Categories
ಕಾರ್ಕಳ

ಕಾರ್ಕಳದ ರಿಯಲ್ ಸ್ಟಾರ್ ‘ಸಮದ್ ಖಾನ್’!

ಕಾರ್ಕಳದ ರಿಯಲ್ ಸ್ಟಾರ್ ‘ಸಮದ್ ಖಾನ್’!
– AL ಗ್ರೂಪ್ಸ್ ಮಾಲೀಕರ ನಿಸ್ವಾರ್ಥ ಸೇವೆಗೆ ಜನರಿಂದ ಮೆಚ್ಚುಗೆ
– ಬಡ ಜನರಿಗೆ ನೀರು, ನೆರಳು, ವಿದ್ಯೆ,ವಿಶೇಷ ಮಕ್ಕಳಿಗೆ ಧನಸಹಾಯ, ವೃದ್ಧಾಶ್ರಮಕ್ಕೆ ಅನ್ನದಾನ ಮಾಡುತ್ತಿರುವ ಪುಣ್ಯಾತ್ಮ
– ಹಲವಾರು ಮಂದಿಗೆ ಉದ್ಯೋಗ ನೀಡುತ್ತಿರುವ ಮೂಲಕ ಉದ್ಯೋಗದಾತ

NAMMUR EXPRESS NEWS
ಸಮಾಜ ಸೇವೆ ಮಾಡುವುದು ಅಂದರೆ ಅದು ದೇವರ ಸೇವೆ ಮಾಡಿದಂತೆ, ಅದು ಒಳ್ಳೆಯ ಮನಸ್ಸು ಇರುವವರಿಂದ ಮಾತ್ರ ಮಾಡುವುದಕ್ಕೆ ಸಾಧ್ಯ…ಇಂದಿನ ಕಾಲದಲ್ಲಿ ತನಗೆ ಮಾತ್ರವಲ್ಲ, ತನ್ನ ಮೂರು ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಸಂಪತ್ತನ್ನು ಕೂಡಿಡುವ ಜನರೇ ಹೆಚ್ಚು. ಆದರೆ ಇದರ ಮಧ್ಯೆ ಈ ವ್ಯಕ್ತಿ ಮಾತ್ರ ಹಾಗಲ್ಲ. ಇವರ ಸೇವೆ ಇದೀಗ ಅನೇಕರಿಗೆ ಮಾದರಿ ಆಗಿದೆ.

ಕಾರ್ಕಳದ “ಸ್ಟಾರ್ ” AL ಗ್ರೂಪ್ಸ್ ಮಾಲೀಕರಾದ ‘ಸಮದ್ ಖಾನ್’

ಹೌದು. AL ಗ್ರೂಪ್ಸ್ ಮಾಲೀಕರಾದ ‘ಸಮದ್ ಖಾನ್’ ರವರ ‘ಸಮಾಜ ಸೇವೆ’ಯನ್ನು ಬರೆಯುತ್ತಾ ಕುಳಿತರೆ ಒಂದು ಪಟ್ಟಿಯೇ ತಯಾರಾಗುತ್ತದೆ. ಹೊಗಳಿಕೆಯನ್ನೂ ಬಯಸದೇ.. ಯಾವುದೇ ಪ್ರಚಾರಕ್ಕಾಗಿ ಶೋಕಿ ಸೇವೆ ಮಾಡದೇ ಇಲ್ಲಿಯವರೆಗೆ ಸುಮಾರು ಹತ್ತು ಹದಿನೈದು ವರ್ಷಗಳ ಕಾಲ ಜನರ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು
ಸಾಮಾನ್ಯವಾಗಿ ಆಧುನಿಕ ಕಾಲದಲ್ಲಿ ಸೇವೆ ಎಂದರೆ ಸೋಶಿಯಲ್ ಮೀಡಿಯಾಗಳ ಶೋಕಿ, ತಾನೂ ಮಾಡುವುದಕ್ಕಿಂತ ತೋರಿಸಿಕೊಳ್ಳುವುದೇ ಹೆಚ್ಚು. ಆದರೆ ಇವರು ಈ ರೀತಿಯ ಪ್ರಚಾರವನ್ನು ಬಯಸುವ ವ್ಯಕ್ತಿತ್ವವಲ್ಲ ತನ್ನಿಂದ ಇತರರಿಗೆ ಒಳಿತಾದರೆ ಸಾಕು ತನಗೇನು ಬೇಡ.. ಎಂದು ಇಲ್ಲಿಯವರೆಗೂ ಎಲ್ಲಿಯೂ ತನ್ನನ್ನು ತಾನೂ ಗುರುತಿಸುಕೊಳ್ಳದೆ, ಇತರರನ್ನು ಬೆಳೆಸಿದ ಜೀವ. ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಕರನ್ನು ಗುರುತಿಸಲು ನಮ್ಮೂರ್ ಎಕ್ಸ್ ಪ್ರೆಸ್ ಫೋಕಸ್ ಎಂಬ ವಿಶೇಷ ಅಂಕಣ ಪ್ರಕಟ ಮಾಡಲಾಗುವುದು.

– ಜನರಿಗೆ ನೆರಳು ನೀಡಿರುವ ಪುಣ್ಯಾತ್ಮ!

ಸಮದ್ ಖಾನ್ ಅವರು ಜೆಸಿಐ ಅಧ್ಯಕ್ಷತೆಯಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿ ಜೊತೆಗೆ ದಿವಂಗತ ತಂದೆಯವರ ಹೆಸರಿನಲ್ಲಿ ತನ್ನದೇ ಖರ್ಚಿನಲ್ಲಿ ಕುಕ್ಕಂದೂರು ಪಂಚಾಯತ್ ಹತ್ತಿರ ಬಸ್ಸು ತಂಗುದಾಣದ ವ್ಯವಸ್ಥೆ ಮಾಡಿ ಜನರಿಗೆ ನೆರಳು ನೀಡಿದ್ದಾರೆ.
ತನ್ನ ಹಾಗೂ ಮನೆಯವರ ಹುಟ್ಟು ಹಬ್ಬದಂದು ವಿಕಲ ಚೇತನ ಮಕ್ಕಳಿಗೆ ಹಾಗೂ ವೃದ್ಧಾಶ್ರಮಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿ ತನ್ನ ಸಂತೋಷವನ್ನು ಅವರೊಂದಿಗೆ ಹಂಚಿಕೊಳ್ಳುವ ವ್ಯಕ್ತಿತ್ವ ಅವರದ್ದಾಗಿದೆ…
ಕಲಿಯಲು ಅಸಾಧ್ಯವಿರುವ ವಿಧ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕೊರತೆ ಬಾರದ ರೀತಿ ಕಲಿಯಲು ಧನ ಸಹಾಯ ನೀಡುವ ಕೆಲಸ ಮಾಡಿರುವ ಸಮದ್ ಖಾನ್ ನ ಸೇವೆ ದಿನ ನಿತ್ಯದ ಕಾಯಕವಾಗಿದೆ.
ಕರೋನಾ ಸಮಯದಲ್ಲಿ ಜನರೆಲ್ಲಾ ದಿಕ್ಕು ದೆಸೆ ಇಲ್ಲದೆ ಕಂಗಲಾಗಿದ್ದ ಸಮಯದಲ್ಲಿ ತಾನು ಹಾಗೂ ತನ್ನ ಗೆಳೆಯನೊಂದಿಗೆ ಸೇರಿ 900ರಿಂದ 1000ರೂ. ತರಕಾರಿ ಕಿಟ್ ವಿತರಣೆಯನ್ನು ಸುದ್ದಿ ಅಥವಾ ಯಾವುದೇ ರೀತಿಯ ಪ್ರಚಾರವಿಲ್ಲದೆ ನೀಡಿದ್ದಾರೆ. ಕಷ್ಟಕ್ಕೆ ನೆರವಾಗಿದ್ದಾರೆ.
ದೀಪಾವಳಿಯಂದು ತನ್ನ ಊರಿನ ರಿಕ್ಷಾ ಚಾಲಕ ಮಾಲಕರಿಗೆ ಗೂಡು ದೀಪ ಹಾಗೂ ಮಿನಿಯೇಚರ್ ದೀಪಾಲಂಕಾರ ನೀಡಿ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ

– ಸಂಘಗಳೊಂದಿಗೆ ಸಮಾಜಕ್ಕೆ ಮಾದರಿ ಕಾರ್ಯ

2016ರಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷರಾಗಿದ್ದು, 2018ರಲ್ಲಿ ವಲಯಾಧಿಕಾರಿ, 2020ರಲ್ಲಿ ವಲಯ ಉಪಾಧ್ಯಕ್ಷರಾಗಿ, 2021ರಲ್ಲಿ ಬ್ಯುಸಿನೆಸ್ ಡೈರೆಕ್ಟರ್ ಆಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ನಂತರ 2024ರಲ್ಲಿ ಜೆ.ಎ.ಸಿ ಉಪ ಅಧ್ಯಕ್ಷರಾಗಿ 2025ರಲ್ಲಿ ಜೆ.ಎ.ಸಿ ಯ “ಪಾರ್ಲಿಮೆಂಟೇರಿಯನ್.”. ಎಂಬ ಸ್ಥಾನದಲ್ಲಿ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
ಇವರು ಜೆಸಿಐ ಇಂಟರ್ನ್ಯಾಷನಲ್ ಗೆ “JCI Senetor ” ಎಂಬ ದೇಣಿಗೆ ನೀಡಿದ್ದರಿಂದ ಇವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿತ್ತಾರೆ ..ಜೊತೆಗೆ ಸುಮಾರು ಮೂರು ವರ್ಷಗಳಿಂದ ರೋಟರಿ ಸಂಘದೊಂದಿಗೆ ಸಹ ತಮ್ಮ ಸೇವಾ ಭಾವವನ್ನು ಮುಂದುವರಿಸಿದ್ದಾರೆ
ಜೆಸಿಐ, ರೋಟರಿ ಹಾಗೂ ಇತರ ಸಂಘಗಳೊಂದಿಗೆ ಅಪಘಾತ ಸ್ಥಳಗಳಲ್ಲಿ ಬ್ಯಾರಿಕೇಡ್ ಇದರ ವ್ಯವಸ್ಥೆ, ಸೂಚನಾ ಫಲಕಗಳ ವ್ಯವಸ್ಥೆ ಕಲ್ಪಿಸಿ ರಸ್ತೆ ಅಪಘಾತ ಆಗದಂತೆ ಸಹಕಾರ ನೀಡಿರುತ್ತಾರೆ

ಯಶಸ್ವಿ ಉದ್ಯಮಿಯಾಗಿ ಹಲವಾರು ಮಂದಿಗೆ ಪ್ರತೀ ವರ್ಷ ಉದ್ಯೋಗವನ್ನು ನೀಡುತ್ತಾ ಬಂದಿದ್ದಾರೆ . ಅಂತಾರಾಷ್ಟ್ರೀಯ ಸಂಸ್ಥೆಗಳಾದ ರೋಟರಿ ಹಾಗೂ ಜೆಸಿಐ ವಲಯದ ಸದಸ್ಯರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಪೂರ್ವಧ್ಯಕ್ಷರಾಗಿ, ಸದಸ್ಯರಾಗಿ ಸೇವೆಯನ್ನು ನೀಡುತ್ತಿದ್ದಾರೆ .

– ಬಡ ಜನರ ಕಷ್ಟಕ್ಕೆ ಮರುಗುವ ಜೀವ!

ಜೆಸಿಐ ಹಾಗೂ ರೋಟರಿ ಸಂಸ್ಥೆಗಳ ಜಂಟಿಯಲ್ಲಿ ಆಟೋರಿಕ್ಷಾ ಚಾಲಕ ಮತ್ತು ಮಾಲಕರಿಗೆ ಖಾಕಿ ಶರ್ಟ್ ಹಾಗೂ “S B Y S” ಸಂಘಕ್ಕೆ ಟೀ ಶರ್ಟ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಸ್ವಾತಂತ್ರ್ಯ ದಿನದಂದು ತನ್ನ ಊರಿನ ಶಾಲೆ ಹಾಗೂ ರಿಕ್ಷಾ ಚಾಲಕರಿಗೆ ಧ್ವಜ ಹಾಗೂ ಮಕ್ಕಳಿಗೆ ಧ್ವಜ, ಬೆಲ್ಟ್ ಮತ್ತು ಬ್ಯಾಜ್ ವಿತರಣೆ ಮಾಡಿದ್ದು, ಊರಿನ ಶಾಲೆ ಹಾಗೂ 5 ಬಡ ಕುಟುಂಬಗಳಿಗೆ ನೀರಿನ ಟ್ಯಾಂಕಿ ವ್ಯವಸ್ಥೆಯನ್ನು ನಿರ್ಮಿಸಿರುತ್ತಾರೆ.ಹಾಗೂ 15 ವರ್ಷಗಳಿಂದ ಪ್ರತಿ ವರ್ಷ ಕೂಡ “ವಿಶೇಷ ಮಕ್ಕಳಿಗೆ “15 ರಿಂದ 20 ಮಕ್ಕಳಿಗೆ 2000 ರಂತೆ ದಾನ ಸಹಾಯ ನೀಡುತ್ತಾ ಬಂದ ಇವರು…
ತಾನೊಬ್ಬ ಮುಸ್ಲಿಂ ಜನಾಂಗಕ್ಕೆ ಸೇರಿದ ವ್ಯಕ್ತಿಯಾಗಿದ್ದರೂ ಕಾರ್ಕಳ ಮಾರಿಗುಡಿಯ ಪುನರ್ ಪ್ರತಿಷ್ಠಾಪಣೆ ಹಾಗೂ ಕಾರ್ಕಳ ಉತ್ಸವ ದಿನದಂದು ಸಾರ್ವಜನಿಕರಿಗೆ ಹಾಗೂ ಸ್ನೇಹಿತನ ಸಹಕಾರದೊಂದಿಗೆ ಮಜ್ಜಿಗೆಯ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಿದ್ದು, ಆಧುನಿಕ ಕಾಲದ ತಾರತಮ್ಯ ಪೀಳಿಗೆಗೆ ಏಕತೆ ಮೆರೆದು ಮಾದರಿಯಾಗಿದ್ದಾರೆ. ……ಇವರ ವಿಶೇಷ ಕಾರ್ಯಕ್ರಮ ಮತ್ತು ಮನಮುಟ್ಟುವ ಕಾರ್ಯಕ್ರಮವೆಂದರೆ
“””10 ವರ್ಷದಿಂದ ತನ್ನ “ಮಗಳ ಹುಟ್ಟು ಹಬ್ಬದ” ಪ್ರಯುಕ್ತ ಮೇ 6 ರಿಂದ ಮಳೆ ಬರುವ ತನಕ ಅಂದರೆ 20 ರಿಂದ 30 ದಿನಗಳವರೆಗೂ” ಕಾರ್ಕಳ ಆಸುಪಾಸಿನ “ನೀರಿನ ಅಭಾವವಿರುವ ಮನೆಗಳಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಬಡ ಜನರ ಪಾಲಿಗೆ ಸಹಕಾರಿಯಾಗಿದ್ದಾರೆ.

– ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಗುರುತಿಸಿಕೊಂಡ “ಜನ ಸೇವಕ”

ಜೆ.ಸಿ.ಐ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ..’ರಾಷ್ಟ್ರೀಯ ಪ್ರಶಸ್ತಿ, ..ವಲಯದಲ್ಲಿ ಸಾಧನಾಶ್ರೀ ಪ್ರಶಸ್ತಿ,.. ಕಮಲಪತ್ರ ಪ್ರಶಸ್ತಿ, …ಸ್ವರ್ಣ ಜೇಸಿ ರತ್ನ ಪ್ರಶಸ್ತಿ, …ಯುವ ಉದ್ಯಮ ಪ್ರಶಸ್ತಿ ಹಾಗೂ ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ “ಸಾಹಿತ್ಯ ಸಮ್ಮೇಳನ” 2024ರಲ್ಲಿ “ಸಾಧನಾ ರತ್ನ” ಪ್ರಶಸ್ತಿ ಹಾಗೂ ಹಲವಾರು ಸನ್ಮಾನ ಮತ್ತು ಪ್ರಶಸ್ತಿ ಪಡೆದ
ಕೀರ್ತಿ ಇವರದ್ದಾಗಿದೆ. ಜೊತೆಗೆ ಹಲವಾರು ಸಂಘ ಸಂಸ್ಥೆಗಳಿಗೆ ವಾರ್ಷಿಕೋತ್ಸವದಂದು ಧನಸಹಾಯ ಮಾಡುವುದು ತಮ್ಮ ನೆರೆಹೊರೆಯ ಮಸೀದಿ, ದೇವಸ್ಥಾನಗಳಿಗೆ. ತುಂಬು ಹೃದಯದಿಂದ ಸಹಾಯ ಧನ ನೀಡಿ ಸಮಾಜಸೇವೆಯನ್ನು ಮಾಡುವ ಇವರನ್ನು ಗುರುತಿಸಿಕೊಳ್ಳಲು ಇಷ್ಟ ಪಡದಿದ್ದರೂ ಗುರುತಿಸುವುದು ನಮ್ಮ ಕರ್ತವ್ಯವಾಗಿದೆ.
ಎಲ್ಲರೊಂದಿಗೆ ಸ್ನೇಹಜೀವಿಯಾಗಿದ್ದು, ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ಸ್ವಭಾವ ಹೊಂದಿರುವ ಅಪರೂಪದ ವ್ಯಕ್ತಿತ್ವ ಎಂದೇ ಹೇಳಬಹುದು. ಇವರನ್ನು ಸದ್ದಿಲ್ಲದೇ ತಮ್ಮ ಪಾಡಿಗೆ ಕೆಲಸ ಮಾಡುವ ಸೇವಕರನ್ನು ಗುರುತಿಸುವ ನಮ್ಮೂರ್ ಎಕ್ಸ್ ಪ್ರೆಸ್ ಫೋಕಸ್ ಅಂಕಣ ಅರ್ಪಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.