Categories
ಕಾರ್ಕಳ

ಕ್ರೈಸ್ಟ್ ಕಿಂಗ್ : ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಉತ್ತಮ ಸಾಧನೆ

ಕ್ರೈಸ್ಟ್ ಕಿಂಗ್ : ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಉತ್ತಮ ಸಾಧನೆ
– ಹದಿನಾಲ್ಕು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
– ಕುಸ್ತಿ ಸ್ಪರ್ಧೆಯಲ್ಲಿ ಚಿನ್ನ, ರಜತ ಪದಕಗಳೊಂದಿಗೆ ಕ್ರೈಸ್ಟ್ ಕಿಂಗ್ ವಿದ್ಯಾರ್ಥಿಗಳ ಪ್ರಾಬಲ್ಯ

NAMMUR EXPRESS NEWS
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ಒಟ್ಟು ಹದಿನಾಲ್ಕು ಮಂದಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಂದ ಆಗಿರುವ ಹಾರಿಕೆ ಪಟ್ಟಿಯಲ್ಲಿ – 6ನೇ ತರಗತಿಯ ಮೊಹಮ್ಮದ್ ಅತಿಫ್, 7ನೇ ತರಗತಿಯ ಮಹಮ್ಮದ್ ಅಪ್ರಾಝ್, ಮೊಹಮ್ಮದ್ ಶಬಿತ್, ಮಾನಸ್, ಮೊಹಮ್ಮದ್ ಹಿಶಾಮ್ ಖಾನ್, 8ನೇ ತರಗತಿಯ ಸಾಕ್ಷಿತ್ ಪಿ. ಜೈನ್, ದೃವೀತ್ ಮತ್ತು ಬಾಲಕಿಯರ ವಿಭಾಗದಲ್ಲಿ 6ನೇ ತರಗತಿಯ ಪ್ರೀತಿ, 7ನೇ ತರಗತಿಯ ಸಾದ್ವಿ ನಾಯಕ್, 8ನೇ ತರಗತಿಯ ಸುಧೀಕ್ಷಾ ಸೇರಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ 9ನೇ ತರಗತಿಯ ಕುರಿತು ಫ್ರಾನ್ಸಿಸ್, ಸಾನ್ವಿ ಎಂ ನಾಯಕ್, ಮತ್ತು 10ನೇ ತರಗತಿಯ ರೇಚಲ್ ಡಿ’ಸೋಜ, ಲೆನಿಷಾ ಮೆಂಡೋನ್ಸಾ ಚಿನ್ನದ ಪದಕ, 9ನೇ ತರಗತಿಯ ಅವನಿ ದ್ವಿತೀಯ ಸ್ಥಾನ ಪಡೆದುಕೊಂಡು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದ ದೈಹಿಕ ಶಿಕ್ಷಣ ಶಿಕ್ಷಕಿ ಕು. ಲಾವಣ್ಯ ಶೆಟ್ಟಿಯವರ ಮಾರ್ಗದರ್ಶನವನ್ನು ಶ್ಲಾಘನೆ ಮಾಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.