Categories
ಕರಾವಳಿ ಕಾರ್ಕಳ

ಡಾ. ಮೋಹನ್ ಆಳ್ವ 72ನೇ ಜನ್ಮ ದಿನ: ಕಾರ್ಕಳದಲ್ಲಿ ಸವ್ಯಸಾಚಿ ಸಂಭ್ರಮ!

ಡಾ. ಮೋಹನ್ ಆಳ್ವ 72ನೇ ಜನ್ಮ ದಿನ: ಕಾರ್ಕಳದಲ್ಲಿ ಸವ್ಯಸಾಚಿ ಸಂಭ್ರಮ!
– ಮೇ 31ರ ಶುಕ್ರವಾರ ಸಂಜೆ ಜ್ಞಾನಸುಧಾ ಆವರಣದಲ್ಲಿ ಕಾರ್ಯಕ್ರಮ
– ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಚನ
– ಆಳ್ವ ಅವರ ಅಭಿಮಾನಿಗಳು, ಶಿಶಿಷ್ಯಂದಿರ ಸಮಾಗಮ

NAMMUR EXPRESS NEWS
ಕಾರ್ಕಳ: ರಾಜ್ಯದ ಶಿಕ್ಷಣ ದಾಸೋಹದ ಸಂತ, ಶಿಕ್ಷಣ ತಜ್ಞ, ಆಳ್ವಾಸ್ ಶಿಕ್ಷಣ ಸಂಸ್ಥಾಪಕ ಮೋಹನ್ ಆಳ್ವ ಅವರ ಜನ್ಮ ದಿನ ಜೂ.31ರಂದು ಕಾರ್ಕಳದಲ್ಲಿ ಸವ್ಯಸಾಚಿ ಸಂಭ್ರಮ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಮೇ 31ರ ಶುಕ್ರವಾರ ಸಂಜೆ ಕಾರ್ಕಳ ಗಣಿತ ನಗರದ ಜ್ಞಾನಸುಧಾ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಚನ ನೀಡಲಿದ್ದಾರೆ. ದೇಶದಲ್ಲೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಲಕ್ಷ ಲಕ್ಷ ಮಂದಿಗೆ ಉದ್ಯೋಗದಾತರಾಗಿದ್ದು, ಕೋಟ್ಯಂತರ ವಿದ್ಯಾರ್ಥಿಗಳ ಬದುಕಿಗೆ ಗುರುಗಳಾಗಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರನ್ನು ಅವರ ಜನ್ಮ ದಿನದಂದು ಗೌರವಿಸುವ ಅವಿಸ್ಮರಣೀಯ ಕಾರ್ಯಕ್ರಮ ಇದಾಗಿದೆ.

ಕಾರ್ಕಳದ ಜ್ಞಾನಸುಧಾ ಆವರಣದಲ್ಲಿ ಸವ್ಯಸಾಚಿ ಸಂಭ್ರಮ

ಮೇ 31ರ ಶುಕ್ರವಾರ ಸಂಜೆ 5:30ಕ್ಕೆ ಕಾರ್ಕಳದ ಜ್ಞಾನಸುಧಾ ಆವರಣದಲ್ಲಿ ಸವ್ಯಸಾಚಿ ಸಂಭ್ರಮ ನಡೆಸಲಾಗುವುದು. ಡಾ. ಮೋಹನ್ ಆಳ್ವ ನಮ್ಮ ನಡುವಿನ ಅಚ್ಚರಿ. ನಿಂತ ಜಾಗದಿಂದಲೇ ಭೂಮಿ ಆಕಾಶವನ್ನು ಅಳೆದ ತ್ರಿವಿಕ್ರಮನ ರೀತಿ ಮೂಡುಬಿದಿರೆಯಲ್ಲಿ ನೆಲೆ ನಿಂತು ಜಗತ್ತು ತಮ್ಮತ್ತ ನೋಡುವಂತೆ ಮಾಡಿದ ಸವ್ಯಸಾಚಿ. ಕಲೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಆಡಳಿತ, ಉದ್ಯಮ, ವೈದ್ಯಕೀಯ ಸೇರಿದಂತೆ ಬಹುಮುಖಿ ಚಟುವಟಿಕೆಗಳ ಮೂಲಕ ಮಾದರಿಯಾದ ಆಳ್ವರಿಗೆ ಈಗ 72. ಈ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಅವರ ಬಂದು ಮಿತ್ರರು ಆತ್ಮೀಯರು ಸೇರಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಆಶೀರ್ವಚನ ನೀಡಲಿದ್ದಾರೆ. ಹಾಗೂ ಕಾರ್ಯಕ್ರಮವು ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಎನ್ ವಿನಯ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್, ಅಜೆಕಾರ್ ಪದ್ಮ ಗೋಪಾಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ, ಹಾಗೂ ಆಳ್ವರ ಅಭಿಮಾನಿ ಬಳಗ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.