Categories
ಕರಾವಳಿ

ಸೂರತ್ಕಲ್: ವಿಷಾನಿಲ ದುರಂತದಿಂದ ವಾಹನ ಚಾಲಕ ಅಸ್ವಸ್ಥ

* ಸೂರತ್ಕಲ್: ವಿಷಾನಿಲ ದುರಂತದಿಂದ ವಾಹನ ಚಾಲಕ ಅಸ್ವಸ್ಥ

* ಕಾಸರಗೋಡು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು ಸೆರೆ

* ಮಂಗಳೂರು: ಬಾಡಿಗೆ ಮನೆಯ ಅಪ್ರಾಪ್ತಗೆ ಲೈಂಗಿಕ ಕಿರುಕುಳ; ಮಾಲಿಕ ಬಂಧನ

* ಉಡುಪಿ: ಕೂಲಿ ಕಾರ್ಮಿಕ ನಾಪತ್ತೆ

* ಮೂಡಬಿದಿರೆ: ನೂತನ ಈ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಕೇಂದ್ರ ಉದ್ಘಾಟನೆ

* ಬೆಳ್ತಂಗಡಿ: ಅನಾರೋಗ್ಯ ಸಮಸ್ಯೆ; ಮಹಿಳೆ ಆತ್ಮಹತ್ಯೆ

ನಮ್ಮೂರ ಎಕ್ಸ್ ಪ್ರೆಸ್ ನ್ಯೂಸ್

ಸೂರತ್ಕಲ್: ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ವಿಷಾನಿಲ ದುರಂತದಲ್ಲಿ ವ್ಯಕ್ತಿಗಳಿಬ್ಬರು ದುರ್ಮರಣಕ್ಕೀಡಾಗಿದ್ದರು. ಇದೀಗ ಆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾಹನ ಚಾಲಕ ರಕ್ತದ ವಾಂತಿ ಮಾಡಿಕೊಂಡು ಅಸ್ವಸ್ಥರಾದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಎಲ್ ಪಿ ಜಿ ಅನಿಲವನ್ನು ಟ್ಯಾಂಕರ್ ಗೆ ತುಂಬಿಕೊಳ್ಳುತ್ತಿದ್ದ ವಾಹನ ಚಾಲಕನಿಗೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಸಮಸ್ಯೆಯುಂಟಾಗಿ,ರಕ್ತವಾಂತಿ ಮಾಡಿಕೊಂಡು, ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಕುಳಾಯಿ ರೈಲ್ವೆ ಸೇತುವೆ ಬಳಿ ಎಚ್ ಪಿ ಸಿ ಎಲ್ ನಿಂದ ಅನಿಲವನ್ನು ತುಂಬಿಸಿಕೊಳ್ಳಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ರೀತಿ ತೊಂದರೆ ಎದುರಾಗಿದೆ. ಚಾಲಕ ತಕ್ಷಣ ವಾಹನವನ್ನು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಹನವನ್ನು ತಕ್ಷಣ ನಿಲ್ಲಿಸಿದ್ದರ ಪರಿಣಾಮವಾಗಿ ದೊಡ್ಡ ಅಪಘಾತದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಕಾಸರಗೋಡು: ಪಡುಬಿದ್ರೆಯ ಪದೆಬೆಟ್ಟು ಗ್ರಾಮದಲ್ಲಿನ ಗಣೇಶ ಪ್ರಸಾದ ಶೆಟ್ಟಿ ಎನ್ನುವವರ ಮನೆಗೆ ಕಳ್ಳರು ನುಗ್ಗಿದ್ದು ,ಸುಮಾರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಅಪಹರಿಸಿದ ಘಟನೆ ನಡೆದಿದೆ. ಆರೋಪಿಗಳನ್ನು ಇಬ್ರಾಹಿಂ ಕಲಂದರ್ ಮತ್ತು ರಿಯಾಜ್ ಎಂದು ಗುರುತಿಸಲಾಗಿದ್ದು, ಈಗಾಗಲೇ ಇಬ್ರಾಹಿಂ ವಿರುದ್ಧ ಕಾಸರಗೋಡಿನ ಬದಿಯಡ್ಕದಲ್ಲಿ, ವಿದ್ಯಾನಗರ, ಮಂಜೇಶ್ವರ, ಹೆಬ್ರಿ, ವಿಟ್ಲ ಇನ್ನು ಹಲವಾರು ಪೊಲೀಸ್ ಠಾಣೆಗಳಲ್ಲಿ ದೇವಸ್ಥಾನದಲ್ಲಿ ಕಳುವು, ಮನೆಯಲ್ಲಿ ಕಳುವು, ದರೋಡೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ರಿಯಾಜ್ ಗೆ ಸಂಬಂಧಿಸಿದಂತೆ ಕಾಸರಗೋಡು ಮತ್ತು ಪುತ್ತೂರು ಪೊಲೀಸ್ ಠಾಣೆಗಳಲ್ಲಿ ಕೊಲೆ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರ ಬಳಿಯಿದ್ದ ಕಾರು ಮತ್ತು 24,000 ನಗದು ಮೊತ್ತವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮಂಗಳೂರು: ಪಿಂಟೋ ಗಾರ್ಡನ್ ಮಾಲೀಕರು ಮತ್ತು ಉದ್ಯಮಿಯು ಆಗಿರುವ ರಾಕಿ ಪಿಂಟೊ ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಪಕ್ಕದ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಮತ್ತು ತನ್ನ ಮನೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯೊಬ್ಬಳ ಮಗಳನ್ನು ಶಾಲೆಗೆ ತಾನು ಬಿಡುವುದಾಗಿ ತಿಳಿಸಿ, ಕಾರಿನಲ್ಲಿ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ್ದಾನೆ ಕಿನ್ನಿಗೋಳಿಯ ಪೊಲೀಸರು ರಾಕಿ ಪಿಂಟೊ ಕಾರನ್ನು ವಶಪಡಿಸಿಕೊಂಡು, ಅವನನ್ನು ಬಂಧಿಸಲು ಹೋದಾಗ ರಾಕಿ ಪಿಂಟೊಗೆ ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

* ಉಡುಪಿ: ಪಡುತೋನ್ಸೆಯ ಅವಿವಾಹಿತ ವ್ಯಕ್ತಿಯಾದ ನಿತ್ಯಾನಂದ ಎನ್ನುವವರು ಮಲ್ಪೆಯಲ್ಲಿ ತೆಂಗಿನಕಾಯಿ ಹೆಕ್ಕಲು ಹೋದಾಗ, ಕೆಸರು ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ನಿತ್ಯಾನಂದ ಸಂಜೆ ಕಾಯಿ ಹೆಕ್ಕಲು ಹೋದವರು ಮನೆಗೆ ಮರಳಿ ಬರಲಿಲ್ಲ. ಬಳಿಕ ನಿತ್ಯಾನಂದ ಅವರು ಮನೆಯಲ್ಲಿ ಇಲ್ಲದ್ದನ್ನು ಕಂಡು, ಸುತ್ತಮುತ್ತಲ ಜನರು ಇವರನ್ನು ಹುಡುಕಿಕೊಂಡು ಹೋದಾಗ ಕೆಸರು ತುಂಬಿದ ನೀರಿನಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ. ನಿತ್ಯಾನಂದರ ಸಾವಿಗೆ ಸಂಬಂಧಿಸಿದಂತೆ ಮಲ್ಪೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡಬಿದರೆ: ತಾಲ್ಲೂಕಿನ ಕೊಣಾಜೆಯ‌ ಕಂಬಳಪದವು ಸಮೀಪದಲ್ಲಿ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥಗಳ ಕೇಂದ್ರ ಹೊಸದಾಗಿ ನಿರ್ಮಾಣಗೊಂಡಿದೆ.‌ ಇದರ ಉದ್ಘಾಟನಾ ಕಾರ್ಯಕ್ರಮವು ಭಾನುವಾರದಂದು ನಡೆದಿದ್ದು, ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸರ್ಕಾರದ ವತಿಯಿಂದ ಗ್ರಾಮದ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ಅನ್ನು ವಿತರಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್, ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟ, ಮಾಜಿ ಸಚಿವರಾದ ಅಭಯಚಂದ್ರ ಜೈನ್‌ ಇನ್ನು ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಬೆಳ್ತಂಗಡಿ: ತಾಲ್ಲೂಕಿನ ಕೊಯ್ಯೂರು ಗ್ರಾಮದ ನಿವಾಸಿ ದೇವಪ್ಪ ಬಂಗೇರ ಎನ್ನುವವರ ಪುತ್ರಿ ಮತ್ತು ಬೆಳ್ತಂಗಡಿಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಮ್ಯಾ ಎಂಬ ಮಹಿಳೆಯು ತವರಿಗೆ ಬಂದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ವರ್ಷಗಳ ಹಿಂದೆ ಅದೇ ಗ್ರಾಮದ ಪಾದಡ್ಕದ ನಿವಾಸಿ ಲತೀಶ್ ಅವರೊಂದಿಗೆ ವಿವಾಹವಾಗಿದ್ದ ಆಕೆ, ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು.‌ ಈ ಕಾರಣದಿಂದ ವಿಶ್ರಾಂತಿ ಪಡೆಯಲೆಂದು ತಾಯಿಯ ಮನೆಗೆ ಬಂದ ಸಂದರ್ಭದಲ್ಲಿ ಆರೋಗ್ಯದಲ್ಲಿ ತೊಂದರೆ ಆಗಿರುವುದಕ್ಕೆ ಮನನೊಂದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆತ್ಮಹತ್ಯೆ ಪ್ರಕರಣವು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.