Categories
ಕರಾವಳಿ ಕಾರ್ಕಳ ದಿನ ರಾಶಿ ಭವಿಷ್ಯ ಮಂಗಳೂರು

ಶಿಕ್ಷಣ ತಜ್ಞ ಶರತ್ ಗೋರೆ ಅವರಿಗೆ ಗೌರವ ಡಾಕ್ಟರೇಟ್

ಶಿಕ್ಷಣ ತಜ್ಞ ಶರತ್ ಗೋರೆ ಅವರಿಗೆ ಗೌರವ ಡಾಕ್ಟರೇಟ್
– ಭೌತಶಾಸ್ತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಸಾಧಾರಣ ಸೇವೆಗಾಗಿ ಗೌರವ
– ಅಮೇರಿಕಾದ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ

NAMMUR EXPRESS NEWS
ಮೂಡಬಿದಿರೆ: ಕರಾವಳಿಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಒಂದಾದ ಮೂಡಬಿದಿರೆಯ ನ್ಯೂ ವೈಬ್ರಂಟ್ ಪಿಯು ಕಾಲೇಜಿನ ಟ್ರಸ್ಟಿ ಹಾಗೂ ನಿರ್ದೇಶಕರು ಹಾಗೂ ಬ್ರೈಟ್ ಹೊರೈಜನ್ ಇಂಟರ್ನ್ಯಾಷನಲ್ ಸ್ಕೂಲ್‌ನ ಸಂಸ್ಥಾಪಕರಾಗಿರುವ ಶ್ರೀ ಶರತ್ ಗೋರೆ ಅವರು ಅಮೇರಿಕಾದ ವಿವಿ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

ಭೌತಶಾಸ್ತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಸಾಧಾರಣ ಸೇವೆಗಾಗಿ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ, ಡೆಲವೇರ್ (ಅಮೇರಿಕಾ) ಅವರು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನಿಸಿ ಗೌರವಿಸಿದ್ದಾರೆ. ಈ ಗೌರವ ಪ್ರಶಸ್ತಿ ಅಕ್ಟೋಬರ್ 11 ರಂದು ಪುದುಚೇರಿಯ ಕಂಬನ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ಅವರ ಭೌತಶಾಸ್ತ್ರ ಕ್ಷೇತ್ರದ ಜ್ಞಾನ, ಶಿಕ್ಷಣ ಕ್ಷೇತ್ರದ ನಿಷ್ಠೆ, ವಿದ್ಯಾರ್ಥಿ ಕೇಂದ್ರಿತ ದೃಷ್ಟಿಕೋನ ಮತ್ತು ಸಾಮಾಜಿಕ ಬದ್ಧತೆಯ ಪ್ರತಿಫಲವಾಗಿದೆ. ಈಗಾಗಲೇ ಭೌತ ಶಾಸ್ತ್ರದ ಬಗ್ಗೆ ನೂರಾರು ಸೆಮಿನಾರ್ ನೀಡಿರುವ ಗೋರೆ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.