ಕರಾವಳಿ ಟಾಪ್ ನ್ಯೂಸ್
* ಹೆಬ್ರಿ: ವಿದ್ಯುತ್ ತಂತಿಯ ಮೇಲೆ ಮರ; ಅಪಾಯದಿಂದ ಪಾರು
* ಉಡುಪಿ: ವ್ಯಾಪಾರಸ್ಥರಲ್ಲಿ ಜಿ.ಎಸ್ ಟಿ ನೋಟಿಸ್ ಆತಂಕ
* ಮೂಡಬಿದರೆ: ಗುಡ್ಡ ಕುಸಿತ; ಸಂಚಾರ ಬಂದ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೆಬ್ರಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಶಿವಪುರ ಗ್ರಾಮದ, ರಾಷ್ಟ್ರೀಯ ಹೆದ್ದಾರಿ ಸಮೀಪದ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮವಾಗಿ, ಸುಮಾರು ಏಳು ವಿದ್ಯುತ್ ಕಂಬಗಳು ರಸ್ತೆಯ ನಡುವೆ ಬಿದ್ದಿದ್ದು, ವಾಹನ ಸವಾರರು ಕ್ಷಣ ಮಾತ್ರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಯಾರಿಗೂ ಯಾವುದೇ ರೀತಿಯ ತೊಂದರೆ ಸಂಭವಿಸಿಲ್ಲ ಎಂದು ಸಾರ್ವಜನಿಕರು ಸ್ಪಷ್ಟಪಡಿಸಿದ್ದಾರೆ. ಸಂಜೆ ಸುಮಾರು ಒಂದುವರೆ ಗಂಟೆಗಳ ಕಾಲ ಸಂಚಾರವು ಸ್ಥಗಿತಗೊಳಿಸಿ, ವಿದ್ಯುತ್ ಕಚೇರಿಯ ಸಿಬ್ಬಂದಿಗಳೊಂದಿಗೆ ಶ್ರೀನಿವಾಸ್ ಹೆಬ್ಬಾರ್ ಅವರ ತಂಡವು ವಿದ್ಯುತ್ ಕಂಬಗಳನ್ನು ರಸ್ತೆಯಿಂದ ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಯಿತು.
* ಉಡುಪಿ: ಡಿಜಿಟಲ್ ಪೇಮೆಂಟ್ ಹಾಗೂ ಟ್ಯಾಕ್ಸ್ ಇದೀಗ ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಇದೀಗ ಜನರಿಗೆ ತುರ್ತು ಹಣ ಕೂಡ ಸಿಗುತ್ತಿಲ್ಲ. ಉಡುಪಿಯ ಒಬ್ಬರು ವರ್ತಕರು “ಪರಿಚಯಿಸ್ತರು ಏಟಿಎಂ ಗೆ ಹೋಗುವ ಬದಲು, ಇಲ್ಲಿಗೆ ಬಂದು ಹಣವನ್ನು ಯುಪಿಐ ಮೂಲಕ ಕಳುಹಿಸುತ್ತೇವೆ, ತುರ್ತಾಗಿ ನಗದು ಹಣ ಬೇಕಾಗಿದೆ ನೀಡಿ ಎಂದು ಕೇಳುತ್ತಾರೆ. ನೀಡದಿದ್ದರೆ ವಿಶ್ವಾಸ ಹಾಳಾಗುತ್ತದೆ, ನೀಡಿದರೆ ವ್ಯಾಪಾರ ಮಿತಿಮೀರುತ್ತದೆ. ಹೀಗಾಗಿ ನಾವು ಯುಪಿಐ ಸ್ಕ್ಯಾನರ್ ಅನ್ನು ತೆಗೆದು ಹಾಕಿದ್ದೇವೆ” ಎಂದು ಹೇಳಿಕೆ ನೀಡಿದ್ದಾರೆ. ಮತ್ತೊಬ್ಬ ವರ್ತಕರು “ನಾವು ನಲವತ್ತು ಲಕ್ಷ ಮೀರಿದಾಗ ಜಿಎಸ್ ಟಿಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತೇವೆ. ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದೇವೆ ಹೀಗಾಗಿ ನಮಗೆ ಯಾವುದೇ ರೀತಿಯ ನೋಟೀಸ್ ಬಂದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಮೂಡಬಿದರೆ: ಮಳೆಯ ತೀವ್ರತೆಯಿಂದಾಗಿ ಗುಡ್ಡ ಕುಸಿದು, ಕಂಬಳಪದವು ಸಮೀಪದ ಮಿತ್ತಕೋಡಿ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಮತ್ತೆ ಗುಡ್ಡ ಕುಸಿಯುವ ಭೀತಿ ಇರುವುದರಿಂದ ಅಧಿಕಾರಿಗಳು ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೊಣಾಜೆ ಗ್ರಾಮದ ನಡಪದವು ಕ್ರಾಸ್ ಬಳಿ ಮರವೊಂದು ರಸ್ತೆಗೆ ಉರುಳಿ, ವಾಹನ ಸಂಚಾರಕ್ಕೆ ಮತ್ತೊಂದು ರೀತಿಯ ಸಮಸ್ಯೆಯನ್ನು ಉಂಟುಮಾಡಿತು ಎನ್ನಲಾಗಿದೆ.