ಸಮದ್ ಖಾನ್ ನೇತೃತ್ವದಲ್ಲಿ ಕಾರ್ಕಳ ಶಾಲೆಗೆ ಉಚಿತ ಕುಡಿಯುವ ನೀರು!
– ಮಗಳ ಹುಟ್ಟುಹಬ್ಬದ ಪ್ರಯುಕ್ತ ಉಚಿತ ನೀರಿನ ಸರಬರಾಜು
– ಕೇಕ್, ಪಾರ್ಟಿ ಬದಲು ಉಚಿತ ನೀರು ಕೊಟ್ಟು ಮಾದರಿ!
– ಕಾರ್ಕಳ ವಿಜೇತ ವಿಶೇಷ ಶಾಲೆಯಲ್ಲಿ ಕಾರ್ಯಕ್ರಮ
NAMMUR EXPRESS NEWS
ಕಾರ್ಕಳ: ಸಮದ್ ಖಾನ್ ಮತ್ತು ಶಗುಪ್ತಾಖಾನ್ ದಂಪತಿಗಳ ಪುತ್ರಿ ಅಲ್ಶಾ ಖಾನ್ ಅವರ ” ಹುಟ್ಟು ಹಬ್ಬದ” ಪ್ರಯುಕ್ತ ಮೇ 6 ರಿಂದ ಮಳೆ ಬರುವ ತನಕ ಅಂದರೆ 20 ರಿಂದ 30 ದಿನಗಳವರೆಗೂ ನೀರಿನ ಅಭಾವವಿರುವ ಸ್ಥಳಗಳಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕಷ್ಟದ ಸಂದರ್ಭದಲ್ಲಿ ನೆರವು ನೀಡುತ್ತಾ ಬರುತ್ತಿರುವ ಜೆಸಿ ಸೇನೆಟರ್ ಸಮದ್ ಖಾನ್ ಅವರು ಈ ವರ್ಷ ಕೂಡ ಜೆ ಸಿ.ಐ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ಜಲ್ವಾ-ಇ-ನೂರ್ ಮದ್ರಸ ಪುಕ್ಕೇರಿ, ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ವಿಜೇತ ವಿಶೇಷ ಶಾಲೆಯಲ್ಲಿ ಉಚಿತವಾಗಿ ಕುಡಿಯುವ ನೀರಿನ ಸರಬರಾಜು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಕುಮಾರ್ ಇವರು ಕಾರ್ಯಕ್ರಮವನ್ನು ನೆರವೇರಿಸಿ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳ ಅಧ್ಯಕ್ಷರು ಜೇಸಿ ಶ್ವೇತಾ ಜೈನ್, ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷರಾದ ರೊಟೇರಿಯನ್ ಇಕ್ಬಾಲ್ ಅಹಮ್ಮದ್, ಶಿವ ಆರ್ಟ್ಸ್ ನ ಮಾಲಕರಾದ ವರದರಾಯ ಪ್ರಭು, ಜಲ್ವಾ-ಇ-ನೂರ್ ಮದ್ರಸ ಪುಕ್ಕೇರಿ, ಕಾರ್ಕಳ ಇದರ ಕಾರ್ಯದರ್ಶಿ ಅಬ್ದುಲ್ಲಾ ಶೇಖ್ ಅದಫ್, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಜೆಸಿಐ ಸದಸ್ಯರು ವಿಗ್ನೇಶ್ ಮತ್ತು ಸುಶ್ಮಿತಾ ದಂಪತಿಗಳು, ಬಾಲಕೃಷ್ಣ ದೇವಾಡಿಗ, ಸುರೇಶ್ ನಾಯಕ್, ರೋಟರಿ ಕ್ಲಬ್ ಕಾರ್ಯದರ್ಶಿ ಗಣೇಶ್ ಸಾಲ್ಯಾನ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ ಕಾಂತಿ ಹರೀಶ್ ಸ್ವಾಗತಿಸಿದರು, ಜೇಸಿ ಶ್ವೇತಾ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಶ್ರೀನಿಧಿ ಅಶೋಕ್ ವಂದಿನೆಯನ್ನು ಅರ್ಪಿಸಿದರು.
