Categories
ಕಾರ್ಕಳ

ಅದ್ದೂರಿಯಾಗಿ ಬಿಡುಗಡೆಯಾದ ಲಕ್ಷ್ಮೀಪುರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ!

ಅದ್ದೂರಿಯಾಗಿ ಬಿಡುಗಡೆಯಾದ ಲಕ್ಷ್ಮೀಪುರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ!

– ದೇವಾಲಯಗಳ ಅಭಿವೃದ್ದಿ ಸರ್ವತೋಮುಖ ಅಭಿವೃದ್ದಿಯ ಪ್ರತೀಕ!
– ಬ್ರಹ್ಮಕಲಶೋತ್ಸವ ನಾಡಿನ‌ ಬೆಳವಣಿಗೆಯ ಸಂಕೇತ: ವೇದಮೂರ್ತಿ ಜಗದೀಶ್ ಭಟ್!

NAMMUR EXPRESS NEWS
ಕಾರ್ಕಳ: ಕಾರ್ಕಳ ಹಿರ್ಗಾನದ ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ, ಅಷ್ಟಬಂಧ ಸಹಸ್ರ ಕಲಶ ಬ್ರಹ್ಮಕಲಶಾಭಿಷೇಕ ಮತ್ತು ಸಹಸ್ರ ಚಂಡಿಕಾಯಾಗ ಮತ್ತು ವರ್ಧಂತ್ಯುತ್ಸವದ  ಆಮಂತ್ರಣ ಪತ್ರಿಕೆ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ವೇದಮೂರ್ತಿ ಜಗದೀಶ್ ಭಟ್ ಅವರು ಬ್ರಹ್ಮಕಲಶೋತ್ಸವ ಎನ್ನುವುದು ಸಮಾಜದ ಹಾಗೂ ನಾಡಿನ‌ ಬೆಳವಣಿಗೆಯ ಸಂಕೇತವಾಗಿದೆ. ದೇವರ ಅರಾಧನೆ ಹಾಗೂ ದೇವಾಲಯಗಳ ಅಭಿವೃದ್ದಿ ಸಮಾಜದ ಸರ್ವತೋಮುಖ ಅಭಿವೃದ್ದಿಯ ಪ್ರತೀಕವಾಗಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.
ಸನಾತನ ಧರ್ಮದ  ಆಚರಣೆಗಳು ಹಾಗೂ ಸಂಸ್ಕಾರಗಳು ನಮ್ಮನ್ನು ಉತ್ತಮ ಕಾರ್ಯದೆಡೆಗೆ ಪ್ರೇರೇಪಿಸುತ್ತವೆ ಎಂದು ಹೇಳಿದರು.
ಆಡಳಿತ ಮೊಕ್ತೇಸರರಾದ ಪಾಂಡುರಂಗ ನಾಯಕ್ ಮಾತನಾಡಿ ಬ್ರಹ್ಮಕಲಶೋತ್ಸವದ ಕಾರ್ಯಗಳು
ಉತ್ತಮವಾಗಿ ನಡೆದು, ಸಮಾಜದ ಏಳಿಗೆಯಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಪ್ರಭು ಕಡ್ತಲ ಅವರು ಮಾತನಾಡಿದ್ದು, ಸತೀಶ್ ಅಂಬೇಲ್ಕರ್,ರಾಮದಾಸ್ ನಾಯಕ್ ಮಿಯ್ಯಾರು,ಹಾಡಿಮನೆ ಸುರೇಂದ್ರ ನಾಯಕ್
ಅಶೋಕ್ ನಾಯಕ್ ಹಿರ್ಗಾನ,ಸದಾಶಿವ ಪ್ರಭು ಕಡ್ತಲ ಉಪಸ್ಥಿತರಿದ್ದರು. ನಿತ್ಯಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.