Categories
ಕರಾವಳಿ

ಮಳೆಯ ಆರ್ಭಟಕ್ಕೆ ಜಲಾವೃತಗೊಂಡ ಮಧೂರು ದೇಗುಲ!

ಕರಾವಳಿ ಟಾಪ್ ನ್ಯೂಸ್!

ಮಳೆಯ ಆರ್ಭಟಕ್ಕೆ ಜಲಾವೃತಗೊಂಡ ಮಧೂರು ದೇಗುಲ!

* ಮಂಗಳೂರು: ಮನೆಯ ಮೇಲೆ ಗುಡ್ಡ ಕುಸಿದು, ಇಬ್ಬರು ಮಕ್ಕಳು ಮೃತ್ಯು
* ಮಂಗಳೂರಲ್ಲಿ ಮೀನು ಹಿಡಿಯಲು ಹೋದ ಇಬ್ಬರು ನಾಪತ್ತೆ!

NAMMUR EXPRESS NEWS
ಕಾಸರಗೋಡು: ಸ್ವಲ್ಪವೂ ಎಡಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇತಿಹಾಸ ಪ್ರಸಿದ್ಧ ಮಧೂರು ಸಿದ್ಧಿವಿನಾಯಕ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.
ದೇಗುಲದ ಪ್ರಾಂಗಣದೊಳಗೆ ಮಳೆ ನೀರು ಸಂಪೂರ್ಣವಾಗಿ ತುಂಬಿಕೊಂಡಿದ್ದು, ಸುಮಾರು ಒಂದು ಅಡಿಗೂ ಹೆಚ್ಚು ನೀರು ತುಂಬಿಕೊಂಡಿದೆ.
ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡಿದೆ.
ಪ್ರತೀ ಬಾರಿ ಮಳೆಗಾಲದಲ್ಲಿ ದೇಗುಲ ಸಂಪೂರ್ಣವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಸಾರಿಗೆ ವ್ಯವಸ್ಥೆಗಳು ಅಸ್ತವ್ಯಸ್ತಗೊಂಡಿದೆ.

* ಮಂಗಳೂರು: ಮನೆಯ ಮೇಲೆ ಗುಡ್ಡ ಕುಸಿದು, ಇಬ್ಬರು ಕಂದಮ್ಮಗಳು ಮೃತ್ಯು

ಮಂಗಳೂರು: ಭಾರೀ ಮಳೆಗೆ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದು ಓರ್ವ ಮಹಿಳೆ ಸಹಿತ ಸಿಲುಕಿಕೊಂಡಿದ್ದ ಇಬ್ಬರು ಪುಟ್ಟ ಕಂದಮ್ಮಗಳು ಅಸುನೀಗಿರುವ ಘಟನೆ ಮಂಗಳೂರಿನ ಕೊಣಾಜೆ ಗ್ರಾಮದ ಮೊಂಟೆಪದವು ಎಂಬಲ್ಲಿ ನಡೆದಿದೆ.
ಇದೀಗ ತಾಯಿಯನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಹಿತ್ತಿಲುಕೋಡಿ ಕೊಪ್ಪಲ ಎಂಬಲ್ಲಿ ಕಾಂತಪ್ಪ ಪೂಜಾರಿ ಎಂಬವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೇ. 30 ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಈ ದುರಂತ ಸಂಭವಿಸಿದೆ. ಗೋಡೆಯ ಭಾಗದಲ್ಲಿ ಮಲಗಿದ್ದವರು ಪ್ರೇಮಾ ಪೂಜಾರಿ, ಮೂರು ವರ್ಷದ ಆರ್ಯನ್ ಮತ್ತು ಎರಡು ವರ್ಷದ ಆರುಷ್ ಮೃತ ದುರ್ದೈವಿಗಳು.
ಸೀತಾರಾಮ ಮತ್ತು ಅಶ್ವಿನಿ ಅವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ಡಿಆರ್ ಎಫ್, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಭಾಗಿಯಾಗಿದ್ದಾರೆ.

* ಮಂಗಳೂರಲ್ಲಿ ಮೀನು ಹಿಡಿಯಲು ಹೋದ ಇಬ್ಬರು ನಾಪತ್ತೆ!

ಮಂಗಳೂರು: ಕರಾವಳಿ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಈ ಸಂದರ್ಭದಲ್ಲೂ ಮೀನು ಹಿಡಿಯಲು ಹೋದವರ ನಾಡದೋಣಿ ಗಾಳಿ ಮಳೆಗೆ ಮಗುಚಿಬಿದ್ದು ದೋಣಿಯಲ್ಲಿದ್ದ ಇಬ್ಬರು ನಾಪತ್ತೆಯಾಗಿರುವ ಘಟನೆ ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪ ಇಂದು ನಡೆದಿದೆ.
ಯಶವಂತ ಮತ್ತು ಕಮಲಾಕ್ಷ ಇಬ್ಬರು ನಾಪತ್ತೆಯಾದ ಮೀನುಗಾರರಾಗಿದ್ದಾರೆ. ಮಗುಚಿ ಬಿದ್ದ ನಾಡದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೆ ಸಮೀಪ ಬಿದ್ದಿದೆ.
ಮಗುಚಿ ಬಿದ್ದ ನಾಡದೋಣಿಯೂ ಸಿಕ್ಕಿಲ್ಲ. ನಾಪತ್ತೆಯಾದವರಿಗೂ ಶೋಧ ಕಾರ್ಯ ಮುಂದುವರೆದಿದೆ. ಕರಾವಳಿ ಭಾಗದಲ್ಲಿ ಬಿರುಸಿನಿಂದ ಬರುತ್ತಿರುವ ಮಳೆಯ ಕಾರಣ ಮೀನುಗಾರಿಕೆಗೆ ಇಳಿಯದಂತೆ ಮೊದಲೇ ಸೂಚನೆಯನ್ನೂ ನೀಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.