Categories
ಕರಾವಳಿ

ಮಂಗಳೂರು: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್!

ಟಾಪ್ 5 ನ್ಯೂಸ್ ಕರಾವಳಿ!

ಮಂಗಳೂರು: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್!

– ಕಡಬ: ಮನೆಯ ಫ್ರಿಡ್ಜ್ ನಲ್ಲಿ ಕಾಡು ಮಾಂಸ ಪತ್ತೆ!
– ಕುಂದಾಪುರ: ಕಾರ್, ಸೈಕಲ್ ಸವಾರನಿಗೆ ಡಿಕ್ಕಿ, ಗಂಭೀರ ಗಾಯ!
– ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಾವು!
– ಉಪ್ಪಿನಂಗಡಿ: ಎರಡು ಮನೆಯಲ್ಲಿ ಕಳ್ಳತನ ಲಕ್ಷಾಂತರ ದೋಚಿ ಎಸ್ಕೇಪ್!

NAMMUR EXPRESS NEWS
ಮಂಗಳೂರು: ಮಂಗಳೂರಿನ ಮುಡಿಪು -ಸ್ಟೇಟ್‌ ಬ್ಯಾಂಕ್‌ ಭಾಗದ ಕೆಎಸ್​ಆರ್​ಟಿಸಿ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ವರದಿಯಾಗಿದ್ದು, ಪ್ರಯಾಣಿಕರೊಬ್ಬರು ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು, ಆರೋಪಿ ಬಾಗಲಕೋಟೆ ಮೂಲದ ಪ್ರದೀಪ್‌ (40) ವಶಕ್ಕೆ ಪಡೆದಿದ್ದಾರೆ. ಏಪ್ರಿಲ್ 22ರಂದು ಮುಡಿಪುವಿನಿಂದ ಸ್ಟೇಟ್‌ ಬ್ಯಾಂಕ್​​ನತ್ತ ತೆರಳುತ್ತಿದ್ದ ಬಸ್​​ನಲ್ಲಿ ಯುವತಿ ನಿದ್ರೆಗೆ ಜಾರಿದ್ದರು. ಆ ಸಂದರ್ಭದಲ್ಲಿ ಕಂಡಕ್ಟರ್ ಆ ಯುವತಿಗೆ ಕಿರುಕುಳ ನೀಡಿದ್ದಾನೆ. ಇದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

– ಕಡಬ: ಮನೆಯ ಫ್ರಿಡ್ಜ್ ನಲ್ಲಿ ಕಾಡು ಮಾಂಸ ಪತ್ತೆ!

ಕಡಬ: ಮನೆಯೊಂದರಲ್ಲಿ ಅಕ್ರಮವಾಗಿ ಕಾಡು ಪ್ರಾಣಿಯ ಮಾಂಸವನ್ನು ಸಂಗ್ರಹಿಸಿರುವ ಕುರಿತು ಖಚಿತ ಮಾಹಿತಿಯ ಪಂಜ ವಲಯ ತಂಡ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದು ಮನೆಯ ಫ್ರಿಡ್ಜ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಕಾಡು ಪ್ರಾಣಿಯ ಮಾಂಸ ಪತ್ತೆ ಹಚ್ಚಿದ್ದಾರೆ.
ಕಡಬದ ನೂಜಿಬಾಳ್ತಿಲ ಎಂಬಲ್ಲಿ ಘಟನೆ ನಡೆದಿದ್ದು ನೂಜಿಬಾಳ್ತಿಲ ಗ್ರಾಮದ ಪಟ್ಟಣ ತೇಗಿಲ್ ಕಳಜಾಲು ನಿವಾಸಿ ವರ್ಗಿಸ್ ತೋಮಸ್ ಎಂಬವರಿಗೆ ಸೇರಿದ ಮನೆಯಲ್ಲಿ ಸುಮಾರು 10 ಕೆಜಿ ಕಾಡುಪ್ರಾಣಿ ಮಾಂಸ ಪತ್ತೆ ಹಚ್ಚಿದ್ದಾರೆ.
ಆರೋಪಿ ಪರಾರಿ ಆರೋಪಿ ಕಾಡುಪ್ರಾಣಿ ಮಾಂಸ ಹಾಗೂ ಬಂದೂಕು ವಶಕ್ಕೆ ಪಡೆದಿದ್ದಾರೆ.
ಕಾರ್ಯಚರಣೆಯಲ್ಲಿ ಪಂಜ ಉಪ ಅರಣ್ಯಾಧಿಕಾರಿ ಸಂದ್ಯಾ ಅಜಿತ್, ಸುನಿಲ್, ಯಶೋಧರ ಮೊದಲಾದವರು ಭಾಗವಹಿಸಿದ್ದರು.

– ಕುಂದಾಪುರ: ಕಾರ್ ಸೈಕಲ್ ಸವಾರನಿಗೆ ಡಿಕ್ಕಿ, ಗಂಭೀರ ಗಾಯ!

ಕುಂದಾಪುರ: ವಕ್ವಾಡಿಯಲ್ಲಿ ವೇಗವಾಗಿ ಬರುತ್ತಿದ್ದ ಮಾರುತಿ ಒಮಿನಿ ಕಾರ್ ಸೈಕಲ್ ಸವಾರನಿಗೆ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಎ.23 ಬುಧವಾರ ಸಂಜೆ ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಸ್ತೆಯ ಹತ್ತಿರದ ರಸ್ತೆಯಲ್ಲಿ ಸೈಕಲ್ ಸವಾರ ಗಣಪತಿ ಹೆಗ್ಡೆ ( 58) ಅವರು ಕೂಲಿ ಕೆಲಸ ಮಾಡಿಕೊಂಡು ಮನೆಗೆ ಬರುತ್ತಿರುವಾಗ ನಾಗೇಶ್ ಶೇಟ್ ಎಂಬುವವರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿಯಾಗಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆಯಿಂದ ಸೈಕಲ್ ಸವಾರ ಪ್ರಾಣಾಯಾಮದಿಂದ ಪಾರಾಗಿದ್ದು, ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಸಾವು!

ಉಡುಪಿ: ಮಲ್ಪೆಯಿಂದ ಬೋಟ್‌ನಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬಡಾನಿಡಿಯೂರು ಗ್ರಾಮದ ರಮೇಶ ಟಿ.(52) ಎಂಬುವರು ಮೃತಪಟ್ಟಿದ್ದಾರೆ. ನಸುಕಿನ ಜಾವ 5ಕ್ಕೆ ಬೋಟ್‌ನಲ್ಲಿ ಹಾಕಿದ್ದ ಬಲೆಯ ಪರಿ ಕಟ್ಟುವಾಗ ತಲೆಸುತ್ತು ಬಂದು ಬಿದ್ದಿದ್ದರು. ಚಿಕಿತ್ಸೆಗಾಗಿ ಕೂಡಲೇ ಮಲ್ಪೆಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ತರಲಾಗಿತ್ತು. ಪರೀಕ್ಷಿಸಿದ ವೈದ್ಯರು ರಮೇಶ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸಹೋದರ ನಿತ್ಯಾನಂದ ನೀಡಿದ ದೂರಿಂನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಉಪ್ಪಿನಂಗಡಿ: ಎರಡು ಮನೆಯಲ್ಲಿ ಕಳ್ಳತನ ಲಕ್ಷಾಂತರ ದೋಚಿ ಎಸ್ಕೇಪ್!

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ಎರಡು ಮನೆಗಳಿಗೆ ನುಗ್ಗಿದ ಕಳ್ಳ ಲಕ್ಷಾಂತರ ರೂ. ಬೆಲೆಬಾಳುವ ನಗದನ್ನು ಕಳವು ಮಾಡಿದ ಘಟನೆ ನಡೆದಿದೆ.
ತೆಕ್ಕಾರು ಗ್ರಾಮದ ಗುತ್ತುಮನೆ ಮುಸ್ತಾಫ ಅವರ ಮನೆಯಲ್ಲಿ ಪತ್ನಿ ಮತ್ತು ನಾದಿನಿ ಮನೆಯೊಳಗೆ ಮಲಗಿದ್ದರು. ಈ ವೇಳೆ ಮನೆಯೊಳಗೆ ನುಗ್ಗಿದ ಕಳ್ಳ ಒಟ್ಟು 12 ಗ್ರಾಂ ತೂಕವಿರುವ 3 ಉಂಗುರ, ಹಾಗೂ 6 ಗ್ರಾಂ ತೂಕವಿರುವ 4 ಉಂಗುರ ಮತ್ತು 3 ಸಾವಿರ ನಗದು ಹಣ ಕದ್ದೊಯ್ದಿದ್ದಾನೆ.
ಇದೇ ಗ್ರಾಮದ ಕೋಡಿ ಮನೆ ನಿವಾಸಿ ಅನ್ವರ್ ಅವರ ಮನೆಗೂ ನುಗ್ಗಿದ ಕಳ್ಳ, ಮನೆ ಮಂದಿ ಮಲಗಿದ್ದಾಗಲೇ ಮನೆಯೊಳಗಿನ ಕಪಾಟನ್ನು ಜಾಲಾಡಿ, ಅದರಲ್ಲಿದ್ದ ನಗದು ಹಣವನ್ನು ತನ್ನ ಜೇಬಿಗೆ ತುಂಬಿಸಿಕೊಳ್ಳುವ ಭರದಲ್ಲಿ ಅಲ್ಲೇ ಕೆಳಕ್ಕೆ ಬೀಳಿಸಿದ್ದಾನೆ ಎನ್ನಲಾಗಿದೆ. ಆ ವೇಳೆ ಮನೆ ಯಜಮಾನಿ ಎಚ್ಚರಗೊಂಡಿದ್ದು, ಕಳ್ಳ ಓಡಿ ತಪ್ಪಿಸಿಕೊಂಡಿದ್ದಾನೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.