Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಮಲಗಿದ್ದಲ್ಲೇ ಮೃತಪಟ್ಟ 23 ವರ್ಷದ ಯುವತಿ!
– ಸುಬ್ರಹ್ಮಣ್ಯ: ಲೂಡೋ ಆಡುವಾಗ ವಿಡಿಯೋ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಆರೋಪ
– ಬಂಟ್ವಾಳ: ಹತ್ಯೆಯಾದ ಸೌಜನ್ಯಾ ತಾಯಿಯನ್ನು ಉದ್ದೇಶಿಸಿ ಆಕ್ಷೇಪಾರ್ಹ ಬರವಣಿಗೆ: ಪ್ರಕರಣ ದಾಖಲು
– ಬೆಳ್ತಂಗಡಿ: ಬೈಕ್‌ಗಳೆರಡು ಮುಖಾಮುಖಿ ಢಿಕ್ಕಿ: ಮಗು ಸಹಿತ ನಾಲ್ವರು ಗಂಭೀರ
– ಉಪ್ಪಿನಂಗಡಿ: ಯುವತಿಯ ಜೊತೆಗಿನ ಪ್ರೀತಿ ವಿಚಾರಕ್ಕೆ ಸಂಬಂಧಿಕರಿಂದ ಯುವಕನ ಮೇಲೆ ಹಲ್ಲೆ

NAMMUR EXPRESS NEWS
ಬಂಟ್ವಾಳ : ಯುವತಿಯೋರ್ವಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ವಗ್ಗ ಸಮೀಪದ ಮದ್ವ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ. ಕಾವಳಮೂಡುರು ಗ್ರಾಮದ ಪುಳಿಮಜಲು ನಿವಾಸಿ ರಾಜ ಅವರ ಪುತ್ರಿ. ಮಿತ್ರ ಶೆಟ್ಟಿ (23) ಮೃತಪಟ್ಟ ಯುವತಿ. ರಾತ್ರಿ ಊಟ ಮಾಡಿ ಮಲಗಿದ ಯುವತಿ ಬೆಳಿಗ್ಗೆ ನೋಡುವಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಈಕೆಯ ತಂದೆ ಮತ್ತು ಸಹೋದರ ಇಬ್ಬರೂ ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಕಾರಣ ಮಿತ್ರ ಮತ್ತು ಈಕೆಯ ತಾಯಿ ಪ್ರಸ್ತುತ ಕಾವಳಪಡೂರು ಗ್ರಾಮದ ಮದ್ವ ಕಂಬಲಡ್ಡದ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದವಳು ಬೆಳಿಗ್ಗೆ ಎದ್ದು ನೋಡುವಾಗ ಎದ್ದೇಳದೇ, ಮಾತನಾಡದೇ ಇದ್ದಾಗ ಆಸ್ಪತ್ರೆಗೆ ಸಾಗಿಸಲಾಗಿ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಬಳಿಕ ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಗಾಗಿ ಕೊಂಡೋಯ್ಯಲಾಗಿದೆ. ಆರಂಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಹೇಳಲಾಗುತ್ತಿತ್ತು. ಆದರೆ ಬ್ರೈನ್ ಎಮರೇಜ್ ನಿಂದಲೂ ಸಾವು ಆಗಿರಬಹುದು ಎಂಬ ಸಂಶಯವಿದ್ದು, ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿದ ಬಳಿಕ ಸಾವಿನ ಸ್ಪಷ್ಟವಾದ ಕಾರಣ ಸಿಗಬಹುದು. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ. ಮಿತ್ರ ಶೆಟ್ಟಿ ಬಿ.ಸಿ.ರೋಡಿನ ವಕೀಲರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅತ್ಯಂತ ಕ್ರಿಯಾಶೀಲ ಯುವತಿಯಾಗಿದ್ದು ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದಳು.

ಸುಬ್ರಹ್ಮಣ್ಯ: ಲೂಡೋ ಆಡುವಾಗ ವಿಡಿಯೋ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಆರೋಪ; ವ್ಯಕ್ತಿಯ ಮೇಲೆ ಮೂವರು ಹಲ್ಲೆ ನಡೆಸಿ ಜೀವಬೆದರಿಕೆ

ಸುಬ್ರಹ್ಮಣ್ಯ: ಲೂಡೋ ಆಡುವಾಗ ಪೊಲೀಸ್ ದಾಳಿ ನಡೆದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರ ಮೇಲೆ “ಪೊಲೀಸ್ ನವರಿಗೆ ನೀನೇ ವಿಡಿಯೋ ಮಾಡಿ ಮಾಹಿತಿ ನೀಡಿರುವುದು’ ಎಂದು ಆರೋಪಿಸಿ ಮೂವರು ಹಲ್ಲೆ ನಡೆಸಿದ ಘಟನೆ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲ್ಲಮೊಗ್ರ ಗ್ರಾಮದ ದಾಖಲಾದ ವ್ಯಕ್ತಿ. ಎ.ಗೋಪಾಲ ಮಣಿಯಾಣಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ. ಆ.28ರ ಸಂಜೆ ವಾಹನದಲ್ಲಿ ಪೇಟೆಗೆ ಹೋಗಿ ಅಲ್ಲಿಂದ ವಾಪಸ್ಸು ತನ್ನ ಮನೆ ಕೊಲ್ಲಮೊಗ್ರು ಗ್ರಾಮದ ಮಿತ್ತೋಡಿ ಎಂಬಲ್ಲಿಗೆ ಹೋಗುವ ಸಂದರ್ಭ ಶಶಿ ತೋಟತ್ತಮಜಲು, ದೇವಿ ತೋಟತ್ತಮಜಲು, ಚಲನ್ ಕೊಪ್ಪಡ್ಕ ಎಂಬವರು ಬೈಕಿನಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, “ನಾವು ಲೂಡೋ ಆಡುವಾಗ ಪೊಲೀಸ್ ನವರಿಗೆ ನೀನೇ ವಿಡಿಯೋ ಮಾಡಿ ಮಾಹಿತಿ ನೀಡಿರುವುದು’ ಎಂದು ಹೇಳಿ ಮೂರು ಜನರು ಸೇರಿಕೊಂಡು ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಚಾರವನ್ನು ಪೊಲೀಸ್‌ ನವರಿಗೆ ಮಾಹಿತಿ ನೀಡಿದರೇ “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದು, ಬಳಿಕ ಹಲ್ಲೆಗೊಳಗಾದ ವ್ಯಕ್ತಿ ತನ್ನ ಮಗಳಿಗೆ ಪೋನ್ ಮೂಲಕ ತಿಳಿಸಿ ತಮ್ಮವಾಹದನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ: ಹತ್ಯೆಯಾದ ಸೌಜನ್ಯಾ ತಾಯಿಯನ್ನು ಉದ್ದೇಶಿಸಿ ಆಕ್ಷೇಪಾರ್ಹ ಬರವಣಿಗೆ: ಪ್ರಕರಣ ದಾಖಲು

ಬಂಟ್ವಾಳ: ಧರ್ಮಸ್ಥಳದಲ್ಲಿ ಹತ್ಯೆಯಾದ ಸೌಜನ್ಯಾ ತಾಯಿಯನ್ನು ಉದ್ದೇಶಿಸಿ ಆಕ್ಷೇಪಾರ್ಹ ಬರವಣಿಗೆ ಹಾಕಿರುವುದಾಗಿ ಕಂಡುಬಂದಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ರಾಘವೇಂದ್ರ ಭಟ್ ಎಂದು ತಿಳಿದುಬಂದಿದೆ. ಆರೋಪಿಯು ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯ ತಾಯಿ ಬಗ್ಗೆ ಆಕ್ಷೇಪಾರ್ಹ ಬರವಣಿಗೆ ಹಾಕಿದ್ದು ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ: ಬೈಕ್‌ಗಳೆರಡು ಮುಖಾಮುಖಿ ಢಿಕ್ಕಿ: ಮಗು ಸಹಿತ ನಾಲ್ವರು ಗಂಭೀರ

ಬೆಳ್ತಂಗಡಿ: ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಗಂಭೀರ ಗಾಯಗೊಂಡ ಘಟನೆ ಮೇಲಂತಬೆಟ್ಟು ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ಪೇಟೆಯಿಂದ ಸವಣಾಲು ಕಡೆಗೆ ತೆರಳುತಿದ್ದ ಬೈಕ್ ಹಾಗೂ ಸವಣಾಲು ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ್ದು ಈ ವೇಳೆ ಒಂದು ಬೈಕ್‌ನಲ್ಲಿದ್ದ 2.5 ವರ್ಷದ ಮಗು, ಮಹಿಳೆ ಹಾಗೂ ಬೈಕ್‌ ಸವಾರ ಮತ್ತು ಇನ್ನೊರ್ವ ಬೈಕ್ ಸವಾರ ಸೇರಿ ನಾಲ್ವರಿಗೂ ಗಂಭೀರ ಗಾಯಗಳಾಗಿದೆ.

ಯುವತಿಯ ಜೊತೆಗಿನ ಪ್ರೀತಿ ವಿಚಾರಕ್ಕೆ ಸಂಬಂಧಿಕರಿಂದ ಯುವಕನ ಮೇಲೆ ಹಲ್ಲೆ

ಉಪ್ಪಿನಂಗಡಿ : ಯುವತಿಯೋರ್ವಳ ವಿಚಾರಕ್ಕೆ ಸಂಬಂಧಿಸಿ ಆಕೆಯ ಸಂಬಂಧಿಕರಿಬ್ಬರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಡ್ನಳ್ಳಿ ಗ್ರಾಮದ ಪುತ್ತೂರು ನಿವಾಸಿ ಸುನೀಲ್ ಕುಮಾರ್ (32) ಹಲ್ಲೆಗೊಳಗಾಗಿದ್ದು, ಪ್ರವೀಣ್ ಹಾಗೂ ಶೇಖರ ಹಲ್ಲೆ ನಡೆಸಿದ ಆರೋಪಿಗಳು. ಸುನೀಲ್ ಅವರು ಉಪ್ಪಿನಂಗಡಿಯ ಪೃಥ್ವಿ ಕಾಂಪ್ಲೆಕ್ಸ್‌ನ ಅಂಗಡಿಯಲ್ಲಿ ಕೆಲಸದಲ್ಲಿರುವ ಸಂದರ್ಭ ಅಲ್ಲಿಗೆ ಬಂದ ಆರೋಪಿಗಳು ಇವರ ಸಂಬಂಧಿಯಾಗಿರುವ ಯುವತಿಯನ್ನು ಸುನೀಲ್‌ ಕುಮಾರ್ ಪ್ರೀತಿಸುವ ವಿಚಾರದಲ್ಲಿ ತಗಾದೆ ತೆಗೆದು, ಅವಾಚ್ಯ ಶಬ್ದಗಳಿಂದ ಬೈದು, ಅಂಗಡಿಯಲ್ಲಿದ್ದ ಸ್ಕೊ ಡ್ರೈವರ್‌ನಿಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುನೀಲ್ ಕುಮಾರ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

ಇದನ್ನೂ ಓದಿ : ಸಿಲಿಂಡರ್ ಬೆಲೆ 200 ರೂ.ಇಳಿಕೆ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.