Categories
ಕಾರ್ಕಳ

ಮೇ 6 ಇಂದು ಉಚಿತ ನೀರಿನ ಸರಬರಾಜು ಕಾರ್ಯಕ್ರಮದ ಚಾಲನೆ!

ಮೇ 6 ಇಂದು ಉಚಿತ ನೀರಿನ ಸರಬರಾಜು ಕಾರ್ಯಕ್ರಮದ ಚಾಲನೆ!

– ಕಾರ್ಕಳ ನೀರಿನ ಅಭಾವವಿರುವ ಮನೆಗಳಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ
– ಮಗಳು ಅಲ್ಶಾ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಆಹಾರ ಕಿಟ್ ವಿತರಣೆ

NAMMUR EXPRESS NEWS
ಕಾರ್ಕಳ: ಕಳೆದ 10 ವರ್ಷದಿಂದ “ಮಗಳ ಹುಟ್ಟು ಹಬ್ಬದ” ಪ್ರಯುಕ್ತ ಮೇ 6 ರಿಂದ ಮಳೆ ಬರುವ ತನಕ ಅಂದರೆ 20 ರಿಂದ 30 ದಿನಗಳವರೆಗೂ” ಕಾರ್ಕಳ ಆಸುಪಾಸಿನ “ನೀರಿನ ಅಭಾವವಿರುವ ಮನೆಗಳಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕಷ್ಟದ ಸಂದರ್ಭದಲ್ಲಿ ನೆರವು ನೀಡುತ್ತಾ ಬರುತ್ತಿರುವ ಜೆಸಿ ಸೇನೆಟರ್ ಸಮದ್ ಖಾನ್ ಅವರು ಈ ವರ್ಷ ಕೂಡ ಮೇ 6 ಅಂದರೆ ಉಚಿತ ನೀರಿನ ಸರಬರಾಜು ಕಾರ್ಯಕ್ರಮದ ಚಾಲನೆ, “ವಿಜೇತ ವಿಶೇಷ ಶಾಲೆಯಲ್ಲಿ ಸಂಜೆ 5 ಗಂಟೆಗೆ ಸರಿಯಾಗಿ” ಇತರ ಸಂಸ್ಥೆಗಳಾದ ರೋಟರಿ ಕ್ಲಬ್ ಕಾರ್ಕಳ ಹಾಗೂ ಜಲ್ವ- ಎ – ನೂರ್ ಮದ್ರಸ ಪುಲ್ಕೇರಿ ಕಾರ್ಕಳ ಇವರ ಕೂಡುವಿಕೆಯಲ್ಲಿ , ಹಲವು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.
ಕಾರ್ಯಕ್ರಮದ ನಂತರ ಸಮದ್ ಖಾನ್ ಅವರ ಮಗಳು ಅಲ್ಶಾ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಆಹಾರ ಕಿಟ್ ನೀಡುವ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ 500 ಲೀಟರ್ ನೀರಿನ ಟ್ಯಾಂಕಿಯನ್ನು, ಕೆಲವೇ ದಿನದಲ್ಲಿ ಅಗತ್ಯ ಇರುವ ಮನೆಯನ್ನು ಪರಿಶೀಲಿಸಿ , ಜೇಸಿಐ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ, ಜಲ್ವ – ಎ -ನೂರ್ ಈ 3 ಸಂಸ್ಥೆಯ ವತಿಯಿಂದ ಜೇಸಿ ಸಮದ್ ಖಾನ್ ಅವರ ಪ್ರಾಯೋಜಕತ್ವದಲ್ಲಿ ಹಸ್ತಾಂತರಿಸಲಾಗುವುದು . ಕಾರ್ಯಕ್ರಮದಲ್ಲಿ ತಾವೆಲ್ಲರೂ ಉಪಸ್ಥಿತರಿದ್ದು, ಸಮಾಜಮುಖಿ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.