Categories
ಕರಾವಳಿ

ಪರಿಸರ ಅಸಮತೋಲನ, ಪಕ್ಷಿಗಳ ವಲಸೆಯಲ್ಲಿ ಏರುಪೇರು

ಕಾರ್ಕಳ : ಪರಿಸರದ ಅಸಮತೋಲನವು ಪಕ್ಷಿಗಳ ಮೇಲು ಭಾರಿ ಪರಿಣಾಮ ಬೀರಿದೆ. ಅಕಾಲಿಕ ಮಳೆ, ಕಲುಶಿತ ಜಲಮೂಲಗಳು, ಪರಿಸರದ ಮೇಲೆ ಅತಿಯಾದ ಮಾನವ ಹಸ್ತಕ್ಷೇಪಗಳಿಂದ ಪಕ್ಷಿಗಳ ವಲಸೆಯಲ್ಲಿ ಏರುಪೇರು ಉಂಟಾಗಿದೆ. ಅದರಲ್ಲೂ ಮಂಗಳೂರಿನ ಹಾಟ್‌ಸ್ಪಾಟ್‌ಗಳಿಗೆ ವಲಸೆ ಹಕ್ಕಿಗಳ ಆಗಮನ ವಿಳಂಬವಾಗುತ್ತಿರುವುದು ಪಕ್ಷಿಪ್ರೇಮಿಗಳನ್ನು ಚಿಂತೆಗೀಡು ಮಾಡಿದೆ. ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ವಟಿ ಕೆ. ಕಳವಳ ವ್ಯಕ್ತಪಡಿಸಿದ್ದಾರೆ.
ಕರಾವಳಿಯತ್ತ ವಲಸೆ ಪ್ರತಿ ವರ್ಷ ನವೆಂಬರ್ ತಿಂಗಳಿನಿಂದ ಫೆಬ್ರವರಿ ಮೊದಲ ವಾರದಲ್ಲಿ ಹಕ್ಕಿಗಳು ಕರಾವಳಿಯತ್ತ ವಲಸೆ ಬರುವುದು ವಾಡಿಕೆಯಾಗಿದೆ. ಫೆಬ್ರವರಿ ತಿಂಗಳಲ್ಲಿ ಹಕ್ಕಿಗಳ ವೀಕ್ಷಣೆ ‌ಹಾಗು ಏಣಿಕೆ ಕಾರ್ಯಕ್ಕೆ ಸೂಕ್ತ ಸಮಯವಾಗಿದೆ. ಆದರೆ ಈ ಬಾರಿ ಹಕ್ಕಿಗಳ ವಲಸೆಯಲ್ಲಿ ಕುಸಿತವಾಗಿದೆ.

ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ : 
ಕರಾವಳಿ ಕರ್ನಾಟಕ ಪಕ್ಷಿ ವೀಕ್ಷಕರ ನೆಟ್‌ವರ್ಕ್‌ನ ಬರ್ಡರ್ ವಿವೇಕ್ ನಾಯಕ್  ಮಾಹಿತಿ ಪ್ರಕಾರ, ಹವಾಮಾನ ಬದಲಾವಣೆಯು ಅತಿಯಾದ ಅಭಿವೃದ್ಧಿ ಕಾರ್ಯಗಳು, ಮಲಿನ ನೀರು ಪಕ್ಷಿಗಳ ವಲಸೆಯ‌ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಆವಾಸ್ಥಾನದ ನಷ್ಟದ ಪರಿಣಾಮವಾಗಿದೆ. ನವೆಂಬರ್ 2023 ರಿಂದ ಮಾರ್ಚ್ 2024 ರವರೆಗೆ, ಸುಮಾರು 60-65 ವಲಸೆ ಪ್ರಭೇದಗಳು ದಾಖಲಾಗಿತ್ತು ಈ ಬಾರಿ ಕೇವಲ ಕೇವಲ 7-10 ಹಕ್ಕಿ  ಪ್ರಭೇದಗಳು ಮಾತ್ರ ಕಾಣಿಸಿಕೊಂಡಿವೆ.

ಸಿಹಿ ನೀರಿನ ಪ್ರದೇಶಗಳೆ ವಲಸೆ ಹಕ್ಕಿಗಳ ಹಾಟ್ಸ್ಪಾಟ್ :
ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ವಟಿ  ಕೆ.  ಹಕ್ಕಿಗಳ ವಲಸೆ ಋತುವಿನಲ್ಲಿ ಸಂದರ್ಭದಲ್ಲಿ ಸರಾಸರಿ 70 ಜಾತಿಯ ಪಕ್ಷಿಗಳನ್ನು ದಾಖಲಿಸಿದ್ದಾರೆ. ಪಕ್ಷಿಗಳು ಹೆಚ್ಚಾಗಿ ಸಿಹಿ ನೀರಿನ ಜೌಗು ಪ್ರದೇಶಗಳಿಂದ ಆವೃತವಾಗಿರುವ ಮಂಜಲ್ಪಾದೆ, ಕೆಂಜಾರ್ ಮತ್ತು ಜೋಕಟ್ಟೆಯಂತಹ ಸಾಂಪ್ರದಾಯಿಕ ಸ್ಥಳಗಳಲ್ಲಿ ಕಾಣಿಸುತ್ತವೆ. ಸಿಹಿ ನೀರಿನ ಜೌಗು ಪ್ರದೇಶಗಳು, ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ಪರಿಸರ ವ್ಯವಸ್ಥೆಗಳಾಗಿವೆ. ಅವು ನೈಸರ್ಗಿಕ ಫಿಲ್ಟರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ, ನೀರನ್ನು ಶುದ್ಧೀಕರಿಸುತ್ತವೆ ಮತ್ತು ಮಾಲಿನ್ಯವನ್ನು ತಗ್ಗಿಸುತ್ತವೆ. ಈ ಪರಿಸರ ವ್ಯವಸ್ಥೆಗಳು ನಿರ್ಣಾಯಕ ಪ್ರವಾಹ ಬಫರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ, ಭಾರೀ ಮಳೆಯ ಸಮಯದಲ್ಲಿ ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತವೆ ಮತ್ತು ಕರಾವಳಿ ಸವೆತದ ಪರಿಣಾಮವನ್ನು ತಗ್ಗಿಸುತ್ತವೆ. ಇದಲ್ಲದೆ, ಅವು ಅಸಂಖ್ಯಾತ ಪಕ್ಷಿ ಪ್ರಭೇದಗಳನ್ನು ಒಳಗೊಂಡಂತೆ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ಅಗತ್ಯವಾದ ಆವಾಸಸ್ಥಾನಗಳನ್ನು ಒದಗಿಸುತ್ತವೆ.
ಮಂಗಳೂರಿನ ಜೌಗು ಪ್ರದೇಶಗಳು ನಿವಾಸಿ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ. ಸಿಹಿನೀರಿನ ಜೌಗು ಪ್ರದೇಶಗಳು, ಬಾತುಕೋಳಿಗಳು ಮತ್ತು ಬೆಳ್ಳಕ್ಕಿಗಳು ಸೇರಿದಂತೆ ವಿವಿಧ ಜಲಪಕ್ಷಿಗಳನ್ನು ಆಕರ್ಷಿಸುತ್ತವೆ. ಈ ಪ್ರಶಾಂತವಾದ ಜಲಮೂಲಗಳು ಹಲವಾರು ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತವೆ.

ಕುಸಿತಗೊಂಡ ವಲಸೆ ಹಕ್ಕಿಗಳು : 
ಬಾಯ್ ವೀವರ್, ಜಾಕೋಬಿನ್ ಕುಕ್ಕೂ, ಬಾಂಡೆಡ್ ಬೆ ಕುಕ್ಕೂ, ಬ್ಲೂ ಥ್ರೋಟ್ ಫೈಕ್ಯಾಚರ್, ಇಂಡಿಯನ್ ಬ್ಲಾಕ್ಬರ್ಡ್, ಇಂಡಿಯನ್ ಬ್ಲೂ ರಾಬಿನ್ ಏಶಿಯನ್ ಓಪನ್ ಬಿಲ್, ಏಷಿಯಾನಾ ಔಉಲ್ಲಿ ನೆಕ್ ರೋಸಿ ಸ್ಟರ್ಲಿಂಗ್, ಅರೆಂಜ್ ಹೆಡೆಡ್ ಟ್ರಷ್, ‌ಸ್ಟ್ರಾಕ್ ಬಿಲ್ಲೆ್ಡ್ ಕಿಂಗ್ ಫಿಶರ್ ಈ ಹಕ್ಕಿಗಳು ಬರಿ ಅಪರೂಪದಲ್ಲಿ  ಕಾಣಸಿಗುತ್ತವೆ ಎಂದು ಮಣಿಪಾಲದ  ಪಕ್ಷಿ ವೀಕ್ಷಕರಾದ ಪಿ ಎಚ್ ಡಿ ವಿದ್ಯಾರ್ಥಿ ಮಹೀಮ್ ಭಟ್  ತಿಳಿಸಿದ್ದಾರೆ.

“ಸಿಹಿ ನೀರಿನ ಜೌಗು ಪ್ರದೇಶದ ಗಳಲ್ಲಿ ಮಂಜಲ್ಪಾದೇ, ಕೆಂಜಾರ್ ಮತ್ತು ಜೋಕಟ್ಟೆಯಂತಹ ಸಾಂಪ್ರದಾಯಿಕ ಸ್ಥಳಗಳಲ್ಲಿ ವಲಸರ ಹಕ್ಕಿಗಳು ಹಾಗೂ ಸಾಂಪ್ರದಾಯಿಕ ಹಕ್ಕಿಗಳು ಕೂಡ ಕಾಣಿಸುತ್ತವೆ. ಸಿಹಿ ನೀರಿನ ಜೌಗು ಪ್ರದೇಶಗಳು, ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪ್ರಮುಖ ಪರಿಸರ ವ್ಯವಸ್ಥೆಗಳಾಗಿವೆ.ಈ ಬಾರಿ ಅತಿಯಾದ ಪರಿಸರದ ಮೇಲಿನ ಮಾನವ ಹಸ್ತಕ್ಷೇಪಗಳು ಹಾಗೂ ಮಲಿನತೆ, ಪರಿಸರ ಅಸಮತೋಲನಗಳಿಂದ ವಲಸೆ ಪಕ್ಷಿಗಳ ಸಂಖ್ಯೆ 7 ಪ್ರಭೇದಗಳಿಗೆ ಸೀಮಿತವಾಗಿದೆ.‌” ಎನ್ನುತ್ತಾರೆ  ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ಪ್ರಾಣಿ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ವಟಿ ಕೆ. 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.