು ಜುಲೈ ಎರಡರಂದು ಬಂಧಿಸಿದ್ದರು. ಇದೀಗ ಮಧ್ಯಪ್ರದೇಶದ ಕಲಿಯ ನಿವಾಸಿ ಮಾಯಾರಾಮ್, ಮಹಾರಾಷ್ಟ್ರ ಮೂಲದ ಚೋಪ್ಡಾದ ಪ್ರೇಮ್ ಸಿಂಗ್ ರಾಮ್ ಪವಾರ್ ಹಾಗೂ ಅನಿಲ್ ಪ್ರಕಾಶ್ ಕೋಲಿ ಎಂಬ ಮೂವರು ವ್ಯಕ್ತಿಗಳನ್ನು ಹೊರ ರಾಜ್ಯಗಳಿಂದ ಮಾದಕ ವಸ್ತುಗಳನ್ನು ಆಮದು ಮಾಡಿಕೊಂಡು ಮಂಗಳೂರಿನಲ್ಲಿ ವಿವಿಧ ಮಾರ್ಗಗಳ ಮೂಲಕ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ನಗರದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಅದೇ ರೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯು ಮುಂದುವರಿದಿದ್ದು, ಉಳಿದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಮಂಗಳೂರಿನ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

* ವಿಷ ಸೇವಿಸಿ ಭದ್ರತಾ ಸಿಬ್ಬಂದಿ ಆತ್ಮಹತ್ಯೆ

ಬೆಳ್ತಂಗಡಿ: ತಾಲ್ಲೂಕಿನ ಉರುವಾಲು ಗ್ರಾಮದ ಮನೆಗಾರ ಮಜಲು ನಿವಾಸಿ ನೀಲಯ್ಯ ಗೌಡ ಎನ್ನುವವರ ಪುತ್ರ ಸುರೇಶ್ ಎಂಬ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುರೇಶ್ ಅವರು ಪುತ್ತೂರಿನ ಉಪ್ಪಿನಂಗಡಿಯ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ವೈಯಕ್ತಿಕ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸಂಗತಿ ತಿಳಿದು ಬಂದಿದ್ದರೂ, ಹೆಚ್ಚಿನ ಮಾಹಿತಿಗಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

– ಮೀನಿನ ಬಲೆಯಲ್ಲಿ ಸಿಲುಕಿದ ಮಾನವನ ಮೃತದೇಹ!

ಕಾಸರಗೋಡು: ಕಸಬ ಕಡಪ್ಪುರದ ನಿವಾಸಿ ರಮೇಶ್ ಎನ್ನುವವರ ಪುತ್ರ ಆದಿತ್ಯ ಮಂಗಳವಾರ ಸಂಜೆ ಮನೆಯಿಂದ ತೆರಳಿದ್ದು ಮರಳಿ ಬರಲಿಲ್ಲ. ನೀರಿಗೆ ಹರಡಿದ್ದ ಮೀನಿನ ಬಲೆಯಲ್ಲಿ ಆತನ ಮೃತದೇಹ ಸಿಲುಕಿ ಮೀನುಗಾರರ ಕೈಗೆ ಸಿಕ್ಕಿದೆ. ಕೂಡಲೇ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ನಾಪತ್ತೆಯಾಗಿದ್ದ ಆದಿತ್ಯನ ಮೃತದೇಹ ಎನ್ನುವುದು ಸಾಬೀತಾಗಿದೆ.‌ ಆತನ ಮೊಬೈಲ್ ಫೋನ್ ಮತ್ತು ಬೈಕ್ ಮೃತದೇಹ ಸಿಕ್ಕಿದ ಸ್ಥಳದಲ್ಲೇ ಸಿಕ್ಕಿದ್ದು, ಆದಿತ್ಯನ ಮೃತದೇಹದ ಮೇಲೆ ಹಲ್ಲೆ ನಡೆಸಿದ ಮಾದರಿಯಲ್ಲಿ ಗಾಯಗಳಾಗಿದ್ದು, ಪರಿಚಯಸ್ಥರು ನೀಡಿದ ಮಾಹಿತಿಯ ಪ್ರಕಾರ ಆತನ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಕೈಯಲ್ಲಿದ್ದ ಕಡಗ ನಾಪತ್ತೆಯಾಗಿದೆ. ಇದು ಅನುಮಾನಕ್ಕೆ ಆಸ್ಪದ ನೀಡಿದೆ. ಹೆಚ್ಚಿನ ಪರಿಶೀಲನೆಗಾಗಿ ಮೃತದೇಹವನ್ನು ಕಾಸರಗೋಡಿನ ಕಣ್ಣೂರು ಮೆಡಿಕಲ್ ಕಾಲೇಜಿಗೆ ಸಾಗಿಸಲಾಗಿದೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದು ದೃಢಪಟ್ಟಿಲ್ಲ. ದೇಹದ ಪರೀಕ್ಷೆಯ ನಂತರ ಆಸ್ಪತ್ರೆಯವರು ನೀಡುವ ವರದಿಯ ಆಧಾರದ ಮೇಲೆ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಸಹಪಾಠಿಯೊಂದಿಗೆ ಮಾತನಾಡಿದ್ದಕ್ಕೆ ಜೀವ ಬೆದರಿಕೆ

ಬಂಟ್ವಾಳ: ತಾಲ್ಲೂಕಿನ ವಿಟ್ಲದಲ್ಲಿ ಅಪ್ರಾಪ್ತನೊಬ್ಬ ಬಸ್ ನಿಲ್ದಾಣದಲ್ಲಿ ತನ್ನ ಸಹಪಾಠಿ ಹುಡುಗಿಯೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿದ ಮಂಜೇಶ್ವರದ ನಿವಾಸಿ ಪದ್ಮರಾಜ ಎನ್ನುವವನು ಆತನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಧರ್ಮದ ಹೆಸರಿನಲ್ಲಿ ಅನವಶ್ಯಕವಾಗಿ ತನ್ನ ತಮ್ಮನ ಮೇಲೆ ಜೀವಬೆದರಿಕೆ ಹಾಕಿರುವುದನ್ನು ವಿರೋಧಿಸಿದ ಆತನ ಸಹೋದರ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಅಪ್ರಾಪ್ತ ಬಾಲಕನ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪದ್ಮರಾಜನನ್ನು ಬಂಧಿಸಿದ್ದು, ಕಾಲಂ 126(2), 352, 351(3), 196(1) ಬಿ ಎನ್ ಎಸ್ 2023ರ ಅನ್ವಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸಿಗರೇಟ್ ಗಾಗಿ ಹೊಡೆದಾಟ; ವ್ಯಕ್ತಿ ಮೇಲೆ ಹಲ್ಲೆ

ಕುಂದಾಪುರ: ಪ್ರಸಾದ್ ಅಥವಾ ರಬಡ ಎನ್ನುವ ವ್ಯಕ್ತಿಯೊಬ್ಬ ಕುಂದಾಪುರದ ಹಟ್ಟಿಯಂಗಡಿಯ ಹೊಟೇಲ್ ಒಂದಕ್ಕೆ ಆಗಮಿಸಿದ್ದು, ಉಪಹಾರದ ಬಳಿಕ ಹೊಟ್ಟೆಲ್ ನ ಮಾಲೀಕರಲ್ಲಿ ಸಿಗರೇಟ್ ಕೇಳಿದ್ದಾರೆ. ಆಗ ಹೋಟೆಲ್ ಮಾಲೀಕರು ನಾವು ಇಲ್ಲಿ ಊಟ ತಿಂಡಿ ಹೊರತುಪಡಿಸಿ ಬೇರೆ ಏನನ್ನು ಮಾರುವುದಿಲ್ಲ ಎಂದಿದ್ದಾರೆ. ಪ್ರಸಾದ್ ಬೇರೆಡೆಯಿಂದ ತಂದು ಕೊಡುವಂತೆ ಆಜ್ಞಾ ರೂಪದಲ್ಲಿ ಹೇಳಿದ್ದಾನೆ. ಅದಕ್ಕೂ ಪಟೇಲ್ ಮಾಲೀಕರು ಸ್ಪಂದಿಸದಿದ್ದಾಗ ಅವರೊಂದಿಗೆ ಜಗಳಕ್ಕೆ ಬಿದ್ದಿದ್ದಾನೆ. ಅದೇ ಹೋಟೆಲ್ ಗೆ ಆಗಮಿಸಿದ ಉತ್ತರ ಕನ್ನಡ ಜಿಲ್ಲೆಯ ಗಣೇಶ್ ಎನ್ನುವವರು ಪ್ರಸಾದ್ ಹೋಟೆಲ್ ಮಾಲೀಕರೊಂದಿಗೆ ಜಗಳ ಕಾಯುತ್ತಿರುವುದನ್ನು ನೋಡಿದರು. ನೋಡಿದರು ಎನ್ನುವ ಒಂದೇ ಕಾರಣಕ್ಕೆ ಪ್ರಸಾದ್ ಆತನಿಗೆ ಬೈದಿದ್ದಷ್ಟೇ ಅಲ್ಲದೆ ಗಾಜಿನ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸಾದ್ ನಿಂದ ಹಲ್ಲೆಗೊಳಗಾದ ಗಣೇಶ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.