Categories
ಕರಾವಳಿ

ಕಾರ್ಕಳ: 2 ದಿನದ ಹಸುಗೂಸನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಹೆತ್ತವರು!

ಕರಾವಳಿ ಟಾಪ್ ನ್ಯೂಸ್!

ಕಾರ್ಕಳ: 2 ದಿನದ ಹಸುಗೂಸನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಹೆತ್ತವರು!

* ಹೆಬ್ರಿ: ಉದ್ಯಮಿಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ವಸ್ತುಗಳು ಕಳವು
* ಶಿರ್ವಾ: ಚಾಲಕನ ನಿರ್ಲಕ್ಷತನದಿಂದ ಅಪಘಾತ, ಸವಾರನಿಗೆ ಗಂಭೀರ ಗಾಯ

NAMMUR EXPRESS NEWS
ಕಾರ್ಕಳ: ಕೇವಲ ಒಂದು ಲಕ್ಷ ರೂಪಾಯಿ ಹಣದಾಸೆಗಾಗಿ 2 ದಿನದ ಹಸುಗೂಸನ್ನು ಚಿಕ್ಕಮಗಳೂರಿನ ಎನ್‌ಆರ್‌ಪುರದಿಂದ ಕಾರ್ಕಳದ ದಂಪತಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಭಾಗಿಯಾದ ಮಗುವಿನ ಹೆತ್ತವರು, ಮಗುವನ್ನು ಪಡೆದವರು ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನರ್ಸ್ ಕುಸುಮಾ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.
ಕಾರ್ಕಳದ ರಾಘವೇಂದ್ರ ಎಂಬವರಿಗೆ 2 ದಿನದ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿತ್ತು. ರಾಘವೇಂದ್ರ ಅವರಿಗೆ ಮಕ್ಕಳಿಲ್ಲದ ಹಿನ್ನಲೆಯಲ್ಲಿ ಮಗುವನ್ನು ಸಾಕುವ ಉದ್ದೇಶದಿಂದ ತನ್ನ ಹಿರಿಯ ಸಹೋದರಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕುಸುಮಾ ಅವರ ಸಹಾಯ ಪಡೆದಿದ್ದರು. ಎನ್‌ಆರ್‌ಪುರದ ದಂಪತಿಗೆ 1 ಲಕ್ಷ ಹಣ ನೀಡುವುದಾಗಿ ಮೊದಲೇ ಮಾತುಕತೆ ನಡೆದಿತ್ತು. ಇದಾದ ಬಳಿಕ ಮಗು ಜನಿಸಿದ ಕೇವಲ ಎರಡೇ ದಿನಕ್ಕೆ ದಂಪತಿಗೆ 5 ಸಾವಿರ ಮುಂಗಡ ಹಣ ಕೊಟ್ಟು ಮಗುವನ್ನು ಗುಟ್ಟಾಗಿ ತಂದು ರಾಘವೇಂದ್ರ ಅವರಿಗೆ ಒಪ್ಪಿಸಲಾಗಿತ್ತು.
ಆದರೆ ಆಶಾ ಕಾರ್ಯಕರ್ತೆ ದಂಪತಿ ಮನೆಗೆ ಭೇಟಿ ನೀಡಿದಾಗ ಮನೆಯಿಂದ ಮಗು ನಾಪತ್ತೆಯಾಗಿತ್ತು. ಈ ವಿಚಾರ ತಿಳಿದ ತಕ್ಷಣವೇ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮನೆಗೆ ಧಾವಿಸಿ ಪೋಷಕರನ್ನು ವಿಚಾರಿಸಿದಾಗ ಮಗು ಕಾರ್ಕಳಕ್ಕೆ ಮಾರಾಟ ಮಾಡಲಾದ ವಿಚಾರ ಬೆಳಕಿಗೆ ಬಂದಿದೆ.
ತಕ್ಷಣವೇ ಸಿಡಿಪಿಓ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಾರ್ಕಳಕ್ಕೆ ಬಂದು ರಾಘವೇಂದ್ರ ದಂಪತಿಗಳ ಬಳಿಯಿದ್ದ ಹೆಣ್ಣು ಮಗುವನ್ನು ವಶಕ್ಕೆ ಪಡೆದು ರಕ್ಷಿಸಿದ್ದಾರೆ. ಮಕ್ಕಳಿಲ್ಲ ದಂಪತಿ ಮಗು ಬೇಕೆನ್ನುವ ಸಹಜ ಆಸೆಯಿಂದ ಕಾನೂನಿನ ಜ್ಞಾನವಿಲ್ಲದೇ ನಿಯಮಬಾಹಿರವಾಗಿ ಮಗುವನ್ನು ತಂದು ಸಾಕಲು ಮುಂದಾಗಿದ್ದರು. ಆದರೆ ಕಾನೂನುಪ್ರಕಾರ ದತ್ತು ಪಡೆಯುವ ಅವಕಾಶವಿದ್ದರೂ ಇದನ್ನು ಪಾಲಿಸದ ಹಿನ್ನಲೆಯಲ್ಲಿ ಅಧಿಕಾರಿಗಳು ಮಾನವ ಕಳ್ಳ ಸಾಗಣೆಯ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

* ಹೆಬ್ರಿ: ಉದ್ಯಮಿಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ವಸ್ತುಗಳು ಕಳವು

ಹೆಬ್ರಿ: ಚಂದ್ರಶೇಖರ (56), ಕಳ್ತೂರು ಗ್ರಾಮ ಬ್ರಹ್ಮಾವರ ಇವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಹೋಟೆಲ್‌ ಉದ್ಯಮಿಯಾಗಿದ್ದು, ಮನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಜೊತೆಗೆ ನಗದು ಕಳ್ಳತನವಾಗಿರುವ ಘಟನೆ ನಡೆದಿದೆ.
ಊರಿನಲ್ಲಿ ಹೆಂಡತಿ ಹಾಗೂ ಮಗಳು ಮನೆಗೆ ಬೀಗ ಹಾಕಿ ಕಿತ್ತೂರಿಗೆ ಹೋಗಿದ್ದು ಮಗ ಹಾಗೂ ಮಾವ ಕಳ್ತೂರಿನ ಮನೆಗೆ ಹೋಗಿ ಮನೆ ಸ್ವಚ್ಚ ಮಾಡಿ ಹೋಗಿದ್ದಾರೆ.
ಹೆಂಡತಿ ಮಕ್ಕಳೊಂದಿಗೆ ಮನೆಗೆ ಬಂದಾಗ ಯಾರೋ ಕಳ್ಳರು ಅಡುಗೆ ಮನೆ ಗೋಡೆಯಲ್ಲಿ ವೆಂಟಿಲೇಟರ್‌ ಅಳವಡಿಸಲು ಮರದ ಹಲೆಗೆ ಹಾಕಿ ಬಿಟ್ಟಿದ್ದ ಕಂಡಿಯ ಮುಖಾಂತರ ಮನೆಯ ಒಳಗೆ ಪ್ರವೇಶಿಸಿ ಮನೆಯ ಮಲಗುವ ಕೊಣೆಯ ಮರದ ಕಪಾಟಿನ ಡ್ರಾವರ್‌ನ್ನು ಮೀಟಿ ತೆಗೆದು 60,000 ರೂಪಾಯಿ ಮೌಲ್ಯದ ಚಿನ್ನದ ಬಳೆಗಳು -2 ಉಂಗುರ -1 ಮತ್ತು ಚಿನ್ನದ ಪಾಟಿ 2 ನ್ನು ಹಾಗೂ ಇನ್ನೊಂದು ಡ್ರಾವರ್‌ನಿಂದ 20,000/- ನಗದು ಮತ್ತು ಒಂದು 5,000/- ರೂಪಾಯಿ ಮೌಲ್ಯದ ವಾಚ್‌ ಮತ್ತು ಹಾಗೂ ಬ್ಯಾಗ್‌ನಲ್ಲಿದ್ದ 4,000/- ಮೌಲ್ಯದ ಬೆಳ್ಳಿಯ ಕಾಲು ಚೈನ್‌ ಹಾಗೂ ನೇವಲ ಮತ್ತು ದೇವರ ಕೋಣೆಯಲ್ಲಿದ್ದ 32,000/- ರೂಪಾಯಿ ಮೌಲ್ಯದ ಬೆಳ್ಳಿಯ ಚೊಂಬು -1 ಬೆಳ್ಳಿಯ ದೊಡ್ಡ ದೀಪ -2 ಹಾಗೂ ಬೆಳ್ಳಿಯ ಸಣ್ಣ ದೀಪಗಳು -3 ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ‌

* ಶಿರ್ವಾ: ಚಾಲಕನ ನಿರ್ಲಕ್ಷತನದಿಂದ ಅಪಘಾತ, ಸವಾರನಿಗೆ ಗಂಭೀರ ಗಾಯ

ಶಿರ್ವಾ: ಪ್ರಶಾಂತ್ (39),ಸೂಡಾ ಗ್ರಾಮ ಕಾರ್ಕಳದಲ್ಲಿ ಬೆಳಿಗ್ಗೆ ಮನೆಯಿಂದ ಶಿರ್ವಾ-ಕಟಪಾಡಿ-ಉಡುಪಿ ಮಾರ್ಗವಾಗಿ ಬ್ರಹ್ಮಾವರಕ್ಕೆ ಹೊರಟು ಹೋಗುತ್ತಿರುವಾಗ ಅಪಘಾತ ಸಂಭವಿಸಿ ಗಾಯವಾದ ಘಟನೆ ನಡೆದಿದೆ.
ಕಾಪು ತಾಲೂಕು, ಶಿರ್ವಾ ಗ್ರಾಮದ ಬಂಟಕಲ್ಲಿನಲ್ಲಿ ಕಟಪಾಡಿಯಿಂದ ಶಿರ್ವಾ ಕಡೆಗೆ ಗ್ಯಾಬ್ರಿಯಲ್‌ ಮೆಂಡೋನ್ಸಾ ರವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಬಂದು ಚಲಾಯಿಸುತ್ತಿದ್ದ ಸ್ಕೂಟರ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಸೊಂಟದ ಎಡಭಾಗ, ಕಾಲಿನಲ್ಲಿ ಒಳನೋವು, ಜಖಂ ಆಗಿದ್ದು, ಬಾಯಿ,ಬಲಕೆನ್ನೆ ಬಲಕೈಗೆ ತರಚಿದ ರಕ್ತಗಾಯವಾಗಿರುತ್ತದೆ.
ಸ್ಕೂಟರ್‌ ಕೂಡಾ ಜಖಂ ಆಗಿರುತ್ತದೆ. ನಂತರ ಚಿಕಿತ್ಸೆ ಬಗ್ಗೆ ಆದರ್ಶ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.