Categories
ಕರಾವಳಿ

ಬಾರಕೂರು ರೋಟರಿಗೆ ನೂತನ ಸಾರಥಿಗಳು..!

ಬಾರಕೂರು ರೋಟರಿಗೆ ನೂತನ ಸಾರಥಿಗಳು..!

– ರೋಟರಿ ಅಧ್ಯಕ್ಷ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಪದಗ್ರಹಣ
– ರೋಟರಿ ಮುಖವಾಣಿ ಭೂತಾಳ ಪಾಂಡ್ಯ ಬಿಡುಗಡೆ

NAMMUR EXPRESS NEWS

ಬ್ರಹ್ಮಾವರ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಬಾರಕೂರು ರೋಟರಿಗೆ ನೂತನ ಸಾರಥಿಗಳ ಆಯ್ಕೆ ಆಗಿದೆ.
ರೋಟರಿ ಅಧ್ಯಕ್ಷ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಪದಗ್ರಹಣವಾಗಿದ್ದು, ರೋಟರಿ ಮುಖವಾಣಿ ಭೂತಾಳ ಪಾಂಡ್ಯ ಬಿಡುಗಡೆ ಮಾಡಲಾಯಿತು.
ಸಂಕಮ್ಮ ತಾಯಿ ರೆಸಾರ್ಟಿನಲ್ಲಿ ಇತ್ತೀಚಿಗೆ ಬಾರಕೂರು ರೋಟರಿ ಅಧ್ಯಕ್ಷ ಗಣೇಶ್ ಶೆಟ್ಟಿ ಮತ್ತು ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿಯವರ ಪದಗ್ರಹಣ ನಡೆಯಿತು.
ಜಾಗತಿಕ ಮಟ್ಟದಲ್ಲಿ ಮಹಾಮಾರಿ ಪೋಲಿಯೋ ನಿರ್ಮೂಲನೆ ಮಾಡಲು ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಪ್ರಮುಖ ಕಾರಣ ಎಂದು ನಿಕಟ ಪೂರ್ವ ರೋಟರಿ ಜಿಲ್ಲಾ ಗವರ್ನರ್ ಎ ಎಸ್ ಎನ್ ಹೆಬ್ಬಾರ್ ಹೇಳಿದರು. ಎಲ್ಲಾ ಸದಸ್ಯರ ಸಮ್ಮುಖದಲ್ಲಿ ರೋಟರಿ ಮುಖವಾಣಿ ಭೂತಾಳ ಪಾಂಡ್ಯ ಬಿಡುಗಡೆಗೊಳಿಸಲಾಯಿತು. ಹೊಸ ಸದಸ್ಯರ ಸೇರ್ಪಡೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ರೋಟರಿಯ ಪ್ರಮುಖರನ್ನು ಗೌರವಿಸಲಾಯಿತು. ರಾಘವೇಂದ್ರ ಸಾಮಗ, ಆಲ್ವಿನ್ ಕ್ವಾಡ್ರಸ್ ರಾಜಾರಾಮ್ ಶೆಟ್ಟಿ, ರಾಜಾರಾಮ್ ಐತಾಳ್ ಉಪಸ್ಥಿತರಿದ್ದರು. ನಿಕಟ ಪೂರ್ವ ಅಧ್ಯಕ್ಷ ಸೀತಾರಾಮ್ ಎಸ್ ಸ್ವಾಗತಿಸಿದರು. ಕಾರ್ಯದರ್ಶಿ ಬಾಬು ನಾಯ್ಕ್ ವರದಿ ವಾಚಿಸಿದರು. ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.