ಮಾ. 22ಕ್ಕೆ ನಾಗಸ್ಥಾನ ಮತ್ತು ಅಶ್ವತ್ಥಕಟ್ಟೆ ಸೇವಾ ಸಮಿತಿ ಪರಪು, ಕುಕ್ಕುಂದೂರಲ್ಲಿ ಧಾರ್ಮಿಕ ಕಾರ್ಯಕ್ರಮಗಳು!
– ಆಶ್ಲೇಷಾ ಬಲಿ, ಪಂಚಾಮೃತ ಅಭಿಷೇಕ, ನವಕ ಪ್ರಧಾನ ಹೋಮ ವಿವಿಧ ಕಾರ್ಯಕ್ರಮಗಳ ಆಯೋಜನೆ
– ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
NAMMUR EXPRESS NEWS
ಕಾರ್ಕಳ: ನಾಗಸ್ಥಾನ ಮತ್ತು ಅಶ್ವತ್ಥಕಟ್ಟೆ ಸೇವಾ ಸಮಿತಿ ಪರಪು, ಕುಕ್ಕುಂದೂರು ಮಾ. 22ನೇ ಶನಿವಾರದಂದು ಕುಕ್ಕುಂದೂರು ಗ್ರಾಮದ ಪರಪ್ಪ ನಾಗಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಬೆಳಿಗ್ಗೆ 10.00ಕ್ಕೆ ಆಶ್ಲೇಷಾ ಬಲಿ, ಪಂಚಾಮೃತ ಅಭಿಷೇಕ, ನವಕ ಪ್ರಧಾನ ಹೋಮ, ಮಧ್ಯಾಹ್ನ 12.00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ವೇದಮೂರ್ತಿ ಶಂಕರನಾರಾಯಣ ಭಟ್ರ ನೇತೃತ್ವದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಭಕ್ತಾಭಿಮಾನಿಗಳು ಚಿತ್ತೈಸಿ ಈ ಪವಿತ್ರ ಕಾರ್ಯಕ್ರಮದಲ್ಲಿ ಯಥಾಯೋಗ್ಯವಾಗಿ ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ, ಅಶ್ವತ್ಥ ನಾರಾಯಣ ಹಾಗೂ ನಾಗದೇವರ ಶ್ರೀಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಶ್ರೀ ನಾಗಸ್ಥಾನ ಮತ್ತು ಅಶ್ವತ್ಥಕಟ್ಟೆ ಸೇವಾ ಸಮಿತಿ, ಪರಪು, ಕುಕ್ಕುಂದೂರು ಗ್ರಾಮ ಕಾರ್ಕಳ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಈ ಮೂಲಕ ವಿನಂತಿಕೊಂಡಿದ್ದಾರೆ.
