ಕಾರ್ಕಳ ಲಕ್ಷ್ಮೀಪುರ ದೇವಸ್ಥಾನದಲ್ಲಿ ಅದ್ದೂರಿ ಬ್ರಹ್ಮಕಲಶೋತ್ಸವ!
– ಮೇ. 5ರಿಂದ 12ರವರೆಗೆ ಆಯೋಜನೆ
– ರಂಗೇರಲಿದೆ ಧಾರ್ಮಿಕ ವಿಧಿ ವಿಧಾನಗಳು!
– ಜನರ ಕಣ್ಮನ ಸೆಳೆಯಲಿದೆ ಸಾಂಸ್ಕೃತಿಕ ಝಲಕ್!
NAMMUR EXPRESS NEWS
ಕಾರ್ಕಳ: ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ
ಲಕ್ಷ್ಮೀಪುರದಲ್ಲಿ ಮೇ. 5ರಿಂದ 12ರವರೆಗೆ ಅದ್ದೂರಿ ಬ್ರಹ್ಮಕಲಶೋತ್ಸವ ನಡೆಯಲಿದೆ.
ಗೋವಾದ ಗುರೂಜಿ ಶ್ರೀ ಕಾಳಿದಾಸ ನಾವೈಕರ್ರವರ ನೇತೃತ್ವದಲ್ಲಿ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಿಯ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಸಹಸ್ರ ಚಂಡಿಕಾಯಾಗ ಹಾಗೂ ವರ್ಧಂತ್ಯುತ್ಸವ ಮೇ 05ರ ಸೋಮವಾರದಿಂದ ಮೇ 12ರ ಅತ್ಯಂತ ವೈಭವೋಪೇತವಾಗಿ ನೆರವೇರಲಿದೆ.
ಧಾರ್ಮಿಕ ವಿಧಿ ವಿಧಾನಗಳ ವಿವರ ಹೀಗಿದೆ!
ಮೇ. 04ರಂದು ಆದಿತ್ಯವಾರ ಹಿರ್ಗಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಮೇ. 05ರ ಸೋಮವಾರ ಪ್ರತಿಷ್ಠಾ ಪೂರ್ವಾಂಗ ಸರ್ವ ಪ್ರಾಯಶ್ಚಿತ್ತ ವಿಧಿ ಮತ್ತು ಕೂಷ್ಮಾಂಡ ಹೋಮ ಮಧ್ಯಾಹ್ನ ಬ್ರಾಹ್ಮಣ ಸಂತರ್ಪಣೆ ಕಾಂತಿಪಾಠ, ರಾತ್ರಿ ಭಜನೆ, ಮೇ. 06 ಮಂಗಳವಾರದಂದು ಮಹಾಗಣಪತಿ ಪೂಜೆ, ನಾಂದಿ ಸಹಿತ ಪುಣ್ಯಾಹ ವಾಚನ ಹಾಗೂ ಸಹಸ್ರ ಚಂಡಿಕ ಪಾರಾಯಣ, ಮೇ. 07 ಬುಧವಾರ ಪಂಚಕುಂಡದ ಅಗ್ನಿಸ್ಥಾಪನೆ, ಸಗ್ರಹ ವಾಸ್ತು ಹವನ, ಸಹಸ್ರಚಂಡಿ ಮಂಟಪದಲ್ಲಿ ಸಪ್ತಶತಿ ಪಾರಾಯಣ, ಸಪ್ತಶತಿ ಹವನ ಆರಂಭ, ಲಘು ಪೂರ್ಣಾಹುತಿ, ಮಹಾಪೂಜೆ, ಅನ್ನ ಸಂತರ್ಪಣೆ.
ಮೇ. 08ರಂದು ಗುರುವಾರ ಸಂಹಿತಾ ಪಾರಾಯಣ, ಸ್ಥಳ ಪ್ರಕಾರ ಶುದ್ಧಿ, ಅವಾಹಿತ ದೇವತಾ ಪೂಜೆ. ಮೇ 09 ರ ಶುಕ್ರವಾರ, ದೇವಿಯ ಪ್ರಾಣ ಪ್ರತಿಷ್ಠೆ, ನಾಗದೇವರ ಪ್ರಾಣ ಪ್ರತಿಷ್ಠೆ, ಕಲ್ಕುಡ ದೈವಸ್ಥಾನ ಪುನರ್ ಪ್ರತಿಷ್ಠೆ. ಮೇ 10 ರ ಶನಿವಾರ ಸುಹಾಸಿನಿ ಮತ್ತು ಕುಮಾರಿಕಾ ಪೂಜೆ.
ಮೇ 11ರ ಅದಿತ್ಯವಾರ, ಸಹಸ್ರ ಕುಂಭಾಭಿಷೇಕ, ಸಹಸ್ರ ಚಂಡಿಕಯಾಗದ ಪೂರ್ಣಾಹುತಿ
ಮೇ 12 ರ ಸೋಮವಾರ, ನವಕಲಶಾಭಿಷೇಕ, ಸಂಪ್ರೋಕ್ಷಣೆ ಮಹಾಪೂಜೆ ಅದ್ದೂರಿಯಾಗಿ ಆಯೋಜಿಸಲಾಗಿದೆ.
– ಜನರ ಕಣ್ಮನ ಸೆಳೆಯಲಿದೆ ಸಾಂಸ್ಕೃತಿಕ ಝಲಕ್!
ಮೇ. 04ರಂದು ಆದಿತ್ಯವಾರ ಸಾನ್ವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮತ್ತು ಶಿವಾಂಶ ನಾಯಕ್ ಇವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ.
ಮೇ. 05ರಂದು ಕರ್ನಾಟಕ ಶಾಸ್ತ್ರೀಯ ವಯೋಲಿನ್ ದ್ವಂದ್ವ ವಾದನ, ರಾತ್ರಿ 7: 30ರಿಂದ ಧಾರ್ಮಿಕ ಪ್ರವಚನ.
ಮೇ. 06 ಮಂಗಳವಾರ ಬೆಳಿಗ್ಗೆ ಭಜನೆ, ಮಧ್ಯಾಹ್ನ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಬಹುಮಾನ ವಿತರಣೆ, ಸಂಜೆ ಶ್ರೀರಾಮ ನಿರ್ಯಾಣ.
ಮೇ. 07ರಂದು ಭಗವದ್ಗೀತಾ ಪಠಣ, ಮಧ್ಯಾಹ್ನ ಶ್ರೀ ರಾಮಾಂಜನೇಯ ಯಕ್ಷಗಾನ ಬಯಲಾಟ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು.
ಮೇ. 08 ಮಾತೃ ಸಂಗಮ ಕಾರ್ಯಕ್ರಮ ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ ಶ್ರೀ ಆದಿಶಕ್ತಿ ತೆಂಕುತಿಟ್ಟು ಯಕ್ಷಗಾನ ಮಂಡಳಿ, ಲಕ್ಷ್ಮೀಪುರ ಇದರ ದಶಮಾನೋತ್ಸವ ಕಾರ್ಯಕ್ರಮ ಮತ್ತು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಮೇ. 09ರಂದು ಆರ್ಟ್ ಆಫ್ ಲಿವಿಂಗ್ ಪರಮಪೂಜ್ಯ ಸ್ವಾಮಿ ಸೂರ್ಯಪಾದಜೀ (ಭಾಯಣ್ಣ) ಇವರಿಂದ ದಿವ್ಯ ಸತ್ಸಂಗ ಮಧ್ಯಾಹ್ನ ವಿದ್ಯುನ್ಮತೀ ಕಲ್ಯಾಣ ಯಕ್ಷಗಾನ ಬಯಲಾಟ, ಸಂಜೆ ಜಾನಪದ ವೈಭವ ಜಾನಪದ ಕಲೆಗಳ ಅನಾವರಣ.
ಮೇ.10 ಬೆಳಿಗ್ಗೆ ಯುವ ಸಂಗಮ ಕಾರ್ಯಕ್ರಮ, ಮಧ್ಯಾಹ್ನ ಅರ್ಚಕ ವೃಂದದವರಿಂದ ಭಜನೆ, ದೌಪದಿ ಪ್ರತಾಪ (ಬಡಗುತಿಟ್ಟು) ಯಕ್ಷಗಾನ ಬಯಲಾಟ, ಸಂಜೆ ರುಕ್ಮಿಣಿ ಕಲ್ಯಾಣ ಹರಿಕಥೆ ಪ್ರಾಯೋಜಕರು ಶ್ರೀ ರಾಮಕೃಷ್ಣ ನಾಯಕ್ ಮತ್ತು ಕುಟುಂಬಸ್ಥರು ಪೀಂದ್ರಬೆಟ್ಟು ಹಿರ್ಗಾನ.
ರಾತ್ರಿ ಎಕ ಎವಾ-ಹಸನ್ ದಾವ ಕೊಂಕಣಿ ಹಾಸ್ಯ ಪ್ರದರ್ಶನ ಜನರ ಕಣ್ಮನ ಸೆಳೆಯಲಿದೆ.
ಮೇ. 11ರಂದು ರವಿವಾರ ಬೆಳ್ಳಿಗ್ಗೆ ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ ಲಕ್ಷ್ಮೀಪುರ ಕಾರ್ಕಳ, ಶ್ರೀ ಹರೀಶ ನಾಯಕ್ ಮತ್ತು ಬಳಗ ಕಬ್ಬಾಡಿ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಕಾಡುಹೊಳೆ, ಶ್ರೀ ರಾಮ ಮಂದಿರ ಕೊಡಂಗೆ ಇವರಿಂದ ಭಜನೆ.
ಮಧ್ಯಾಹ್ನ ಭಜನಾ ಕಾರ್ಯಕ್ರಮ,
ಮಧ್ಯಾಹ್ನ ನಾಗಸ್ವರ ವಾದನ ಮತ್ತು ಚಂದ್ರಾವಳಿ ವಿಲಾಸ ಯಕ್ಷಗಾನ ಬಯಲಾಟ.
ರಾತ್ರಿ ಸನಾತನ ನಾಟ್ಯಾಲಯ ಮಂಗಳೂರು ಇವರಿಗೆ ರಾಷ್ಟ್ರದೇವೋಭವ ಪ್ರಯೋಜಕರು ಸಂತೋಷ್ ಭಾಗವ್ ಮುನಿಯಾಲು ಮತ್ತು ಪ್ರಶಾಂತ್ ಪ್ರಭು ಬಜಗೋಳಿ.
ಈ ಎಲ್ಲಾ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಗವದ್ಭಕ್ತರಾದ ತಾವೆಲ್ಲರೂ ಆಗಮಿಸಿ ತನು-ಮನ-ಧನಾದಿಗಳಿಂದ ಸಹಕರಿಸಿ ಶ್ರೀ ದೇವಿಯ ಗಂಧ ಪ್ರಸಾದವನ್ನು ಸ್ವೀಕರಿಸಿ, ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆದರ ಪೂರ್ವಕವಾಗಿ ಆಮಂತ್ರಿಸುತ್ತಿರುವ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿ, ಲಕ್ಷ್ಮೀಪುರ, ಹಾಗೂ ಆಡಳಿತ ಮೊಕ್ತೇಸರರು ಮತ್ತು ಸಹ ಮೊಕ್ತೇಸರರು ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ.
