Categories
ಕರಾವಳಿ

ಶಂಭೂರಿನ ಅಡೆಪಿಲ ದೈವಸ್ಥಾನ ಗೊಂದಲದಿಂದ ನೇಮ ಸ್ಥಗಿತಗೊಂಡಿದೆ.

ಶಂಭೂರಿನ ಅಡೆಪಿಲ ದೈವಸ್ಥಾನ ಗೊಂದಲದಿಂದ ನೇಮ ಸ್ಥಗಿತಗೊಂಡಿದೆ.
-ಅಧಿಕಾರಿಗಳು ಮತ್ತು ಪೊಲೀಸರ ಮಧ್ಯ ಪ್ರವೇಶದಿಂದ ನೇಮ ಸ್ಥಗಿತ
– ಮುಂದಿನ ಆದೇಶ ಬರುವವರೆಗೆ ನೇಮ ನಡೆಸದಂತೆ ನ್ಯಾಯಾಲಯವು ಆದೇಶಿಸಿದೆ

NAMMUR EXPRESS NEWS

ಬಂಟ್ವಾಳ: ಶಂಭೂರು ಅಡೆಪಿಲ ದೈವಸ್ಥಾನದ ವಾರ್ಷಿಕ ನೇಮೋತ್ಸವದ ವಿಷಯದಲ್ಲಿ ಗೊಂದಲ ಉಂಟಾಗಿದ್ದು, ಅಧಿಕಾರಿಗಳು ಮತ್ತು ಪೊಲೀಸರ ಮಧ್ಯ ಪ್ರವೇಶದಿಂದ ನೇಮ ಸ್ಥಗಿತಗೊಂಡ ಘಟನೆ ಮಾ. 9ರಂದು ನಡೆದಿದೆ.
ದೈವಸ್ಥಾನದ ನೇಮೋತ್ಸವದ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಗೊಂದಲಗಳಿದ್ದು, ಹೀಗಾಗಿ ಮಾ. 9ರಿಂದ 11ರ ವರೆಗೆ ನಿಗದಿಯಾಗಿದ್ದ ನೇಮದ ಮೊದಲ ದಿನ ಎರಡೂ ಕಡೆಯವರು ಸೇರಿದ್ದರು. ಈ ಪ್ರಕರಣ ನ್ಯಾಯಾಲಯದ ಜತೆಗೆ ಧಾರ್ಮಿಕ ದತ್ತಿ ಇಲಾಖೆಗೂ ತಲುಪಿತ್ತು. ಗೊಂದಲ ಉಂಟಾಗಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ತಹಶೀಲ್ದಾರ್ ಸಹಿತ ಗ್ರಾಮಾಂತರ ಪೊಲೀಸರು ತೆರಳಿದ್ದು, ಮುಂದಿನ ಆದೇಶ ಬರುವವರೆಗೆ ನೇಮ ನಡೆಸದಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಕೊನೆಗೆ ನೇಮ ಸ್ಥಗಿತಗೊಂಡಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.