Categories
ಕರಾವಳಿ

ಉಡುಪಿಯಲ್ಲಿ ಡ್ರೋನ್ ಮೂಲಕ ಸಿಡಿಮದ್ದು ದಾಳಿ: ಗಂಭೀರ ಗಾಯ!

ಕರಾವಳಿ ಟಾಪ್ ನ್ಯೂಸ್!

ಉಡುಪಿಯಲ್ಲಿ ಡ್ರೋನ್ ಮೂಲಕ ಸಿಡಿಮದ್ದು ದಾಳಿ: ಗಂಭೀರ ಗಾಯ!

– ಬಂಟ್ವಾಳ: ಓವರ್‌ಟೇಕ್‌ ಭರದಲ್ಲಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ KSRTC; ಸವಾರ ಸಾವು
– ಮುಲ್ಕಿ: ಬೈಕ್ ಅಪಘಾತ- ಕಾಲೇಜು ವಿದ್ಯಾರ್ಥಿ ಮೃತ್ಯು

NAMMUR EXPRESS NEWS
ಕಾಪು: ಉಡುಪಿ ಜಿಲ್ಲೆಯ ಕಾಪು ಹೊರವಲಯದಲ್ಲಿರುವ ಪಾದೂರು ತೈಲಾಗಾರದ ಮೇಲೆ ಡ್ರೋನ್ ಮೂಲಕ ಸಿಡಿಮದ್ದು ದಾಳಿ ನಡೆದಿದೆ. ದಿಢೀರ್ ನಡೆದ ಘಟನೆಯಲ್ಲಿ ಸುತ್ತಲೂ ಬೆಂಕಿ ವ್ಯಾಪಿಸಿಕೊಂಡಿದೆ.
ಕೂಡಲೇ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಸೈರನ್ ಮೊಳಗಿ ಎಚ್ಚರಿಕೆ ಗಂಟೆ ಬಾರಿಸಲಾಗಿದೆ. ಅಗ್ನಿಶಾಮಕ ದಳದ ಜೊತೆ ಕಾರ್ಕಳದ ಅಗ್ನಿಶಾಮಕ ತಂಡವುಹ ಕೈ ಜೋಡಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಕಂಪೆನಿಯ ಒಳಗೆ ಕರ್ತವ್ಯ ನಿರ್ವಹಿಸುತ್ತಿದ್ದ ಒಟ್ಟು ಮೂವತ್ತೈದು ಸಿಬ್ಬಂದಿಗೂ ಹೆಚ್ಚಿನವರು ಗಾಯಗೊಂಡಿದ್ದಾರೆ. ಉಳಿದವರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಆ್ಯಂಬುಲೆನ್ಸ್ ಮುಖೇನ ಆಸ್ಪತ್ರೆಗೆ ಸಾಗಿಸಲಾಗಿದೆ. ಇದೊಂದು ಅಣಕು ಪ್ರದರ್ಶನವಾಗಿದ್ದು ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ಹತೋಟಿಗೆ ಬಂದ ನಂತರ ಈ ಅಣಕು ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು.

– ಬಂಟ್ವಾಳ: ಓವರ್‌ಟೇಕ್‌ ಭರದಲ್ಲಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ KSRTC ಬಸ್‌; ಸವಾರ ಸಾವು

ಬಂಟ್ವಾಳ: ಪಾಣೆಮಂಗಳೂರಿನ ನೆಹರೂನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಓವರ್‌ಟೇಕ್‌ ಮಾಡುವ ಭರದಲ್ಲಿ ಸ್ಕೂಟರ್‌ಗೆ ಡಿಕ್ಕಿಯಾಗಿದ್ದು ಸವಾರನೋರ್ವ ಮೃತಪಟ್ಟ ಘಟನೆ ಮೇ 18 ತಡರಾತ್ರಿ ನಡೆದಿದೆ.
ಅಲಿಸ್ಟರ್‌ ಡಿಸೋಜ (24) ಮೃತಪಟ್ಟ ವ್ಯಕ್ತಿ. ವಿಟ್ಲದಲ್ಲಿ ನಡೆದ ಗೃಹಪ್ರವೇಶದಲ್ಲಿ ಪಾಲ್ಗೊಂಡು ಬೈಕಿನಲ್ಲಿ ಸ್ನೇಹಿತರ ಜೊತೆ ಮಂಗಳೂರಿಗೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಅಂಬಾರಿ ಬಸ್ಸು ನೆಹರೂನಗರದಲ್ಲಿ ಟೆಂಪೋ ಟ್ರಾವೆಲರನ್ನು ಓವರ್‌ಟೇಕ್‌ ಮಾಡಲು ಹೋಗಿ ಸ್ಕೂಟರಿಗೆ ಡಿಕ್ಕಿ ಹೊಡೆದಿದೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮುಲ್ಕಿ: ಬೈಕ್ ಅಪಘಾತ- ಮುಲ್ಕಿ ಕಾಲೇಜು ವಿದ್ಯಾರ್ಥಿ ಮೃತ್ಯು 

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಪೇಟೆಯಲ್ಲಿ ಬೈಕ್ ಮತ್ತು ಲಾರಿ ಅಪಘಾತ ಹಿನ್ನಲೆಯಲ್ಲಿ ಲಾರಿ ಹರಿದು ಬೈಕ್ ಸಹ ಸವಾರ ಮೃತಪಟ್ಟಿದ್ದಾನೆ
ಮೃತ ವಿದ್ಯಾರ್ಥಿಯನ್ನು ಕೇರಳ ತಿರುವನಂತಪುರ ಮೂಲದ ಮುಲ್ಕಿ ಸೈಂಟ್ ಆನ್ಸ್ ಕಾಲೇಜು ವಿದ್ಯಾರ್ಥಿ ಸುಗಂಧ್ (21) ಎಂದು ಗುರುತಿಸಲಾಗಿದೆ
ಬೈಕ್ ಸವಾರ ಇನ್ಸಾಫ್ (21) ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿರುವ ಲಾರಿ ಹಾಗೂ ಸುರತ್ಕಲ್ ನಿಂದ ಮೂಲ್ಕಿ ಕಡೆಗೆ ಪ್ರಯಾಣಿಸುತ್ತಿರುವ ಬೈಕ್ ಹಳೆಯಂಗಡಿ ಮುಖ್ಯ ರಸ್ತೆಯ ಬ್ಯಾರಿಕೇಡ್ ಬಳಿ ಸಿಕ್ಕಿಹಾಕಿಕೊಂಡು ಅಫಘಾತ ಸಂಭವಿಸಿದೆ. ಲಾರಿ ಚಾಲಕ ಮಂಜುನಾಥ ಚೂರಿ ವಿರುದ್ದ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.