ಜೆಇಇ ಮೈನ್ ಫಲಿತಾಂಶ: ಜ್ಞಾನಸುಧಾ ಕಾಲೇಜು ಮಿಂಚಿಂಗ್!
– ಜ್ಞಾನಸುಧಾ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ
– 9 ವಿದ್ಯಾರ್ಥಿಗಳಿಗೆ 99% ಪರ್ಸಂಟೈಲ್
NAMMUR EXPRESS NEWS
ಕಾರ್ಕಳ : ಜೆ.ಇ.ಇ ಮೈನ್ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಮಿಂಚಿದ್ದಾರೆ.
ಹೌದು 99ಕ್ಕೂ ಅಧಿಕ ಪರ್ಸಂಟೈಲ್ ಪಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್ ಗಳಿಸಿ ಕಾಲೇಜಿಗೆ ಹೆಮ್ಮೆ ತಂದು ಕೊಟ್ಟಿದ್ದಾರೆ.
ವಿದ್ಯಾರ್ಥಿಗಳಾದ ಆಕಾಶ್ ಎಚ್. ಪ್ರಭು 99.9194206, ಧನುಶ್ ನಾಯಕ್ 99.7330507, ತರುಣ್ ಎ. ಸುರಾನ 99.7329879, ಕೆ. ಮನೋಜ್ ಕಾಮತ್ 99.6811864, ಚಿಂತನ್ ಜೆ. ಮೆಘಾವತ್ 99.6686123, ಹೃತ್ವಿಕ್ ಶೆಟ್ಟಿ 99.6582215, ವೇದಾಂತ್ ಶೆಟ್ಟಿ 99.2929708, ಸತೀಶ್ ಎಸ್. ಕರಗನ್ನಿ 99.1444377 ಪರ್ಸಂಟೈಲ್ ಹಾಗೂ ಅಪೂರ್ವ್ ವಿ. ಕುಮಾರ್ 99.0512045 ಪರ್ಸಂಟೈಲ್ ಪಡೆದು ಸೈ ಎನಿಸಿಕೊಂಡಿದ್ದಾರೆ.
ವಿಷಯವಾರು ಅತ್ಯಧಿಕ ಪರ್ಸಂಟೈಲ್ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ, ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್‌ನೊಂದಿಗೆ ಸರ್ವಜಿತ್ ಕೆ.ಆರ್. ಮತ್ತು ಸಿದ್ಧಾರ್ಥ್ ಎ, ರಸಾಯನಶಾಸ್ತ್ರದಲ್ಲಿ ಅಮರ್ಥ್ಯ ಭಟ್ 99.9714342 ಪರ್ಸಂಟೈಲ್ ಹಾಗೂ ಗಣಿತ ಶಾಸ್ತ್ರದಲ್ಲಿ ಕೆ. ಮನೋಜ್ ಕಾಮತ್ 99.9331666 ಪರ್ಸಂಟೈಲ್ ಪಡೆದಿದ್ದಾರೆ.
ವಿಷಯವಾರು ವಿಭಾಗದಲ್ಲಿ ಸಂಸ್ಥೆಯು, ಭೌತಶಾಸ್ತ್ರದಲ್ಲಿ 34 ಮಂದಿ, ರಸಾಯನಶಾಸ್ತ್ರದಲ್ಲಿ 35 ಮಂದಿ ಹಾಗೂ ಗಣಿತಶಾಸ್ತ್ರದಲ್ಲಿ 7 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ದಾಖಲಿಸಿಕೊಂಡಿದ್ದಾರೆ.
ಉತ್ತಮ ಫಲಿತಾಂಶದೊಂದಿಗೆ ಸೈ ಎನಿಸಿಕೊಂಡ ವಿದ್ಯಾರ್ಥಿಗಳು!
ಜ್ಞಾನಸುಧಾ ಕಾಲೇಜಿನಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ 9, 98 ಪರ್ಸಂಟೈಲ್‌ಗಿಂತ ಅಧಿಕ 30, 97 ಪರ್ಸಂಟೈಲ್‌ಗಿಂತ ಅಧಿಕ 60, 96 ಪರ್ಸಂಟೈಲ್‌ಗಿಂತ ಅಧಿಕ 88, 95 ಪರ್ಸಂಟೈಲ್‌ಗಿಂತ ಅಧಿಕ 117, 90 ಪರ್ಸಂಟೈಲ್‌ಗಿಂತ ಅಧಿಕ 217 ವಿದ್ಯಾರ್ಥಿಗಳು ಉತ್ತಮ ಪರ್ಸಂಟೈಲ್ ಗಳಿಸಿದ್ದಾರೆ.
ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
