Categories
ಕರಾವಳಿ

12 ವರ್ಷಗಳ ಬಳಿಕ ರಬ್ಬರ್ ಬೆಳೆ ಬೆಲೆ ಏರಿಕೆ!

12 ವರ್ಷಗಳ ಬಳಿಕ ರಬ್ಬರ್ ಬೆಳೆ ಬೆಲೆ ಏರಿಕೆ!
– ರಬ್ಬರ್ ಬೆಲೆ ದಾಖಲೆಯ ಏರಿಕೆ: ಬೆಳೆಗಾರರಿಗೆ ಖುಷಿ
– ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಬೆಳೆ

NAMMUR EXPRESS NEWS
ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೆಳೆಯುತ್ತಿದ್ದ ರಬ್ಬರ್ ಬೆಲೆ 12 ವರ್ಷಗಳ ನಂತರ ದಾಖಲೆಯ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ.
ರಬ್ಬರ್ ಬೋರ್ಡ್ ಕೆಜಿಗೆ 235 ರೂ. ಬೆಲೆ ನಿಗದಿಪಡಿಸಿದೆ. ಈ ಮೂಲಕ ರೈತರಲ್ಲಿ ಹೊಸ ಭರವಸೆ ಮೂಡಿದೆ.
ಕಾಸರಗೋಡು ಸೇರಿದಂತೆ ಕೇರಳದ ಬಹುತೇಕ ಪ್ರದೇಶಗಳಲ್ಲಿ 237 ರಿಂದ 241 ರೂ.ಗಳಿಗೆ ಮಾರಾಟವಾಗುತ್ತಿದೆ. ಕೆಲವು ವ್ಯಾಪಾರಿಗಳು 241 ರೂ.ಗೆ ಮಾರಾಟ ಮಾಡಿದ್ದಾರೆ. 2011-12ರಲ್ಲಿ ರಬ್ಬರ್ ಶೀಟ್‌ ಗಳ ಬೆಲೆ ಕಿಲೋಗೆ 283 ರೂ. ತಲುಪಿತ್ತು. ಬಳಿಕ ಬೆಲೆ ಇಳಿದಿತ್ತು.

ರಬ್ಬರ್ ಇಲ್ಲ: ಪೂರೈಕೆ ಕೊರತೆ

ಅತಿವೃಷ್ಟಿ ಹಾಗೂ ಹವಾಮಾನ ವೈಪರೀತ್ಯದಿಂದ ಮಾರುಕಟ್ಟೆಯಲ್ಲಿ ರಬ್ಬರ್ ಕೊರತೆ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಕೆಜಿಗೆ 2 ರಿಂದ 3 ರೂ. ಬೆಲೆ ಏರಿಕೆಯಾಗಿದೆ. ಇದಕ್ಕೆ ಮುಖ್ಯ ಕರಣ ಪೂರೈಕೆ ಕೊರತೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಸದ್ಯದ ಪರಿಸ್ಥಿತಿ ಮುಂದುವರಿದರೆ ಒಂದು ವಾರದಲ್ಲಿ ಕಿಲೋಗೆ 250 ರೂ. ತಲುಪಬಹುದು ಎಂದು ಅಂದಾಜಿಸಲಗಿದೆ.

ಟೈರ್ ತಯಾರಿಸಲು ಹೆಚ್ಚಾಗಿ ನೈಸರ್ಗಿಕ ರಬ್ಬರ್ ಬಳಕೆ!

ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆ ಹೆಚ್ಚಾದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆಗಳು ಭಾರತದ ರಬ್ಬರ್ ಬೆಲೆಗಿಂತ 50 ರೂ.ನಷ್ಟು ಕಡಿಮೆ ಇದೆ. ಬ್ಯಾಂಕಾಕ್‌ನಲ್ಲಿ ಆರ್‌ಎಎಸ್ 4 ಗ್ರೇಡ್‌ನ ನೈಸರ್ಗಿಕ ರಬ್ಬರ್ ದರ 200 ರೂ.ಗೆ ತಲುಪಿದೆ. ವಿದ್ಯುತ್ ವಾಹನಗಳಿಗೆ ಟೈರ್ ತಯಾರಿಸಲು ಹೆಚ್ಚಾಗಿ ನೈಸರ್ಗಿಕ ರಬ್ಬರ್ ಅನ್ನೇ ಬಳಸಲಾಗುತ್ತಿದೆ. ಇದು ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.