Categories
ಕಾರ್ಕಳ

ರಾಷ್ಟ್ರಮಟ್ಟದ ಅತೀ ಕಠಿಣ ಪರೀಕ್ಷೆಯಲ್ಲಿ ಕ್ರಿಯೇಟಿವ್ ವಿದ್ಯಾರ್ಥಿಗಳಿಗೆ ಗೆಲುವು!

ರಾಷ್ಟ್ರಮಟ್ಟದ ಅತೀ ಕಠಿಣ ಪರೀಕ್ಷೆಯಲ್ಲಿ ಕ್ರಿಯೇಟಿವ್ ವಿದ್ಯಾರ್ಥಿಗಳಿಗೆ ಗೆಲುವು!

* ಜೆ.ಇ.ಇ ಅಡ್ವಾನ್ಸ್ಡ್,  ಕ್ರಿಯೇಟಿವ್‌ ವಿದ್ಯಾರ್ಥಿಗಳ ಸಾಧನೆ
* ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗುರುತರ ಹೆಜ್ಜೆ ಮೂಡಿಸುತ್ತಿರುವ ಕ್ರಿಯೇಟಿವ್!

NAMMUR EXPRESS NEWS
ಕಾರ್ಕಳ: ದೇಶದ ಪ್ರತಿಷ್ಠಿತ IIT, IIST, IIScನಂತಹ ಸಂಸ್ಥೆಗಳಲ್ಲಿ ಬಿ.ಟೆಕ್ B.Tech ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ  ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಕಾಲೇಜು ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಕಾಲೇಜಿನ ಆರಂಭದಿಂದಲೂ ದೇಶದ ಅತ್ಯುತ್ತಮ ತಾಂತ್ರಿಕ ವಿಶ್ವವಿದ್ಯಾನಿಲಯಗಳಲ್ಲಿ ಕ್ರಿಯೇಟಿವ್ ವಿದ್ಯಾರ್ಥಿಗಳು  ದಾಖಲೆಯನ್ನು ಪಡೆಯುತ್ತಿದ್ದು, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಸಂಸ್ಥೆಯು ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

* ಸಾಧನೆ ಮಾಡಿದ ವಿದ್ಯಾರ್ಥಿಗಳ ಪಟ್ಟಿ ಹೀಗಿದೆ!

ಚೇತನ್ ಗೌಡ ಎನ್. ಎಸ್. ಸಾಮಾನ್ಯ ವಿಭಾಗದಲ್ಲಿ 3420 OBC ವರ್ಗದಲ್ಲಿ  639ನೇ ರ‍್ಯಾಂಕ್‌ ,  ತೇಜಸ್ ವಿ ನಾಯಕ್  ಸಾಮಾನ್ಯ ವಿಭಾಗದಲ್ಲಿ 7773 OBC ವರ್ಗದಲ್ಲಿ 1661ನೇ ರ‍್ಯಾಂಕ್‌, ಸಾನಿಕ ಕೆ. ಎನ್. ಸಾಮಾನ್ಯ ವಿಭಾಗದಲ್ಲಿ 9701, ಮೋಹಿತ್ ಎಂ. ಸಾಮಾನ್ಯ ವಿಭಾಗದಲ್ಲಿ 17504  ST ವರ್ಗದಲ್ಲಿ  143ನೇ ರ‍್ಯಾಂಕ್‌,  ಎಂ. ಮಂಜುನಾಥ್ ಸಾಮಾನ್ಯ ವಿಭಾಗದಲ್ಲಿ 20743ನೇ ರ‍್ಯಾಂಕ್‌, ಸಾಚಿ ಶಿವಕುಮಾರ್ ಕಡಿ  24728ನೇ ರ‍್ಯಾಂಕ್‌ , ಶ್ರೀರಕ್ಷಾ 28163ನೇ ರ‍್ಯಾಂಕ್‌ ,  ಯೋಗೇಶ್ ದೀಪಕ್ ನಾಯಕ್ ಸಾಮಾನ್ಯ ವಿಭಾಗದಲ್ಲಿ 31133  OBC ವರ್ಗದಲ್ಲಿ  8989ನೇ ರ‍್ಯಾಂಕ್‌ , ಹರ್ಷಿತ್ ರಾಜು ಹೆಚ್. ಎಂ. ಸಾಮಾನ್ಯ ವಿಭಾಗದಲ್ಲಿ 31140ನೇ ರ‍್ಯಾಂಕ್‌ , ಪ್ರೀತಿ ಸಿ. ಎಲ್. ಸಾಮಾನ್ಯ ವಿಭಾಗದಲ್ಲಿ 31939ನೇ ರ‍್ಯಾಂಕ್‌ OBC ವರ್ಗದಲ್ಲಿ  9271ನೇ ರ‍್ಯಾಂಕ್‌ , ಟಿ ಪ್ರದೀಪ್  ST ವರ್ಗದಲ್ಲಿ 409ನೇ ರ‍್ಯಾಂಕ್‌ , ಮೋನಿಕಾ ಕೆ. ಪಿ. ST ವರ್ಗದಲ್ಲಿ 411ನೇ ರ‍್ಯಾಂಕ್‌ ಮತ್ತು ಪ್ರಜ್ವಲ್ ಡಿ. ಎಂ. SC ವರ್ಗದಲ್ಲಿ 5429ನೇ ರ‍್ಯಾಂಕ್‌ ಗಳಿಸಿ ವಿಶೇಷ ಸಾಧನೆಗೈವ ಮೂಲಕ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವರ್ಗದವರು, ಜೆ.ಇ.ಇ  ಅಡ್ವಾನ್ಸ್ಡ್‌ ಪರೀಕ್ಷೆಯ ಸಂಯೋಜಕರಾದ ತಿರುಮಲ ರೆಡ್ಡಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.