ಕ್ರಿಕೆಟ್ ಅಸೋಸಿಯೇಷನ್ ಕಾರ್ಕಳಕ್ಕೆ ನೂತನ ಸಾರಥಿಗಳು!
– ಅಧ್ಯಕ್ಷರಾಗಿ ಶಾಕೀರ್ ಹುಸೈನ್, ಕಾರ್ಯದರ್ಶಿಯಾಗಿ ದಿನೇಶ್ ಆರ್. ಶೆಟ್ಟಿ
– ನೂತನ ಪದಾಧಿಕಾರಿಗಳಿಗೆ ಶುಭಾಶಯಗಳು
NAMMUR EXPRESS NEWS
ಕಾರ್ಕಳ : ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ನಿನ 2025-26 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯೂ ಅ. 14ರಂದು ಜರುಗಿತು. ನೂತ ಅಧ್ಯಕ್ಷರಾಗಿ ಶಾಕೀರ್ ಹುಸೈನ್ ಮತ್ತು ಕಾರ್ಯದರ್ಶಿಯಾಗಿ ದಿನೇಶ್ ಆರ್. ಶೆಟ್ಟಿ ಆಯ್ಕೆಯಾದರು. ಅಸೋಸಿಯೇಷನ್ನಿನ ಗೌರವಾಧ್ಯಕ್ಷರಾಗಿ ಅವಿನಾಶ್ ಜಿ. ಶೆಟ್ಟಿ, ಸುಕೇಶ್ ಈಶ್ವರ್, ಉಪಾಧ್ಯಕ್ಷರಾಗಿ ಸುಧೀರ್ ಉಚ್ಚಂಗಿ, ಗಪೂರ್ ಗಾಂಧಿ ಮೈದಾನ, ಜತೆ ಕಾರ್ಯದರ್ಶಿಯಾಗಿ ನವೀನ್ ಶೆಟ್ಟಿ ಮುನಿಯಾಲ್ ಮತ್ತು ತೌಸಿಫ್ ಕಾರ್ಕಳ ಆಯ್ಕೆಯಾಗಿದ್ದಾರೆ.
