Categories
ಕಾರ್ಕಳ

ಕ್ರೈಸ್ಟ್ ಕಿಂಗ್ ಹೂಡಿಕೆ ಜಾಗೃತಿ ಮತ್ತು ನಿರ್ವಹಣೆ ಉಪನ್ಯಾಸ ಕಾರ್ಯಕ್ರಮ

ಕ್ರೈಸ್ಟ್ ಕಿಂಗ್ ಹೂಡಿಕೆ ಜಾಗೃತಿ ಮತ್ತು ನಿರ್ವಹಣೆ ಉಪನ್ಯಾಸ ಕಾರ್ಯಕ್ರಮ
– ಭವಿಷ್ಯದ ದೃಷ್ಟಿಯಿಂದ ಸೂಕ್ತ ಯೋಜನೆ ಮತ್ತು ನಿರ್ವಹಣೆ ಹೂಡಿಕೆಯಲ್ಲಿ ಮುಖ್ಯ
– ಚಿನ್ನ, ಷೇರು, ಆಸ್ತಿ ಮತ್ತು ಮ್ಯೂಚ್ವಲ್ ಫಂಡ್‌ಗಳಿಂದ ಭವಿಷ್ಯ ಭದ್ರತೆ

NAMMUR EXPRESS NEWS
ಕಾರ್ಕಳ: ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ “ಹೂಡಿಕೆ ಜಾಗೃತಿ ಮತ್ತು ನಿರ್ವಹಣೆ” ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಹೆಚ್‌ಡಿಎಫ್‌ಸಿ ಮ್ಯೂಚ್ವಲ್ ಫಂಡ್ಸ್ ಉಡುಪಿ ಶಾಖೆಯ ವ್ಯವಸ್ಥಾಪಕ ಪ್ರತಾಪ್ ನಾಯಕ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಭವಿಷ್ಯದ ದೃಷ್ಟಿಯಿಂದ ಹೂಡಿಕೆಯ ಅಗತ್ಯತೆ, ಸೂಕ್ತ ಯೋಜನೆ, ಸಮಯ ಮತ್ತು ನಿರ್ವಹಣೆಯ ಮಹತ್ವವನ್ನು ವಿವರಿಸಿದರು. ಅಜಾಗರೂಕ ಹೂಡಿಕೆ ಆರ್ಥಿಕ ಅಪಾಯ ತರಬಹುದೆಂದು ಎಚ್ಚರಿಸಿ, ಮ್ಯೂಚ್ವಲ್ ಫಂಡ್‌ಗಳಲ್ಲಿ ಹೂಡಿಕೆ ಒಳ್ಳೆಯ ಆಯ್ಕೆಯಾಗಬಹುದು ಎಂದು ಸಲಹೆ ನೀಡಿದರು.

ಸಂಸ್ಥೆಯ ಉಪಪ್ರಾಚಾರ್ಯ ಹಾಗೂ ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ. ಪ್ರಕಾಶ್ ಭಟ್ ಅಧ್ಯಕ್ಷತೆ ವಹಿಸಿ, ಚಿನ್ನ, ಷೇರುಗಳು, ಆಸ್ತಿಗಳು ಮತ್ತು ಮ್ಯೂಚ್ವಲ್ ಫಂಡ್‌ಗಳ ಮೂಲಕ ಭವಿಷ್ಯ ಭದ್ರಗೊಳಿಸುವ ಮಾರ್ಗಗಳನ್ನು ವಿವರಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಜ್ವಲ್ ಶೆಟ್ಟಿ ಸ್ವಾಗತಿಸಿ, ಜಿತೇಶ್ ಪಿಂಟೊ ಅತಿಥಿ ಪರಿಚಯ ಮಾಡಿದರು, ಮದಿಹಾ ಫಾತಿಮ ವಂದಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.