Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ವಾಶ್ ರೂಂನಲ್ಲಿ ವಿಡಿಯೋ: ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
– ಬೈಕಂಪಾಡಿ ಕೊಲೆ ಪ್ರಕರಣ ಕಣ್ಣೂರಿನ ವ್ಯಕ್ತಿ ಅರೆಸ್ಟ್.
– ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನ: ವಿಡಿಯೋ ವೈರಲ್!
– ವ್ಯಕ್ತಿಯೋರ್ವನಿಂದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ

NAMMUR EXPRESS NEWS
ಉಡುಪಿ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಬಾಲಕಿಯರ ವಾಶ್ ರೂಂನಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಮೂವರು ಹಿರಿಯ ವಿದ್ಯಾರ್ಥಿನಿಯರು ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಕಾಲೇಜು ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಉಡುಪಿಯ ಮಲ್ಪೆ ಪ್ರದೇಶದಲ್ಲಿ ಜುಲೈ 25 ರಂದು ಸಂಸ್ಥೆಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕಾಲೇಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜುಲೈ 18 ರಂದು ಘಟನೆ ನಡೆದಾಗ ಕಾಲೇಜಿನಿಂದ ಘಟನೆಯ ಬಗ್ಗೆ ನಮಗೆ ತಿಳಿಸಲಾಗಿಲ್ಲ ಎಂದು ಪೊಲೀಸರು ತಪ್ಪಾಗಿ ಹೇಳಿಕೆ ನೀಡಿದ್ದಾರೆ ಎಂದು ಹೈಕೋರ್ಟ್‌ಗೆ ತಿಳಿಸಲಾಗಿದೆ. ಆರೋಪಿ ನಂ.4, ಕಾಲೇಜಿನ ಘಟನೆಯನ್ನು ಪೊಲೀಸರಿಗೆ ತಿಳಿಸಿಲ್ಲ ಎಂಬ ಆರೋಪವು ವಾಸ್ತವಿಕವಾಗಿ ಸರಿಯಾಗಿಲ್ಲ, ಇದು ಕಾಲೇಜಿನ 22.7.2023 ರಂದು ಸಂಬಂಧಿಸಿದ ಪೊಲೀಸ್ ಠಾಣೆಗೆ ಸಲ್ಲಿಸಿದ ಸಂವಹನದಿಂದ ಸ್ಪಷ್ಟವಾಗಿದೆ” ಎಂದು ಹೈಕೋರ್ಟಿಗೆ ತಿಳಿಸಲಾಗಿದೆ. ತನಿಖೆಗೆ ತಡೆ ನೀಡುವ ಮಧ್ಯಂತರ ಆಜ್ಞೆಯನ್ನು ನೀಡುವಾಗ ಹೈಕೋರ್ಟ್‌ ಈ ವಾದವನ್ನು ಗಮನಿಸಿದೆ.

ಬೈಕಂಪಾಡಿ ಕೊಲೆ ಪ್ರಕರಣ ಕಣ್ಣೂರಿನ ವ್ಯಕ್ತಿ ಅರೆಸ್ಟ್.

ಬೈಕಂಪಾಡಿ ಎಪಿಎಂಸಿ ಕಟ್ಟಡದ ಬಳಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ಮನು ಸೆಬಾಸ್ಟಿಯನ್(33) ಎಂದು ಗುರುತಿಸಲಾಗಿದೆ. ಸಂದೇಹಾಸ್ಪದ ಮೃತ ಸ್ಥಿತಿಯಲ್ಲಿ 45 ವರ್ಷ ಪ್ರಾಯದ ಓರ್ವನ ಶವ ಪತ್ತೆಯಾಗಿತ್ತು. ಮೈಯಲ್ಲಿ ಗಾಯದ ಗುರುತು ಕಂಡು ಬಂದು ಕೊಲೆ ಶಂಕೆಯಲ್ಲಿ ತನಿಖೆ ಮುಂದುವರಿಸಿದಾಗ ಕಣ್ಣೂರಿನ ನಿವಾಸಿ ಮನು ಸೆಬಾಸ್ಟಿಯನ್ ಬಲೆಗೆ ಬಿದ್ದಿದ್ದಾನೆ.

ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನ: ವಿಡಿಯೋ ವೈರಲ್!

ಪುತ್ತೂರು ತಾಲೂಕು ಕಟ್ಟತ್ತಾರಿನಲ್ಲಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಸೆಲ್ಸಿ ವೀಡಿಯೋ ಮಾಡಿದ ನಂತರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ವೃತ್ತಿಯಲ್ಲಿ ತಾನು ಚಾಲಕನಾಗಿದ್ದು ಮಾಲಕರು ತನ್ನ ಮೇಲೆ ಹಲ್ಲೆ ನನ್ನ ಮೇಲೆ ಹಲ್ಲೆ ನಡೆಸಿದ್ದು ಈ ಒಂದು ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದೆಂದು ವೀಡಿಯೋದಲ್ಲಿ ಹೇಳಿದ್ದು ಈ ವೀಡಿಯೋ ಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರವಾಗಿದ್ದು ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕರೆದೊಯ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವ್ಯಕ್ತಿಯೋರ್ವನಿಂದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ

ವ್ಯಕ್ತಿಯೋರ್ವ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಡಗನ್ನೂರಿನಲ್ಲಿ ನಡೆದಿದೆ. ಸುಳ್ಯ ನಿವಾಸಿ ಸುರೇಶ್ ಎಂಬಾತ, ಬಡಗನ್ನೂರು ನಿವಾಸಿ ಸುರೇಖ(54) ಹಾಗು ಆಲಂಕಾರ್ ಕುಂತೂರು ನಿವಾಸಿ ಗಿರಿಜಾ(52) ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ. ಸುರೇಖ ಹಾಗು ಗಿರಿಜಾ ಅವರು ಗುಡ್ಡದಲ್ಲಿ ಅಣಬೆ ಹೆಕ್ಕುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಸುರೇಶ್ ಕುತ್ತಿಗೆಯನ್ನು ಬೀಗಿಯಾಗಿ ಹಿಡಿದು, ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಸುರೇಶ್‌ ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಗಿರಿಜಾ ಹಾಗು ಸುರೇಖ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.