ಆಳ್ವಾಸ್ ಕಾಲೇಜಲ್ಲಿ ದೇಶದ ಅತೀ ದೊಡ್ಡ ಉದ್ಯೋಗ ಮೇಳ!
– ಆಗಸ್ಟ್ 1,2ರಂದು ಮೂಡಬಿದಿರೆಯಲ್ಲಿ ಆಳ್ವಾಸ್ ಪ್ರಗತಿ-2025
– 300+ ಕಂಪನಿಗಳು ಭಾಗಿ: ಸಾವಿರಾರು ಜನರಿಗೆ ಉದ್ಯೋಗ
– 15ರಿಂದ 20 ಸಾವಿರ ಉದ್ಯೋಗ ಆಕಾಂಕ್ಷಿಗಳು ಭಾಗಿ ಸಾಧ್ಯತೆ
ವಿಶೇಷ ವರದಿ: ನಮಿತಾ ಶೆಟ್ಟಿ ಉಡುಪಿ
ನಮ್ಮೂರ್ ಎಕ್ಸ್ ಪ್ರೆಸ್ ಕರಾವಳಿ
ಮೂಡುಬಿದರೆ: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ 15ನೇ ಅವೃತ್ತಿಯ ಬೃಹತ್ ಉದ್ಯೋಗ ಮೇಳ ” ಆಳ್ವಾಸ್ ಪ್ರಗತಿ”ಗೆ ಅಂತಿಮ ಹಂತದ ಸಿದ್ಧತೆ ನಡೆದಿದೆ.
ದಕ್ಷಿಣ ಭಾರತದ ಅತೀ ದೊಡ್ಡ ಉದ್ಯೋಗ ಮೇಳ ಇದಾಗಿದ್ದು ದೇಶ, ರಾಜ್ಯದ ವಿವಿಧ ಭಾಗದ 300+ ಕ್ಕೂ ಹೆಚ್ಚು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಆಗಮಿಸಲಿದ್ದಾರೆ.
ಈಗಾಗಲೇ 15 ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಸಾವಿರಾರು ಮಂದಿ ಉದ್ಯೋಗ ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ಅತೀ ದೊಡ್ಡ ಉದ್ಯೋಗ ಮೇಳ ಇದಾಗಿದೆ.
ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಲ್ಲಿ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 26 ವಿವಿಧ ಶಿಕ್ಷಣ ಸಂಸ್ಥೆಗಳನ್ನು ಆಳ್ವಾಸ್ ವಿದ್ಯಾ ಸಂಸ್ಥೆ ಹೊಂದಿದೆ. ಇದೀಗ ಆಗಸ್ಟ್ 1 ಮತ್ತು 2ರಂದು ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಈಗಾಗಲೇ ಮೂಡಬಿದಿರೆಯ ವಿದ್ಯಾಗಿರಿ ಕ್ಯಾಂಪಸ್ ಅಲ್ಲಿ ನೂರಾರು ಮಂದಿ ಸಿಬ್ಬಂದಿ ತಯಾರಿ ನಡೆಸುತ್ತಿದ್ದಾರೆ.
2024ರಲ್ಲಿ 10 ಸಾವಿರ ಮಂದಿಗೆ ಉದ್ಯೋಗ
2024ರಲ್ಲಿ ಸುಮಾರು 8 ಸಾವಿರ ಮಂದಿಗೆ ಉದ್ಯೋಗ ಸಿಕ್ಕಿದ್ದು ಸುಮಾರು 258 ಕಂಪನಿಗಳು ಭಾಗವಹಿಸಿದ್ದವು. ಸುಮಾರು 2468 ಮಂದಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಿದ್ದು, 5953 ಮಂದಿ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಒಟ್ಟು 14,780 ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.
2023ರಲ್ಲಿ ಸುಮಾರು 5000 ಮಂದಿಗೆ ಉದ್ಯೋಗ ಸಿಕ್ಕಿದ್ದು, ಒಟ್ಟು 10 ಸಾವಿರ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.
15 ವರ್ಷಗಳ ಹೆಜ್ಜೆ: ಸಾವಿರಾರು ಜನರ ಕನಸು ನನಸು
2011ರಿಂದ ಶುರುವಾದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಇದೀಗ 15ನೇ ವರ್ಷಕ್ಕೆ ಕಾಲಿಟ್ಟಿದೆ. ಈವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ಈ ಮೂಲಕ ಉದ್ಯೋಗ ಪಡೆದಿದ್ದಾರೆ.
ಡಾ. ಮೋಹನ್ ಆಳ್ವಾ ಮತ್ತು ವಿವೇಕ್ ಆಳ್ವಾ ಸಾರಥ್ಯ
ಆಳ್ವಾಸ್ ಸಂಸ್ಥೆ ಸಂಸ್ಥಾಪಕ ಡಾ. ಮೋಹನ್ ಆಳ್ವಾ ಅವರ ಕನಸಿನ ಕೂಸು ಈ ಆಳ್ವಾಸ್ ಪ್ರಗತಿ. ವಿದ್ಯೆ ಕಲಿತ ಯುವ ಜನತೆಗೆ ಉದ್ಯೋಗ ಸಿಗಬೇಕು ಎಂಬ ಕಾರಣಕ್ಕೆ ಪ್ರತಿ ವರ್ಷ ದೇಶದಲ್ಲೇ ಅತೀ ದೊಡ್ಡ ಉದ್ಯೋಗ ಮೇಳವನ್ನು ಸಂಸ್ಥೆ ಮಾಡುತ್ತಿದೆ. ಆಳ್ವಾ ಪುತ್ರ ವಿವೇಕ್ ಆಳ್ವಾ ಈ ಆಳ್ವಾಸ್ ಪ್ರಗತಿ ಜವಾಬ್ದಾರಿಯನ್ನು ತಮ್ಮ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ.
ರಿಜಿಸ್ಟರ್ ಹೇಗೆ…?
alvaspragati.com ವೆಬ್ ಮೂಲಕ ತಾವು ರಿಜಿಸ್ಟರ್ ಆಗಬಹುದು.
ಎಸ್ ಎಸ್ ಎಲ್ ಸಿಯಿಂದ ಹಿಡಿದು ಇಂಜಿನಿಯರಿಂಗ್ ಸೇರಿ ದೇಶ ವಿದೇಶದಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ.
ಮಾಹಿತಿಗಾಗಿ:
Alvaspragati.com ವೆಬ್ಸೈಟ್ ವೀಕ್ಷಿಸಿ.
9741440490
9611750531
7975223865
ನೀವೂ ಭಾಗವಹಿಸಿ… ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…!
